ಬಬ್ಬೂರು ಆರ್. ನವೀನ್ ಕುಮಾರ್ ಗೆ ಪಿ.ಹೆಚ್.ಡಿ  ಪ್ರಧಾನ 

ಹಿರಿಯೂರು.ಜೂ.14-  ಹಿರಿಯೂರು ತಾಲೂಕಿನ ಬಬ್ಬೂರು ಗ್ರಾಮದ ಶ್ರೀಯುತ ರಂಗಸ್ವಾಮಿಯವರ ಪುತ್ರ ಆರ್ ನವೀನ್ ಕುಮಾರ್ ಇವರು ದಾವಣಗೆರೆ ವಿಶ್ವವಿದ್ಯಾನಿಲಯದಲ್ಲಿ ಗಣಿತಶಾಸ್ತ್ರ ವಿಭಾಗದ ಪ್ರೊ. ಬಿ. ಸಿ ಪ್ರಸನ್ನ ಕುಮಾರ್ ಇವರ ಮಾರ್ಗದರ್ಶನದಲ್ಲಿ ನ್ಯೂಮರಿಕಲ್ ಸಿಮ್ಯುಲೇಷನ್ ಅಂಡ್ ಮ್ಯಾಥಮೆಟಿಕಲ್ ಮಾಡಲಿಂಗ್ ಆಫ್ ಫ್ಲೋಸ್ ಆಫ್ ನಾನ್ ನ್ಯೂಟಾನಿಯನ್ ಫ್ಲೂಯಿಡ್ಸ್ ವಿಷಯದಲ್ಲಿ ಮಂಡಿಸಿದ್ದ ಪ್ರಬಂಧಕ್ಕೆ ದಾವಣಗೆರೆ ವಿಶ್ವವಿದ್ಯಾನಿಲಯದ ವತಿಯಿಂದ ಪಿ.ಹೆಚ್.ಡಿ ಪದವಿ ಪ್ರಧಾನ ಮಾಡಲಾಗಿದೆ. ನವೀನ್ ಕುಮಾರ್ ರವರಿಗೆ ವಿಭಾಗದ ಅಧ್ಯಕ್ಷರಾದ ಪ್ರೊ. ಡಿ. ಜಿ. ಪ್ರಕಾಶ ಹಾಗೂ ಪ್ರಾಧ್ಯಾಪಕರು  ಅಭಿನಂದಿಸಿದ್ದಾರೆ.