ಬಬಲಾದ ಮಠದಲ್ಲಿ ಪಲ್ಲಕ್ಕಿ ಉತ್ಸವ

ಕಲಬುರಗಿ:ಸೆ.20: ಶ್ರಾವಣ ನಿಮಿತ್ತ ಭವಾನಿ ನಗರದ ಶ್ರೀಗುರು ಚನ್ನವೀರೇಶ್ವರ ಮಠದಲ್ಲಿ ತಿಂಗಳ ನಡೆದ ಲಿಂ. ಚನ್ನವೀರ ಶಿವಯೋಗಳ ಪುರಾಣ ಮಹಾಮಂಗಲೋತ್ಸವ ಸೋಮವಾರ ಸಹಸ್ರಾರು ಭಕ್ತರ ಜೈಘೋಷಣೆಗಳ ಮಧ್ಯೆ ಅದ್ದೂರಿ ಪಲ್ಲಕ್ಕಿ ಉತ್ಸವದೊಂದಿಗೆ ಅದ್ದೂರಿ ನಡೆಯಿತು.
ಮಠದ ಪೀಠಾ„ಪತಿ ಶ್ರೀ ಗುರುಪಾದಲಿಂಗ ಶಿವಯೋಗಿಳ ನೇತೃತ್ವದಲ್ಲಿ ಬೆಳಗ್ಗೆ ಶ್ರೀ ಚನ್ನವೀರ ಶಿವಯೋಗಿಗಳ ಕರ್ತೃ ಗದ್ದುಗೆಗೆ ಮಹಾರುದ್ರಾಭಿಷೇಕ, ಸಹಸ್ರಾ ಬಿಲ್ವಾರ್ಚನೆ, ಮಹಾ ಮಂಗಳಾರುತಿ ನಂತರ ಷಟಸ್ಥಲ ಧ್ವಜಾರೋಹಣ ನೆರವೇರಿಸಲಾಯಿತು.
ಚನ್ನವೀರ ನಗರದಿಂದ ಆಗಮಿಸಿದ ಪಲ್ಲಕ್ಕಿಯಲ್ಲಿ ಶ್ರೀ ಲಿಂ. ಗುರು ಚನ್ನವೀರ ಶಿವಯೋಗಿಗಳ ಭಾವಚಿತ್ರ ಇಟ್ಟ ನಂತರ ಉತ್ಸವಕ್ಕೆ ಚಾಲನೆ ದೊರೆಯಿತು. ಶ್ರೀಮಠದಿಂದ ಪ್ರಾರಂಭವಾಗಿ ರಾಮನಗರ ಕ್ರಾಸ್, ಭವಾನಿನಗರ, ಪೂಜಾರಿ ಮಠದ ವೃತ್ತ, ಕಾಕಡೆ ಚೌಕ್ ಮಾರ್ಗವಾಗಿ ಸಂಜೆ ವೇಳೆಗೆ ಮಠಕ್ಕೆ ತಲುಪಿತು. ನಂತರ ಪೂಜಾ ಕೈಂಕರ್ಯ, ಮಹಾಮಂಗಳಾರುತಿ ಮಾಡಿ, ಮಂಗಲೋತ್ಸವ ಸಂಪನ್ನವಾಯಿತು.
ಪುರಾಣದಲ್ಲಿ ಸೇವೆ ಸಲ್ಲಿಸಿದ ಭಕ್ತರಿಗೆ ಹಾಗೂ ಪುರಾಣಿಕರಾದ ಶಿವಬಸಯ್ಯ ಶಾಸ್ತ್ರಿ, ಗವಾಯಿ ಶಿವಲಿಂಗಯ್ಯ, ತಬಲಾವಾದಕ ಮಲ್ಲಿಕಾರ್ಜುನ ವರನಾಳ ಅವರನ್ನು ಪೂಜ್ಯ ಶ್ರೀ ಗುರುಪಾದಲಿಂಗ ಶಿವಯೋಗಿಗಳು ಸನ್ಮಾನಿಸಿ, ಗೌರವಿಸಲಾಯಿತು. ನಂತರ ಭಕ್ತರಿಂದ ಶ್ರೀಗಳ ತುಲಾಭಾರ ನೆರವೇರಿತು.
ಮಕ್ತಂಪುರ ಶ್ರೀ ಶಿವಾನಂದ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಕಾಂಗ್ರೆಸ್ ಮುಖಂಡ ನೀಲಕಂಠರಾವ ಮೂಲಗೆ, ಡಿಸಿಸಿ ಬ್ಯಾಂಕ್ ನಿರ್ದೇಶಕ ಶರಣಬಸಪ್ಪ ಪಾಟೀಲ್ ಅಷ್ಟಗಿ, ಪಾಲಿಕೆ ಸದಸ್ಯೆ ಗಂಗಮ್ಮ ಮುನ್ನೊಳ್ಳಿ, ಬಸವರಾಜ ಮುನ್ನೋಳ್ಳಿ, ಶಾಂತು ದುಧನಿ, ಬಸವರಾಜ ಮಚ್ಚಟ್ಟಿ, ಸುಖದೇವ ಪೂಜÁರಿ, ಸಂತೋಷ ಸಂಗೋಳ್ಳಿ, ರವಿ ಮಹಾಗಾವ, ಮಾಣಿಕರಾವ ಮಿರಕಲ್, ವಿಠ್ಠಲರಾವ ಗೋಗಿ, ಶಿವಶರಣಪ್ಪ ಗೋಗಿ, ಸಿದ್ದು ಸಂಗೋಳಗಿ, ಶಿವಶರಣಯ್ಯ ಸ್ವಾಮಿ ಕೊಟ್ಟರಗಿ, ವಿನೋದ ಕೊರೆಜಿ, ಚಂದ್ರಕಾಂತ ಹಸರಗುಂಡಗಿ,ಸಂಗನಗೌಡ ಪಾಟೀಲ್, ರೇವಣಸಿದ್ದಯ್ಯ ಶಾಸ್ತ್ರಿ, ರಾಜು ರೆಡ್ಡಿ, ಶರಣಪ್ಪ ರಾವೂರು, ಶಿವರಾಜ ಬಾಳಖೇಡ, ಸಿದ್ದು ತಾಳಮಡಗಿ, ಶರಣು ವರನಾಳ, ಸುನಿಲ ಪೂಜಾರಿ, ಬಸವರಾಜ ಬುಕ್ಕಾ, ರಾಜು ಜಾಬಶೆಟ್ಟಿ, ಚನ್ನವೀರ ಹಿರೇಮಠ ಸೇರಿ ಇತರರಿದ್ದರು.