
ಸಂಜೆವಾಣಿ ವಾರ್ತೆ
ದಾವಣಗೆರೆ.ಆ.೨೯; ನಗರದ ನಿಟುವಳ್ಳಿಯ ಪೊಲೀಸ್ ವಸತಿ ಗೃಹದ ಹಿಂಭಾಗದಲ್ಲಿರುವ ಭಗತ್‌ಸಿಂಗ್ ನಗರ, 2ನೇ ಹಂತದಲ್ಲಿನ ಶ್ರೀ ಬನ್ನಿ ಮಹಾಂಕಾಳಿ ದೇವಸ್ಥಾನ ಸೇವಾ ಸಮಿತಿಯಿಂದ ಶ್ರೀಬನ್ನಿ ಮಹಾಂಕಾಳಿ ದೇವಸ್ಥಾನದಲ್ಲಿ ಶ್ರೀ ಬನ್ನಿ ಮಹಾಂಕಾಳಿ ದೇವಿ ಮತ್ತು ಶ್ರೀ ಗಣಪತಿ ದೇವರ ನೂತನ ಶಿಲಾಮೂರ್ತಿ ಸ್ಥಾಪನೆ ಮತ್ತು ಪ್ರಾಣ ಪ್ರತಿಷ್ಠಾಪನೆ ಧಾರ್ಮಿಕ ಸಮಾರಂಭ ಆಯೋಜಿಸಲಾಗಿತ್ತು. ಗಂಗಾ ಪೂಜೆಯೊಂದಿಗೆ ಗಣಪತಿ, ಉಮಾಮಹೇಶ್ವರ, ನವಗ್ರಹ, ಅಷ್ಟದಿಕ್ಪಾಲಕರ, ಅಘೋರ ವಾಸ್ತು ಲಕ್ಷ್ಮೀ ಸೇರಿದಂತೆ ವಿವಿಧ ಪೂಜಾ ಕಾರ್ಯಗಳು, ಪ್ರಧಾನ ಕಲಶಗಳ ಸ್ಥಾಪನೆ ಪೂಜೆಯೊಂದಿಗೆ ಗಣಹೋಮ, ಶ್ರೀ ಚಂಡಿಕಾ ಹೋಮ, ನವಗ್ರಹ ಹೋಮ, ಶ್ರೀ ರುದ್ರಹೋಮ, ಶಾಂತಿ ಹೋಮ ಸೇರಿದಂತೆ ಇತರೆ ಹೋಮ ಅವನಾದಿಗಳು ನಡೆದವು.29ರ ಮಂಗಳವಾರ ಬ್ರಾಹೀ ಮುಹೂರ್ತದಲ್ಲಿ ಶಿಲಾಮೂರ್ತಿಗಳನ್ನು ಸ್ಥಾಪಿಸಿ, ವಿಶೇಷ ರುದ್ರಾಭಿಷೇಕ, ಪಂಚಾಮೃತ ಅಭಿಷೇಕ ಅಲಂಕಾರ ಅಷ್ಟೋತ್ತರ ಶತನಾಮಾವಳಿ, ಕುಂಕುಮಾರ್ಚನೆ ಸೇರಿದಂತೆ ವಿವಿಧ ಪೂಜಾ ಕಾರ್ಯಗಳು ನಡೆದವು.ಅವರಗೊಳ್ಳ ಪುರವರ್ಗ ಮಠದ ಓಂಕಾರ ಶಿವಾಚಾರ್ಯ ಶ್ರೀಗಳು ಪೂಜಾ ಕಾರ್ಯಗಳನ್ನು ನಡೆಸಿ ಕೊಟ್ಟರು.ನಂತರ ಆಶೀವರ್ಚನ ನೀಡಿದರು.ಕಾರ್ಯಕ್ರಮದ ನಂತರ ಭಕ್ತಾದಿಗಳಿಗೆ ಅನ್ನ ಸಂತರ್ಪಣೆ ಕಾರ್ಯಕ್ರಮ ನಡೆಯಿತು. ಈ ವೇಳೆ ದೇವಸ್ಥಾನದ ಅಧ್ಯಕ್ಷ ಬಸವರಾಜ್, ಕಾರ್ಯದರ್ಶಿ ಕಿರಣ್ ಕುಮಾರ್, ಉಪಾಧ್ಯಕ್ಷ ರುದ್ರೇಶ, ಖಜಾಂಚಿ ಹೆಚ್.ವಿ.ಉಮೇಶ್, ಶಾಂತಮ್ಮ, ವಾಣಿಶ್ರೀ, ಗೀತಾ ಸೇರಿದಂತೆ ಪದಾಧಿಕಾರಿಗಳು, ಈ ಭಾಗದ ಭಕ್ತರು ಇದ್ದರು.