ಏನಿದು ಕಳೆದುಕೊಂಡರೆ ಬರಿ ನೋವಾಗುತ್ತದೆ ಆದರೆ ಖುಷಿಯಾಗಿರುವುದು ಹೇಗೆ? ಹೌದು ನಾವು ನೋವು ಪಡುತ್ತಿರುವುದು ಕಳೆದುಕೊಂಡಿದ್ದಕ್ಕೆ .ಚಿಕ್ಕ ವಯಸ್ಸಿನಲ್ಲಿ ಅಮ್ಮ ಕೊಡಿಸಿದ ಆಟಿಕೆ ಕಳೆದು ಹೋಗಿದ್ದಕ್ಕೆ ,ಪಿಯುಸಿಯಲ್ಲಿ ಪ್ರೀತಿಯಿಂದ ಅಕ್ಕ ಕೊಡಿಸಿದ ವಾಚ್ ಕಳೆದು ಹೋಗಿದ್ದಕ್ಕೆ, ಹಲವು ವರ್ಷಗಳಿಂದ ಪ್ರೀತಿಸಿದ ಹುಡುಗ ಅಥವಾ ಹುಡುಗಿ ನಿನ್ನ ಬಿಟ್ಟು ಹೋಗುತ್ತಿದ್ದೇನೆ ಎಂದಾಗ ಆತನನ್ನು ಅಥವಾ ಆಕೆಯನ್ನು ಕಳೆದುಕೊಂಡ ದುಃಖ, ಹೀಗೆ ಜೀವನದ ಪ್ರತಿ ಹಂತದಲ್ಲೂ ಒಂದಲ್ಲ ಒಂದನ್ನು ಕಳೆದುಕೊಂಡೆ ಬದುಕು ಸಾಗಿಸುತ್ತಿದ್ದೇವೆ .ಇವೆಲ್ಲಕ್ಕೂ ಮಿಗಿಲಾಗಿ ನಾವು ಅಮೂಲ್ಯವಾದ ಸಮಯವನ್ನೇ ಕಳೆದು ಹಾಕಿರುತ್ತೇವೆ .ಆದರೆ ಅದರ ಬಗೆಗಿನ ನೆನಪು ಮಾತ್ರ ಕಡಿಮೆ ಕಳೆದುಕೊಳ್ಳುವುದು ಅಂದರೆ ಏನು ಕೆಲವನ್ನು ನಾವು ಮರಳಿ ಪಡೆಯಬಹುದು ಆದರೆ ಕೆಲವನ್ನು ನಾವು ಮರಳಿ ಪಡೆಯಲು ಸಾಧ್ಯವೇ ಇಲ್ಲ ಉದಾಹರಣೆಗೆ ಹಣ ವಸ್ತು ಒಡವೆ ಇತ್ಯಾದಿಗಳನ್ನು ನಾವು ಜೀವನದ ಯಾವ ಹಂತದಲ್ಲಿ ಆದರೂ ಮರಳಿ ಪಡೆಯಬಹುದು ಆದರೆ ವ್ಯಕ್ತಿಗಳು ಸಂಬಂಧಗಳು ಹಾಗೂ ಪ್ರೀತಿಯನ್ನು ಒಮ್ಮೆ ಕಳೆದುಕೊಂಡರೆ ಮತ್ತೆ ಅವುಗಳನ್ನು ಗಳಿಸುವುದು ಕಷ್ಟ ಸಾಧ್ಯ ಒಮ್ಮೆ ಹೋದ ಜೀವ ಮತ್ತೆ ಬರುವುದು ಅಸಾಧ್ಯ ಒಂದು ಬಾರಿ ವಿರುದ್ಧವಾಗಿ ಯೋಚಿಸಿ ನೋಡೋಣ ಹೌದು ಕಳೆದು ಹೋದ ಎಲ್ಲವೂ ನಮಗೆ ಎಷ್ಟು ಸನಿಹ ಕೆಲವೊಂದು ತಿಳಿಯದೆ ನಮ್ಮ ವಿವೇಚನೆಯನ್ನು ಮೀರಿ ನಮ್ಮನ್ನು ಅಗಲಿ ಹೋಗಿರುತ್ತದೆ ಆದರೆ ನಾವಿಂದು ಕಳೆದುಕೊಳ್ಳಬೇಕಾದ ಅಂಶಗಳು ತುಂಬಾ ಇದೆ ನಮ್ಮ ಕೋಪ ಹಾಗೂ ನಮ್ಮಲ್ಲಿರುವ ಅಹಂಕಾರ ಬೇರೆಯವರ ಬಗೆಗಿನ ಅಸಹನೆ ಅಸೂಯೆ, ನಮ್ಮ ಬಗ್ಗೆ ನಮಗಿರುವ ಕೀಳರಿಮೆ ನಮ್ಮೊಡನೆ ಸದಾ ಕಾಡುವ ಒಂಟಿತನ ನಮಗೆ ಅವಶ್ಯಕತೆ ಇಲ್ಲದ ಎಷ್ಟು ವಿಷಯಗಳ ಬಗ್ಗೆ ನಮ್ಮಲ್ಲಿ ಮೂಡುವ ಅತಿರೇಕದ ಭಾವನೆಗಳು ಹೀಗೆ ಹೇಳುತ್ತಾ ಹೋದರೆ ಪುಟಗಳಷ್ಟು ವಿಷಯಗಳನ್ನು ನಾವಿಂದು ಅವಶ್ಯಕವಾಗಿ ಕಳೆದುಕೊಳ್ಳಬೇಕಿದೆ ಒಂದು ಗಾಜಿನ ಲೋಟ ಖಾಲಿ ಇದ್ದಾಗ ಮಾತ್ರ ಅದರೊಳಗೆ ಏನನ್ನಾದರೂ ತುಂಬಲು ಸಾಧ್ಯ ಒಂದು ವೇಳೆ ಮೇಲೆ ಚರ್ಚಿಸಿದ ಎಲ್ಲಾ ವಿಷಯಗಳನ್ನು ನಾವು ಖಾಲಿ ಮಾಡಿಕೊಂಡರೆ ಮಾತ್ರ ಕಳೆದುಕೊಂಡರೆ ಮಾತ್ರ ಪ್ರೀತಿ, ಜ್ಞಾನ, ಸ್ನೇಹ, ಸಂಬಂಧ ,ಕುಟುಂಬ, ವಾತ್ಸಲ್ಯ ಪ್ರೇಮಾ, ಆತ್ಮೀಯತೆ, ಒಳ್ಳೆತನ ಮುಂತಾದವುಗಳನ್ನು ಜೀವನದ ಗಾಜಿನ ಲೋಟದೊಳಗೆ ತುಂಬಿ ಅದನ್ನು ಸುಂದರಗೊಳಿಸಬಹುದು ಹಾಗಾಗಿ ಬನ್ನಿ ಒಂದಿಷ್ಟು ಕಳೆದುಕೊಂಡು ಮತ್ತಷ್ಟು ಪಡೆದುಕೊಂಡು ಖುಷಿಯಾಗಿರೋಣ.
ತ್ರಿವೇಣಿ ಸಿಡಿ.
ಉಪನ್ಯಾಸಕರು
ಎ ಆರ್ ಎಂ ಪ್ರಥಮ ದರ್ಜೆ ಕಾಲೇಜು ದಾವಣಗೆರೆ