ಬಬಲಾದ ಮಠದಲ್ಲಿ ಮುಂಗಾರು ಕೃಷಿ ಹಬ್ಬ

ಕಲಬುರಗಿ :ಜೂ.4: ನಗರದ ಭವಾನಿ ನಗರದಲ್ಲಿರುವ ಬಬಲಾದ ಮಠದಲ್ಲಿ ದಿನಾಂಕ 6/06/2023 ರಂದು ಸಾಯಂಕಾಲ 6 ಗಂಟೆಗೆ ಶ್ರೀಮಠದ ಪೀಠಾಧಿಪತಿಗಳಾದ ಪೂಜ್ಯ ಶ್ರೀ ಗುರುಪಾದಲಿಂಗ ಮಹಾಸ್ವಾಮಿಗಳ ನೇತೃತ್ವದಲ್ಲಿ ಸಿರಿ ಧಾನ್ಯ ವಿತರಣೆ, ಸಸಿ ವಿತರಣೆ, ಪ್ರಗತಿಪರ ರೈತರಿಗೆ ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸನ್ಮಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ಕಾರ್ಯಕ್ರಮದ ಸಾನಿಧ್ಯ ಶಹಾಬಜಾರ
ಚವದಾಪುರಿ ಹಿರೇಮಠದ ಪೀಠಾಧಿಪತಿಗಳಾದ ಪೂಜ್ಯ ಶ್ರೀ ರಾಜಶೇಖರ ಶಿವಾಚಾರ್ಯರು ವಹಿಸುವರು. ಕಾರ್ಯಕ್ರಮದ ಸಮ್ಮುಖ ರಟಗಲ ವಿರಕ್ತ ಮಠದ ಪೂಜ್ಯ ಶ್ರೀ ಸಿದ್ದರಾಮ ಮಹಾಸ್ವಾಮಿಗಳು, ಶರಣ ಶಿರಸಗಿಯ ಸಿದ್ದರಾಮ ದೇವರು ವಹಿಸುವರು. ಮುಖ್ಯ ಅತಿಥಿಗಳಾಗಿ ಮಹಾನಗರ ಪಾಲಿಕೆ ಸದಸ್ಯರಾದ ಶ್ರೀಮತಿ ಗಂಗಮ್ಮ ಬಸವರಾಜ ಮುನ್ನಳ್ಳಿ, ಡಿಸಿಸಿ ಬ್ಯಾಂಕ ನಿರ್ದೇಶಕರಾದ ಶ್ರೀ ಶರಣಬಸಪ್ಪ ಪಾಟೀಲ ಅಷ್ಟಗಿ ಸೇರಿದಂತೆ ಅನೇಕ ಜನ ಪೂಜ್ಯರು, ಮುಖಂಡರು, ಸಮಾಜ ಸೇವಕರು ಶ್ರೀ ಮಠದ ಭಕ್ತರು ಭಾಗವಹಿಸಲಿದ್ದಾರೆ. ಇದೇ ಸಂದರ್ಭದಲ್ಲಿ ಪ್ರಗತಿಪರ ರೈತರಾದ ಲಕ್ಷ್ಮಿಕಾಂತ ಹಿಬಾರೆ ಹಾಗರಗಾ, ಮಹಾದೇವಪ್ಪ ಉಪಳಾಂವ ನಾಗೂರ, ಶಂಭುಲಿಂಗಪ್ಪ ಉಪ್ಪಿನ ನಾಗೂರ, ಸಿದ್ದು ದೇವಣಿ ದೇವನ ತೆಗನೂರ, ಸಿದ್ದರಾಮಪ್ಪ ಕೋರೆ ಹಾಗೂ ಹತ್ತನೇ ತರಗತಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಸನ್ಮಾನಿಸಲಾಗುವದು. ಕಾರ್ಯಕ್ರಮದಲ್ಲಿ ಸರ್ವಭಕ್ತರು ಭಾಗವಹಿಸಿ ಯಶಸ್ವಿಗೊಳಿಸಬೇಕೆಂದು ಶ್ರೀಮಠದ ವತಿಯಿಂದ ತಿಳಿಸಿದ್ದಾರೆ.