ಬಯಲುಸೀಮೆ ಚಿತ್ರೀಕರಣ ಪೂರ್ಣ

ಎಂಭತ್ತರ ದಶಕ ಮತ್ತು ಈಗಿನ ಕಾಲಮಾನದ ಜುಗಲ್ ಬಂಧಿ ಹೊಂದಿರುವ ತಿರುಳು ಹೊಂದಿರುವ ” ” ಬಯಲು ಸೀಮೆ” ಚಿತ್ರದ ಚಿತ್ರೀಕರಣ ಪೂರ್ಣಗೊಂಡಿದೆ. ಉತ್ತರ ಕರ್ನಾಟಕ ಸೊಗಡಿನ ಕಥೆಯನ್ನು ರಾಜಕೀಯ, ಕ್ರೈಂ‌, ಥ್ರಿಲ್ಲರ್ , ವಿವಾಹೇತರ ಸಂಬಂಧ ಸೇರಿದಂತೆ ಅಂಶಗಳನ್ನು ಚಿತ್ರ ಒಳಗೊಂಡಿದ್ದು ಕುತೂಹಲಕಾರಿ ಅಂಶಗಳನ್ನು ಚಿತ್ರದ ಮೂಲಕ ಕಟ್ಟಿಕೊಡುವ ಪ್ರಯತ್ನ ಮಾಡಲಾಗಿದೆ.

ಪಕ್ಕಾ ರಗಡ್ ಕಥಾನಕ ಹೊಂದಿರೋ ಚಿತ್ರದಲ್ಲಿ ಲಕ್ಷ್ಮಣ್ ಸಾ ಶಿಂಗ್ರಿ ನಿರ್ಮಾಣ ಮಾಡಿದ್ದು ,ವರುಣ್ ಕಟ್ಟೀಮನಿ ನಿರ್ದೇಶನ ಮಾಡಿದ್ದಾರೆ.ಜೊತೆಗೆ ನಿರ್ದೇಶಕರ ಪತ್ನಿ ಸಹ‌ ನಿ್ಮಾರ್ಮಾಪಕಿಯಾಗಿ ಕೈಜೋಡಿಸಿದ್ದಾರೆ.

ಚಿತ್ರವನ್ನು ಗಜೇಂದ್ರಘಡ, ಬೀಳಗಿ ಮುಂಬೈ, ಸೇರಿದಂತೆ ವಿವಿಧ ಭಾಗಗಳಲ್ಲಿ ಚಿತ್ರೀಕರಣ ಮಾಡಲಾಗಿದೆ. ಸದ್ಯ ಚಿತ್ರೀಕರಣ ಮುಗಿದಿದ್ದು ರೀ ರೆಕಾರ್ಡಿಂಗ್ ಸೇರಿದಂತೆ ವಿವಿಧ ಕೆಲಸ ನಡೆಯುತ್ತಿವೆ.ಅದು ಪೂರ್ಣ ಗೊಂಡ ನಂತರ ಚಿತ್ರವನ್ನು ಯಾವಾಗ ತೆರಗೆ ಬರಬೇಕು ಎನ್ನುವ ಕುರಿತು ತಂಡ ನಿರ್ಧಾರ ಕೈಗೊಳ್ಳಲು ಮುಂದಾಗಿದೆ.

ಚಿತ್ರದಲ್ಲಿ ಹಿರಿ ಕಿರಿಯ ಕಲಾವಿದರ ದೊಡ್ಡ ದಂಡೇ‌ ಇದೆ. ಎರಡು ಕಾಲಘಟ್ಟಗಳನ್ನೂ ಉತ್ತರ ಕರ್ನಾಟಕದ ಜವಾರಿ ಶೈಲಿಯಲ್ಲಿ ಕಟ್ಟಿಕೊಟ್ಟಿದ್ದಾರೆ ನಿರ್ದೇಶಕ ವರಣ್ ಕಟ್ಟೀಮನಿ. ಬಯಲು ಸೀಮೆಯ ಕಥೆಯನ್ನು ಜನರಿಗೆ ಮನ ಮುಟ್ಟುವ ರೀತಿ ಕಟ್ಟಿಕೊಡಲಾಗಿದೆ. ರವಿ ಶಂಕರ್ ಮತ್ತು ಟಿ.ಎಸ್ ನಾಗಾಭರಣ ಪ್ರಧಾನ ಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದಾರೆ. ಚಿತ್ರದಲ್ಲಿ ಹಲವು ಅಂಶಗಳಿದ್ದು ಎಷ್ಟು ಬೇಕೋ ಅಷ್ಟು ಬಳಸಿಕೊಂಡ ಇದ್ದೇವೆ ಎಂದರು ನಿರ್ದೇಶಕರು.

ಸಾಹೂರಾವ್ ಶಿಂಧೆ ಎಂಬ ಶ್ರೀಮಂತ ವ್ಯಕ್ತಿಯ ಸುತ್ತ ಬಯಲು ಸೀಮೆಯ ಕಥೆ ಸಾಗಲಿದೆ.. ಆತನ ಸುತ್ತ ನಡೆಯುವ ಅಕ್ರಮ ಸಂಬಂಧ, ಅದರ ಹಿನ್ನೆಲೆಯಲ್ಲಿ ಅರಳಿದ ಲವ್ ಸ್ಟೋರಿ ಹಾಗೂ ಅದರ ಗರ್ಭದಲ್ಲಿಯೇ ಹುಟ್ಟಿಕೊಳ್ಳೋ ರಣ ದ್ವೇಷ… ಕ್ಷಣ ಕ್ಷಣವೂ ಪ್ರೇಕ್ಷಕರನ್ನು ಕೂರಿಸುವಂಥಾ ಗಟ್ಟಿ ಕಥೆಯೊಂದಿಗೆ ಚಿತ್ರತಂಡ ಪ್ರೇಕ್ಷಕರನ್ನು ತುದಿಗಾಲ ಮೇಲೆ‌ನಿಲ್ಲುವಂತೆ ಮಾಡಿದೆ.

ಚಿತ್ರದಲ್ಲಿ ಟಿ.ಎಸ್ ನಾಗಾಭರಣ, ರವಿಶಂಕರ್, ಸಂಯುಕ್ತ ಹೊರನಾಡು, ಯಶ್ ಶೆಟ್ಟಿ, ಭವಾನಿ ಪ್ರಕಾಶ್, ಅರ್ಚನಾ ಕೊಟ್ಟಿಗೆ, ವರುಣ್ ಕಟ್ಟೀಮನಿ, ಲಕ್ಷ್ಮೀ ನಾಡಗೌಡರ್, ಸಂತೋಷ್ ಉಪ್ಪಿನ್, ನಾಗರಾಜ ಭಟ್, ಮಹೇಶ್ ದೊಡ್ಡಕೈನವರ್, ಪ್ರದೀಪ್ ರಾಜ್ ಮುಂತಾದವರಿದ್ದಾರೆ. ಸುಜಯ್ ಕುಮಾರ್ ಬಾವಿಕಟ್ಟಿ ಛಾಯಾಗ್ರಹಣ, ಮಾನಸಾ ಹೊಳ್ಳ ಸಂಗೀತ ನಿರ್ದೇಶನವಿದೆ.