ಬಬಲಾದ ಬೃಹನ್ಮಠದಲ್ಲಿ ಉಚಿತ ಆರೋಗ್ಯ ಶಿಬಿರ

ಕಲಬುರಗಿ,ಮಾ 26: ಬಬಲಾದ ಬೃಹನ್ಮಠದ ಮಲ್ಲಿಕಾರ್ಜುನ ಜಾತ್ರಾ ಮಹೋತ್ಸವ ನಿಮಿತ್ತ ಉಚಿತ ಆರೋಗ್ಯ ಹಾಗೂ ನೇತ್ರ ಚಿಕಿತ್ಸಾ ಶಿಬಿರ ಏರ್ಪಡಿಸಲಾಗಿತ್ತು. ಕಲಬುರಗಿಯ ಯನೈಟೆಡ್ ಆಸ್ಪತ್ರೆ , ಅನುಗ್ರಹ ಕಣ್ಣಿನ ಆಸ್ಪತ್ರೆ ಸಹಯೋಗದೊಂದಿಗೆ ಶಿಬಿರ ನಡೆಸಲಾಯಿತು. ಡಾ.ಸಂಜನಾ ಪಾಟೀಲ ತಳ್ಳುರ ಶಿಬಿರ ಉದ್ಘಾಟಿಸಿದರು.ಮಠಾಧೀಶರಾದ ಶಿವಮೂರ್ತಿ ಶಿವಾಚಾರ್ಯರು ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು. ಮುಖ್ಯ ಅತಿಥಿಗಳಾಗಿ ಎಂ ಎಸ್ ಪಾಟೀಲ್ ನರಿಬೋಳ,ಮಂಜುನಾಥ್ ಕಾಳೆ,
ಪ್ರಕಾಶ್ ಸಜ್ಜನ್ ,ಅನುಗ್ರಹ ಹಾಸ್ಪಿಟಲ್‍ನ ಡಾ ಪ್ರಿಯಾಂಕ ,ಯುನೈಟೆಡ್ ಆಸ್ಪತ್ರೆಯ ಲಕ್ಷ್ಮೀಕಾಂತ್ ,ರಾಜ್ ಗೋಪಾಲ್ ಮಾಲು,
ಎಸ್ ಜಿ ಪಾಟೀಲ್, ರುದ್ರೇಶ್ ಇನ್ನಿತರರು ಪಾಲ್ಗೊಂಡಿದ್ದರು.