ಬಮ್ಮನಹಳ್ಳಿಗೆ ಪ್ರೌಢಶಾಲೆ ಕಟ್ಟಡಕ್ಕೆ ನೆರವು

ಆಲಮೇಲ:ನ.23: ಬಮ್ಮನಹಳ್ಳಿ ಗ್ರಾಮದ ಪ್ರೌಢಶಾಲೆಯ ಕಟ್ಟಡ ನಿರ್ಮಾಣಕ್ಕೆ ಹಣ ಮಂಜೂರು ಮಾಡುವದಾಗಿ ಶಾಸಕ ರಮೇಶ ಭೂಸನೂರ ಹೇಳಿದರು.
ತಾಲ್ಲೂಕಿನ ಬಮ್ಮನಹಳ್ಳಿ ಗ್ರಾಮದಲ್ಲಿ ನಡೆದ ಬಮ್ಮನಹಳ್ಳಿ ಆಲಮೇಲ ರಸ್ತೆ ಭೂಮಿ ಪೂಜೆ ನೆರವೇರಿಸಿ ಮಾತನಾಡುತ್ತಿದ್ದರು. ಇಲ್ಲಿನ ಸರಕಾರಿ ಪ್ರೌಢಶಾಲೆಗೆ ಕಟ್ಟಡದ ಕೊರತೆ ಇದೆ ಗ್ರಾಮಸ್ಥರು ಜಾಗ ನೀಡಿ ಸಹಕರಿಸಿದರೆ ಅದರ ಕಟ್ಟಡ ನಿರ್ಮಿಸಲು ಸರಕಾರದಿಂದ ಹಣ ಮಂಜೂರು ಮಾಡಿಸಿ ಸುಸಜ್ಜಿತ ಕಟ್ಟಡ ನಿರ್ಮಿಸುವದಾಗಿ ಹೇಳಿದರು. 4.33 ಕೋಟಿ ರೂ.ವೆಚ್ಚದಲ್ಲಿ ರಸ್ತೆ ನಿರ್ಮಿಸಲಾಗುತ್ತಿದೆ ಈ ರಸ್ತೆ ನಿರ್ಮಾಣದಿಂದ ಬಮ್ಮನಹಳ್ಳಿಯಿಂದ ಆಲಮೇಲಕ್ಕೆ ತೆರಳುವ ರಸ್ತೆ ಮಾರ್ಗದಲ್ಲಿ ಸುಮಾರು 5 ರಿಂದ 7 ಕಿಮಿ ರಸ್ತೆ ಸಂಚಾರ ಕಡಿಮೆಯಗುವದು ಇದು ಪ್ರಯಾಣಿಕರ ಸಮಯ ಮತ್ತು ವೆಚ್ಚವನ್ನು ಉಳಿಸುತ್ತದೆ ಎಂದರು.
ಮುಖಂಡ ಬಿ.ಎಚ್.ಬಿರಾದಾರ ಮಾತನಾಡಿ ಚುನಾವಣೆಯಲ್ಲಿ ನೀಡಿದ ಭರವಸೆಗಳಂತೆ ಪ್ರತಿ ಗ್ರಾಮಗಳ ರಸ್ತೆ ಸುಧಾರಣೆಗೆ ಶಾಸಕರು ಕ್ರಮ ಕೈಗೊಂಡಿದ್ದಾರೆ ರೈತರು, ಸಾರ್ವಜನಿಕರು ಗುತ್ತಿಗೆದಾರರೊಂದಿಗೆ ಸಹಕಾರ ನೀಡಬೇಕು, ಗುತ್ತಿಗೆದಾರರು ರಸ್ತೆಯ ಗುಣಮಟ್ಟ ಉತ್ತಮವಾಗಿರುವಂತೆ ನೋಡಿಕೊಳ್ಳಬೇಕು ಎಂದರು.
ವೇ.ಸಂಗಯ್ಯ ಹಿರೇಮಠ, ಚಂದ್ರಕಾಂತ ಸಗರ, ಸಿದ್ದು ಸಗರ, ಬಲವಂತ್ರಾಯಗೌಡ ಬಿರಾದಾರ, ಬಸವರಾಜ ಬಿರಾದಾರ, ರವಿಕಾಂತ ನಾಯ್ಕೋಡಿ, ಗುರುಪಾದಪ್ಪ ಭಾಸಗಿ, ಆರ್.ಎನ್.ಕುಲಕರ್ಣಿ, ತಾರಾಸಿಂಗ ದೊಡ್ಡಮನಿ, ರಾಜಕುಮಾರ ಬಿರಾದಾರ ಇದ್ದರು