ಬನ್ನಿಕೊಪ್ಪ ದಲ್ಲೀ ಕಾರಟಗಿ ಹುಬ್ಬಳ್ಳಿ ರೈಲು ನಿಲುಗಡೆ ಗೆ ಸಂತಸ


ಸಂಜೆವಾಣಿ ವಾರ್ತೆ
ಕೊಪ್ಪಳ, ಮಾ.08: ಕುಕನೂರು ತಾಲೂಕು ಬನ್ನಿಕೊಪ್ಪ ಗ್ರಾಮದ ರೈಲ್ವೆ ನಿಲ್ದಾಣದಲ್ಲಿ ನೂತನವಾಗಿ ನಿಲುಗಡೆಯಾದ ಹುಬ್ಬಳ್ಳಿ-ಕಾರಟಗಿ ಎಕ್ಸ್ ಪ್ರೆಸ್ ರೈಲಿಗೆ  ಮಂಗಳವಾರ ಪೂಕೆ ಸಲ್ಲಿಸಿ ಸಿಹಿ ಹಂಚಿ ಸಂಭ್ರಮಿಸಲಾಯಿತು, ನಂತರ ಸಂಸದ ಶ್ರೀ ಸಂಗಣ್ಣ ಕರಡಿಯವರು ಹಸಿರು ನಿಶಾನೆ ತೋರಿಸಿ ರೈಲ್ವೆಗೆ ಚಾಲನೆ ಕೊಟ್ಟರು. ಲೋಕಸಭಾ ಸಂಸದರಾದ  ಶ್ರೀ  ಸಂಗಣ್ಣ ಕರಡಿಯವರಿಗೆ ಹಾಗೂ ಮಾಜಿ ತಾಲೂಕು ಪಂಚಾಯಿತಿ ಉಪಾಧ್ಯಕ್ಷ  ಶಿವಕುಮಾರ್ ನಾಗಲಾಪುರಮಠ ರವರಿಗೂ ಸನ್ಮಾನಿಸಲಾಯಿತು, ಬನ್ನಿಕೊಪ್ಪದ ರೈಲ್ವೆ ನಿಲ್ದಾಣವನ್ನ ಅತ್ಯಂತ ಅಚ್ಚುಕಟ್ಟಾಗಿ ನಿರ್ವಹಿಸಿದ್ದರಿಂದ ಸಂತೋಷಗೊಂಡ ಸಂಸದರು ಮತ್ತು ಬನ್ನಿಕೊಪ್ಪದ ಗ್ರಾಮಸ್ಥರು ರೈಲ್ವೆ ಅಧಿಕಾರಿಗಳಿಗೆ ಶುಭ ಕೋರಿ ಸನ್ಮಾನಿಸಿದರು, ನಂತರ ಸಂಸದರು ಮಾತನಾಡಿ ಈ ರೈಲಿನ ಸದುಪಯೋಗವನ್ನ ಎಲ್ಲರೂ ಪಡೆದುಕೊಳ್ಳಬೇಕೆಂದು ಅಭಿಪ್ರಾಯಪಟ್ಟು ಮುಂದಿನ ದಿನಮಾನಗಳಲ್ಲಿ ಇನ್ನುಳಿದ ಎಕ್ಸ್ಪ್ರೆಸ್ ಟ್ರೈನ್ ಗಳನ್ನು ಸಹ ನಿಲುಗಡೆ ಮಾಡಿಸುವುದಾಗಿ ಭರವಸೆ ನೀಡಿದರು, ಇದರಲ್ಲಿ ಭಾಗವಹಿಸಿ ಈ ಸಮಾರಂಭವನ್ನು ಯಶಸ್ವಿಗೊಳಿಸಿದರೂ.