
ಸಂಜೆವಾಣಿ ವಾರ್ತೆಸಂಡೂರು: ಆ: 18: ತಾಲೂಕಿನ ಬನ್ನಿಹಟ್ಟಿ ಗ್ರಾಮದಲ್ಲಿರುವ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಶಾಲಾ ವಿದ್ಯಾರ್ಥಿಗಳಿಗೆ “ಆರೋಗ್ಯ ಸಿಂಚನ” ಎಂಬ ವಿಶೇಷ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಬನ್ನಿಹಟ್ಟಿ ಗ್ರಾ.ಪಂ ಅಧ್ಯಕ್ಷ ಜಗದೀಶ್ ಅವರು ಮಾನ್ಯ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಹಕ ಅಧಿಕಾರಿಗಳಾದ ರಾಹುಲ್ ಶರಣಪ್ಪ ಸಂಕನೂರು ಅವರ ವಿಶೇಷ ಕಾಳಜಿಯ ಮೇಲೆ ಆಯೋಜಿಸಿರುವ ಈ ಕಾರ್ಯಕ್ರಮ ಜಿಲ್ಲೆಗೆ ಮಾತ್ರವಲ್ಲದೆ ರಾಜ್ಯಕ್ಕೂ ವಿಸ್ತರಿಸುವಷ್ಟು ಉತ್ತಮವಾಗಿದೆ ಎಂದು ಅವರು ತಿಳಿಸಿದರು, ಈ ಸಂದರ್ಭದಲ್ಲಿ ತಾಲೂಕು ಆರೋಗ್ಯಾಧಿಕಾರಿ ಡಾ.ಭರತ್ ಮಾತನಾಡಿ ಕ್ಷಯರೋಗ,ಕುಷ್ಠರೋಗ, ಸೊಳ್ಳೆಗಳಿಂದ ಹರಡುವ ಆರು ರೋಗಗಳು ಮತ್ತು ತಡಗಟ್ಟುವ ವಿಧಾನ, ಬಾಲ್ಯ ವಿವಾಹ, ಹದಿಹರೆಯದವರ ಆರೋಗ್ಯ, ಋತುಚಕ್ರದ ನೈರ್ಮಲ್ಯ, ಕಸ ವಿಂಗಡನೆ ಹಾಗೂ ಬಾಲ್ಯ ವಿವಾಹದ ದುಷ್ಪರಿಣಾಮಗಳ ಕುರಿತು ವಿಡಿಯೋ ಮಕ್ಕಳಿಗೆ ಮನರಂಜಕವಾಗಿ ವಸ್ತು ವಿಷಯ ಮನವರಿಕೆ ಮಾಡುವ ಹಾಗಿವೆ ಎಂದು ತಿಳಿಸಿದರು,ವಸತಿ ಶಾಲೆಯ ಪ್ರಾಂಶುಪಾಲ ಬಸವರಾಜ ಅವರು ನಮ್ಮ ಶಾಲೆ ಮಕ್ಕಳಿಗೆ ಉಪಯೋಗವಾಗಿದೆ ಪ್ರಶ್ನಾವಳಿಗಳಿಗೆ ಉತ್ತರ ನೀಡುವ ಮಕ್ಕಳ ಸ್ಪಂದಿಸುತ್ತಿರುವುದು, ಕಾರ್ಯಕ್ರಮ ಕುರಿತು ವಿದ್ಯಾರ್ಥಿಗಳು ತಮ್ಮ ಅನಿಸಿಕೆಗಳನ್ನು ತಿಳಿಸಿದ್ದು ಸಂತಸ ತಂದಿದೆ ಎಂದು ತಿಳಿಸಿದರು, ವಿಡಿಯೋ ದೃಶ್ಯಾವಳಿಗಳನ್ನು ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಶಿವಪ್ಪ ನಡೆಸಿಕೊಟ್ಟರು, ಬಹುಮಾನ ವಿತರಣೆಯನ್ನು ಸಿ.ಹೆಚ್.ಒ ಸೌಮ್ಯ ನಡೆಸಿಕೊಟ್ಟರು, ಅಪ್ತ ಸಮಾಲೋಚಕ ಪ್ರಶಾಂತ್ ಕುಮಾರ್ ವಂದನಾರ್ಪಣೆ ನೆರವೇರಿಸಿದರು, ಈ ಸಂದರ್ಭದಲ್ಲಿ ತಾರಾನಗರ ಆಡಳಿತ ವೈದ್ಯಾಧಿಕಾರಿ ಡಾ.ಸುನಿತಾ, ಬನ್ನಿಹಟ್ಟಿ ಗ್ರಾ.ಪಂ ಸದಸ್ಯರಾದ ಮಲ್ಲಿಕಾರ್ಜುನ, ಕುಮಾರಸ್ವಾಮಿ,ಮುಖಂಡರಾದ ರಾಮಪ್ಪ,ಎರ್ರಿಯಪ್ಪ,ಪಂಪಾಪತಿ, ಸಹ ಶಿಕ್ಷಕರಾದ ಕೊಟ್ರೇಶ್, ಉಮಾ, ಲಕ್ಷ್ಮಿ, ಅನುಷಾ ,ವೀರೇಶ್, ಹಾಲೇಶ್, ಶರಣಬಸಪ್ಪ, ರೀಡ್ಸ್ ಸಂಸ್ಥೆಯ ಅಂಜಿನಪ್ಪ, ಆಶಾ ಕಾರ್ಯಕರ್ತೆ ರೇಖಾ, ರೇಣುಕಾ ಹಾಗು ವಿದ್ಯಾರ್ಥಿಗಳು ಹಾಜರಿದ್ದರು
One attachment • Scanned by Gmail