ಬಪ್ಪುರು ಸರ್ಕಾರಿ ಭೂಮಿಯಲ್ಲಿ ಅನಧಿಕೃತ ಸಾಗುವಳಿ

ಸಿಂಧನೂರು.ಜೂ.೨೩-ಸರ್ಕಾರ ದ ಭೂಮಿಯಲ್ಲಿ ಕೆಲವರು ಅನಧಿಕೃತವಾಗಿ ಸಾಗುವಳಿ ಮಾಡುತ್ತಿದ್ದು ಸಾಗುವಳಿದಾರರ ಮೇಲೆ ಕಾನೂನು ಕ್ರಮ ತೆಗೆದುಕೊಂಡು ಸರಕಾರದ ಭೂಮಿಯನ್ನು ಸರಕಾರ ತನ್ನ ಸ್ವಾಧೀನಕ್ಕೆ ತೆಗೆದುಕೊಳ್ಳಬೇಕು ಎಂದು ಗ್ರಾಮಸ್ಥರು ತಹಶೀಲ್ದಾರರಿಗೆ ದೂರು ನೀಡಿದರೂ ಸಹ ಯಾವುದೇ ಪ್ರಯೋಜನವಾಗಿಲ್ಲ.
ತಾಲೂಕಿನ ಬಪ್ಪುರು ಗ್ರಾಮದ ಸರ್ವೇ ನಂ ೮೮ ರಲ್ಲಿ ೨೭ ಎಕರೆ ಸರಕಾರಿ ಇನಾಮು ಭೂಮಿಯಲ್ಲಿ ಅದೇ ಗ್ರಾಮದ ಪಿಂಜಾರ ಸಮಾಜದ ೪ ಜನರಿಗೆ ಭೂಮಿ ಹಂಚಿಕೆ ಮಾಡಿ ಈಗ ೮ ಎಕರೆ ೨೮ ಗುಂಟೆ ಸರಕಾರಿ ಇನಾಮು ಭೂಮಿ ಉಳಿದಿದ್ದು ಇದನ್ನು ಎಸ್ ಎಸ್ಸಿ ಎಸ್ಟಿ ಜನರಿಗೆ ಭೂಮಿ ಹಂಚಿಕೆ ಮಾಡಬೇಕಾಗಿತ್ತು.
೮ ಎಕರೆ ೨೮ ಗುಂಟೆ ಭೂಮಿಯಲ್ಲಿ ಈಗಾಗಲೇ ಭೂಮಿ ಹಂಚಿಕೆಯಾದ ರಾಜ ಭಕ್ಷಿ ಸೇರಿದಂತೆ ೪ ಜನ ಸರಕಾರಿ ಭೂಮಿಯನ್ನು ಒತ್ತುವರಿ ಮಾಡಿಕೊಂಡು ಸುಮಾರು ವರ್ಷಗಳಿಂದ ಅನಧಿಕೃತವಾಗಿ ಸಾಗುವಳಿ ಮಾಡುತ್ತಿದ್ದು ಇವರ ಮೇಲೆ ಕಾನೂನು ಕ್ರಮ ತೆಗೆದುಕೊಂಡು ಭೂಮಿಯನ್ನು ತಹಶೀಲ್ದಾರರು ತಮ್ಮ ಸ್ವಾಧೀನಕ್ಕೆ ತೆಗೆದುಕೋಳ್ಳಬೇಕು ಎಂದು ಗ್ರಾಮದ ಬಸವರಾಜ ಎನ್ನುವ ವ್ಯಕ್ತಿ ಮಸ್ಕಿ ತಹಶೀಲ್ದಾರರಿಗೆ ದೂರು ನೀಡಿದರೂ ಸಹ ಇಲ್ಲಿತನಕ ಯಾವುದೇ ಕ್ರಮ ತೆಗೆದುಕೊಳ್ಳದೆ ಇರುವುದು ಅನುಮಾನಕ್ಕೆ ಎಡೆ ಮಾಡಿಕೊಟ್ಟಿದೆ.
ಸರ್ವೇ ನಂ ೮೮ ರಲ್ಲಿ ೮ ಎಕರೆ ೨೮ ಗುಂಟೆ ಸರಕಾರದ ಇನಾಮು ಭೂಮಿಯನ್ನು ಸರ್ವೇ ಮಾಡಿ ಅದ್ದುಬಸ್ತು ಮಾಡುವಂತೆ ಬಸವರಾಜ ತಂ ರಾಮಪ್ಪ ಎನ್ನುವವರು ೨೦-೧೨-೨೦೨೧ ರಂದು ತಹಶೀಲ್ದಾರರಾದ ಕವಿತಾ ಗೆ ದೂರು ನೀಡಿದ್ದು ಇಲ್ಲಿತನಕ ಯಾವುದೇ ಕ್ರಮ ತೆಗೆದುಕೊಂಡಿಲ್ಲ.
೬-೫-೨೦೨೨ ರಂದು ಸರ್ವೇ ಮಾಡಲು ಬರುವುದಾಗಿ ದಿನಾಂಕ ನಿಗದಿಪಡಿಸಿದ ಸರ್ವೇರ್ ರಾಜಶೇಖರ ಬಿರಾದಾರ ಸ್ಥಳಕ್ಕೆ ಬಂದು ಸರ್ವೇ ಮಾಡದೆ ಟಿಪ್ಪಣಿ ಸರಿ ಇಲ್ಲ ಎಂದು ಹೇಳಿ ೩೦-೫-೨೦೨೨ ರಂದು ಯಾವುದೇ ದಾಖಲೆಗಳಿಲ್ಲದೇ ಸ್ಥಳಕ್ಕೆ ಬಂದು ಸರ್ವೇರ್ ರಾಜಶೇಖರ ಬಿರಾದಾರ ಅರ್ಧ ಮರ್ಧ ಅಂದಾಜು ಸರ್ವೇ ಮಾಡಿ ತಹಶೀಲ್ದಾರರು ನನಗೆ ನೋಟಿಸ್ ನೀಡಿದರೆ ಸರಿಯಾಗಿ ಸರ್ವೇ ಹಾಗೂ ಅದ್ದು ಬಸ್ತು ಮಾಡಿ ಕೊಡುವೆ ಆದರೆ ತಹಶೀಲ್ದಾರರು ಯಾವುದೇ ನನಗೆ ಮಾಹಿತಿ ನೀಡಿಲ್ಲ.
ಈ ಕುರಿತು ತಹಶೀಲ್ದಾರ ಕವಿತಾ ಇವರನ್ನು ಮಾತನಾಡಿಸಿದಾಗ ಸರ್ವೇ ಮಾಡಿ ಅದ್ದು ಬಸ್ತು ಮಾಡಿಕೊಡುವಂತೆ ಸರ್ವೇರ್ ರಾಜಶೇಖರ ಬಿರಾದಾರ ಗೆ ಹೇಳಿದ್ದೇನೆ.ಇನ್ನು ಕೆಲಸ ಆಗಿಲ್ವಾ ಎಂದು ನಮ್ಮನ್ನು ಪುನಃ ಕೇಳುತ್ತಾರೆ.ತಹಶೀಲ್ದಾರರ ಮೇಲೆ ಸರ್ವೇ ರ್ ,ಸರ್ವೇ ರ್ ಮೇಲೆ ತಹಶೀಲ್ದಾರರು ಹೇಳುತ್ತಾ ವಿನಾ ಕಾರಣ ವಿಳಂಬ ಮಾಡುವುದು ನೋಡಿದರೆ ಅನಧಿಕೃತ ಸಾಗುವಳಿದಾರರೊಂದಿಗೆ ಇವರು ಶಾಮೀಲಾದ ಬಗ್ಗೆ ಅನುಮಾನ ಬರುತ್ತಿದೆ ಎಂದು ಬಸವರಾಜ ಪತ್ರಿಕೆಗೆ ತಿಳಿಸಿದರು.
ಸರಕಾರಿ ಇನಾಮು ಭೂಮಿಯಲ್ಲಿ ಅನಧಿಕೃತವಾಗಿ ಸಾಗುವಳಿ ಮಾಡುವವರ ಮೇಲೆ ಕಾನೂನು ಕ್ರಮ ತೆಗೆದುಕೊಳ್ಳುವಂತೆ ದೂರು ನೀಡಿದ ಬಸವರಾಜ ಎನ್ನುವ ವ್ಯಕ್ತಿಯಿಂದ ಸರ್ವೇರ್ ರಾಜಶೇಖರ ಬಿರಾದಾರ ಲಂಚ ತೆಗೆದುಕೊಂಡು ಅರ್ಧ ಮರ್ಧ ಸರ್ವೇ ಮಾಡಿ ನಂತರ ಅನಧಿಕೃತ ಸಾಗುವಳಿ ದಾರರೊಂದಿಗೆ ಶಾಮೀಳಾಗಿ ಹಣ ತಿಂದು ಇಲ್ಲಿತನಕ ಅವರ ಮೇಲೆ ಯಾವುದೇ ಕ್ರಮ ಕೈಗೊಳ್ಳದೇ ಇರುವುದು ಮೇಲ್ನೋಟಕ್ಕೆ ಕಂಡು ಬಂದಿದೆ.
ಸರಕಾರ ಭೂಮಿ ಸರ್ವೇ ಮಾಡಿ ಅನಧಿಕೃತ ಸಾಗುವಳಿ ದಾರರನ್ನು ಬಿಡಿಸಿ ಸರಕಾರ ಭೂಮಿಯನ್ನು ತನ್ನ ಸ್ವಾಧೀನಕ್ಕೆ ತೆಗೆದುಕೊಳ್ಳಲು ದೂರು ನೀಡಿದರೆ ಸರ್ವೇ ಮಾಡಲು ನನ್ನಿಂದ ಲಂಚ ಪಡೆದಿದ್ದು ಎಷ್ಟು ಸರಿ.ತಹಶೀಲ್ದಾರರು ಖಡಕ್ ಆದೇಶ ಮಾಡಿದರೆ ನಾನು ಸರ್ವೇ ಹಾಗೂ ಅದ್ದುಬಸ್ತು ಮಾಡಿ ಸರಕಾರದ ಭೂಮಿಯನ್ನು ನಮ್ಮ ಸ್ವಾಧೀನಕ್ಕೆ ತೆಗೆದುಕೊಂಡು ವರ್ಷಕ್ಕೆ ಎರಡು ಬೆಳೆ ಪ್ರಕಾರ ೧ ಲಕ್ಷದಂತೆ ಹಣ ರೈತರಿಗೆ ದಂಡ ಹಾಕಿ ಹಣ ವಸೂಲಿ ಮಾಡುವೆ ಆದ್ರೆ ತಹಶೀಲ್ದಾರರು ಸರ್ವೇ ಅದ್ದುಬಸ್ತು ಮಾಡಿ ಅನಧಿಕೃತ ಸಾಗುವಳಿ ದಾರರ ಮೇಲೆ ಕಠಿಣ ಕಾನೂನು ಕ್ರಮ ತೆಗೆದುಕೊಳ್ಳಲು ಮುಂದಾಗುತ್ತಿಲ್ಲ.ಅದಕ್ಕೆ ನಾನೇನು ಮಾಡಲಿ ಎಂದು ಸರ್ವೇರ್ ರಾಜಶೇಖರ ಬಿರಾದಾರ್ ನನ್ನ ಬಳಿ ತನ್ನ ಆಆಯಕತೆ ವ್ಯಕ್ತಪಡಿಸಿದನು ಎಂದು ದೂರುದಾರ ಬಸವಾರಜ ತಂ ರಾಮಪ್ಪ ಬಪ್ಪುರು ಪತ್ರಿಕೆಗೆ ತಿಳಿಸಿದರು.