ಬಮ್ಮನಹಳ್ಳಿ ಮಳೇಂದ್ರ ಶಿವಾಚಾರ್ಯರ 34 ನೇ ಪುಣ್ಯಸ್ಮರಣೆ ಹಾಗೂ ಜಾತ್ರಾ ಮಹೋತ್ಸವ

ಆಲಮೇಲ:ಮಾ.19:ತಾಲ್ಲೂಕಿನ ಬಮ್ಮನಹಳ್ಳಿ ಗ್ರಾಮದಲ್ಲಿ ಇರುವ ಆಲಮೇಲ ಹೀರೆಮಠದ ಶಾಖಾಮಠದ ಲಿಂ.ಮಳೇಂದ್ರ ಶಿವಾಚಾರ್ಯರ 34ನೇ ಪುಣ್ಯಸ್ಮರಣೆಯ ಅಂಗವಾಗಿ ಜಾತ್ರಾ ಮಹೋತ್ಸವ ಹಮ್ಮಿಕೊಂಡಿದ್ದು. ಇದೆ ಮಾ.21 ಮತ್ತು 22 ರಂದು ವಿವಿಧ ಕಾರ್ಯಕ್ರಮಗಳು ನಡೆಯಲಿವೆ ಎಂದು ಮಠದ ಒಡೆಯರಾದ ಚಂದ್ರಶೇಖರ ಶಿವಾಚಾರ್ಯರು ತಿಳಿಸಿದ್ದಾರೆ.

ಮಾ.21 ರವಿವಾರ ಬೆಳಗ್ಗೆ 6 ಗಂಟೆಗೆ ಬ್ರಾಹ್ಮೀ ಮಹೂರ್ತದಲ್ಲಿ ಕತೃ ಗದ್ದುಗೆಗೆ ಮಹಾ ರುದ್ರಾಭಿಷೇಕ ಸಹಸ್ರ ಬಿಲ್ವಾರ್ಚನೆ ನಡೆಯಲಿದ್ದು ಸಂಜೆ 7 ಗಂಟೆಗೆ ಧರ್ಮಸಭೆ ನಡೆಯಲಿದೆ, ಗುರುಲಿಂಗ ಶಿವಾಚಾರ್ಯರು, ಜಡೆಶಾಂತಲಿಂಗ ಶಿವಾಚಾರ್ಯರು, ಅಭಿನವ ರುದ್ರಮುನಿ ಶಿವಾಚಾರ್ಯರು, ಅಮೃತಲಿಂಗ ಶಿವಾಚಾರ್ಯರು ಸೇರಿದಂತೆ ವಿವಿಧ ಮಠಾಧೀಶರು ಮತ್ತು ರಾಜಕೀಯ ಮುಖಂಡರು ಭಾಗವಹಿಸಲಿದ್ದಾರೆ. ನಂತರ ಮರು ದಿನ ಸೋಮವಾರ 22 ರಂದು ಬೆಳಿಗ್ಗೆ 10 ಗಂಟೆಗೆ ಸಾಮೂಹಿಕ ವಿವಾಹ ಹಾಗೂ ಧರ್ಮಸಭೆ ಕಾರ್ಯಕ್ರಮ ನಡೆಲಿದ್ದು ಅಫಜಲಪೂರ ಹೀರೆಮಠದ ವಿಶ್ವರಾಧ್ಯ ಮಳೇಂದ್ರ ಶಿವಾಚಾರ್ಯರು, ಅಭಿನವ ಮುರುಘೇಂದ್ರ ಮಹಾಸ್ವಾಮಿಜಿಗಳು ಸೇರಿದಂತೆ ವಿವಿಧ ಮಠಾಧೀಶರು, ರಾಜಕಾರಣಿಗಳು ಭಾಗವಹಿಸಲಿದ್ದಾರೆ ಭಕ್ತರು ಶ್ರೀಮಠದ ಜಾತ್ರೆಯಲ್ಲಿ ಕರೋನಾ ನಿಯಮದ ಪ್ರಕಾರ ಮಾಸ್ಕ್ ಧರಿಸಿ ಭಾಗಿಯಾಗಬೇಕು ನಿಮ್ಮ ಆರೋಗ್ಯವೇ ನಮಗೆ ಮುಖ್ಯ ಎಂದು ಅವರು ಪತ್ರಿಕಾ ಪ್ರಕಟಣೆಯ ಮೂಲಕ ತಿಳಿಸಿದ್ದಾರೆ.