ಬಯಲಾಟ ಮಾಂತ್ರಿಕ ದುಂಡಪ್ಪ ಗುಡ್ಲಾ ಕೊಲ್ಲೂರ ರಾಜ್ಯ ಅಕಾಡೆಮಿ ಪ್ರಶಸ್ತಿಗೆ ಆಯ್ಕೆ

ಕಲಬುರಗಿ.ಸೆ.20:ಕರ್ನಾಟಕ ಬಯಲಾಟ ಅಕಾಡೆಮಿ ಬಾಗಲಕೋಟ ಇವರು 2021-22ನೇ ಸಾಲಿನ ಕೊಡಮಾಡುವ ರಾಜ್ಯ ಬಯಲಾಟ ಅಕಾಡೆಮಿ ವಾರ್ಷಿಕ ಪ್ರಶಸ್ತಿಗೆ ಆಯ್ಕೆಮಾಡಲಾದ ಕಲಬುರಗಿ ಜಿಲ್ಲೇಯ ಚಿತ್ತಾಪೂರ ತಾಲೂಕಿನ ಕೊಲ್ಲೂರ ಗ್ರಾಮದ ಬಯಲಾಟ ಮಾಂತ್ರಿಕ ಶ್ರೀ ದುಂಡಪ್ಪ ಗುಡ್ಲಾ ಬಯಲಾಟ ಮಾಸ್ತರ ಇವರನ್ನು ಕನ್ನಡ ಸಾಹಿತ್ಯ ಪರಿಷತು ಕಲಬುರಗಿ ಮತ್ತು ಕನ್ನಡ ಜಾನಪದ ಪರಿಷತು ಕಲಬುರಗಿ ವತಿಯಿಂದ ಕನ್ನಡ ಭವನ ಕಲಬುರಗಿಯಲ್ಲಿ ಸದರಿಯವರಿಗೆ ಗೌರವ ಸನ್ಮಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.
ಸನ್ಮಾನಿತರನ್ನು ಉದ್ದೇಶೀಸಿ ಕನ್ನಡ ಜಾನಪದ ಪರಿಷತ ಜಿಲ್ಲಾಧ್ಯಕ್ಷರಾದ ಶ್ರೀ ಎಂ.ಬಿ.ನಿಂಗಪ್ಪ ಇವರು ಮಾತನಾಡುತ್ತಾ ಜಾನಪದ ಕಲಾ ಸಂಸ್ಕ್ರತಿಯಲ್ಲಿ ಬಯಲಾಟ ಕಲೆ ಒಂದು ಅತಿ ಮಹತ್ವದಾಗಿದೆ ಇದು ಸಾವಿರಾರು ವಾರ್ಷಿಗಳಿಂದ ಬೆಳದುಬಂದ ಕಲೆ ಈ ಕಲೆಯಿಂದ ಗ್ರಾಮೀಣರ ಬದಕಿನಲ್ಲಿ ಮನರಂಜನೆ ನೀಡುವಂತ ಕಲೆಯಿದಾಗಿದೆ. ಈ ಕಲೆಯ ಮೂಲಕ ಸಾಮಾಜಿ ಪೌರಣಿಕ ಇತಿಹಾಸವುಳ್ಳ ಕತೆಯನ್ನು ರೂಪಿಸಿ ಅದರಲ್ಲಿನ ಪಾತ್ರಗಳ ಅಭಿನಯದ ಮೂಲಕ ಇತಿಹಾಸವನ್ನು ಜನಮಾನಸದಲ್ಲಿ ಬಿತ್ತುವಂತ ಕೆಲಸ ಮಾಡುತ್ತಿದ್ದರು. ಈಗ ಟಿ.ವಿ. ಮಾಧ್ಯಮ ಬಂದನಂತರ ಗ್ರಾಮೀಣ ಕಲೆಗೆ ಬೆಲೆಇಲ್ಲದಂತಾಗಿದೆ. ಈಗಾಗಿ ಗ್ರಾಮೀಣ ಕಲೆ ಮತ್ತು ಕಲಾವಿದರು ಮೂಲಿಗುಂಪಾಗಿದ್ದಾರೆ.ಇಂತ ಕಲೆ ಮತ್ತು ಕಲಾವಿದರು ಉಳಿಯಬೇಕಾದರೆ ಸರಕಾರ ಗಮನಿಸಿ ಇವರಿಗೆ ಮಾಸಾಸನ ಪ್ರಶಿಸ್ತಿ ಪುರಸ್ಕಾರ ನೀಡಿದಾಗ ಕಲೆ ಮತ್ತು ಕಲಾವಿದರು ಉಳಿಯಲಿಕ್ಕೆ ಸಾಧ್ಯಾವಾಗುತ್ತದೆ. ಈಗ ಕೊಲ್ಲೂರಿನ ದುಂಡಪ್ಪ ಗುಡ್ಲಾ ಬಯಲಾಟ ಮಾಸ್ತರ ಇವರಿಗೆ ಈಗಲಾದರು ಸರಕಾರ ಗಮನಿಸಿ ರಾಜ್ಯ ಬಯಲಾಟ ಅಕಾಡೆಮಿ ಪ್ರಶಸ್ತಿಗೆ ಆಯ್ಕೆಮಾಡಿದ್ದಕ್ಕಾಗಿ ಆಕಾಡೆಮಿ ಆಧ್ಯಕ್ಷರಾದ ಶ್ರೀ ಅಜೀತ ಬಸಾಪೂರ ಇವರಿಗೆ ಧ್ಯನವಾದಗಳು ಹೇಳಿದರು ಮತ್ತು ಆಯ್ಕೆಯಾದ ಶ್ರೀ ದುಂಡಪ್ಪ ಗುಡ್ಲಾ ಕೊಲ್ಲೂರು ಇವರು ಸರಳ ಸಜ್ಜನಿಕೆವುಳ್ಳ ವ್ಯಕ್ತಿ ಇವರಲ್ಲಿ ಬಯಲಾಟ ಅದ್ಭತ ಕಲಾ ಸಂಪತ್ತು ಹೊಂದಿದಾರೆ. ಇಂತಹ ಇಳಿವಯಸಿನ ವ್ಯಕ್ತಿಗೆ ಇನ್ನು ಅನೇಕ ಅನೇಕ ಹೆಚ್ಚಿನ ಗೌರವ ಪುರಸ್ಕಾರ ಪ್ರಶಸ್ತಿ ಲಬಿಸಲಿಯಂದು ಹಾರೈಸಿದರು.

ಕನ್ನಡ ಸಾಹಿತ್ಯ ಪರಷತಿನ ಜಿಲ್ಲಾಧ್ಯಕ್ಷರಾದ ಶ್ರೀ ವಿಜಯಕುಮಾರ ಪಾಟೀಲ್ ತೇಗಲತಿಪ್ಪಿಯವರು ಮಾತನಾಡುತ್ತಾ ಗ್ರಾಮೀಣ ಕಲೆ ಸಂಸ್ಕ್ರತಿ ಉಳಿಯಬೇಕಾದರೆ ಇಂತಹ ಕಲಾವಿದರನ್ನು ಸರಕಾರ ಗುರುತಿಸಿ ಗೌರವ ಪ್ರಶಸ್ತಿ ಮಾಶಾಸನ ನೀಡುವುದರಿಂದ ಹೆಚ್ಚು ಕಲಾವಿದರು ಕಲಾಸಂಸ್ಕ್ರತಿ ಜೀವಂತ ಉಳಿಯಲು ಸಾದ್ಯವಾಗುತ್ತದೆ ಇಂತ ಬಡಕುಟುಂಬದಲ್ಲಿ ಹುಟ್ಟಿ ಬಯಲಾಟ ಕಲೆಯನ್ನು ಮೈಗೂಡಿಸಿ ಕೊಂಡು ಕಲಾ ಸೇವೆಮಾಡುತ್ತ ಬಂದ ಕಲಾವಿದರಾದ ಶ್ರೀ ದುಂಡಪ್ಪ ಮಾಸ್ತರ ಇವರಿಗೆ ಪ್ರಶಸ್ತಿಗೆ ಆಯ್ಕೆಮಾಡಲಾದ ಬಯಲಾಟ ಆಕಾಡೆಮಿಯ ಅಧ್ಯಕ್ಷರಿಗೆ ಧನ್ಯವಾದ ಹೇಳಿದರು.
ಇದೆ ಸಂದರ್ಭದಲ್ಲಿ ಕನ್ನಡ ಜಾನಪದ ಪರಿಷತ ಕಾರ್ಯಧ್ಯಕ್ಷರಾದ ಡಾ|| ಸುನೀಲಕುಮಾರ ವಂಟಿ ಜಿಲ್ಲಾ ಪೋಟೊಗ್ರಾಫರ ಅಧ್ಯಕ್ಷರಾದ ಶ್ರೀ ಬಸವರಾಜ ತೋಟದ ಪತ್ರಕರ್ತರಾದ ಶ್ರೀ ಸಂಗಮೇಶ ರೇವತಗಲ್, ಶ್ರೀ ರಾಜೇಂದ್ರ ಮಾಡಬೋಳ, ಶ್ರೀ ಬಸವರಾಜ ಬಳೊರಗಿ, ಶ್ರೀ ಶಿವಶಂಕರ ಕೊಂಬಿನ, ಶ್ರೀ ರಾಜು ಕೊಲ್ಲೂರ ವಿಠಲ ಕಣದಾಳ, ಇನ್ನುಅನೇಕರು ಬಾಗವಹಿಸಿದರು.