ಬನಶಂಕರಿ ಬಡಾವಣೆಯಲ್ಲಿ ಸಸಿ ನೆಡುವ ಕಾರ್ಯಕ್ರಮ


ದಾವಣಗೆರೆ ಜು.19; ನಗರದ ಬನಶಂಕರಿ ಬಡಾವಣೆಯ ಪಾರ್ಕ್ ನಲ್ಲಿ ಸುಮಾರು 300ಕ್ಕೂ ಹೆಚ್ಚು ವಿವಿಧ ಬಗೆಯ ಸಸಿಗಳನ್ನು ನೆಡುವ ಕಾರ್ಯಕ್ರಮವನ್ನು ಮಹಾನಗರ ಪಾಲಿಕೆ, ಕರುಣ ಜೀವ ಕಲ್ಯಾಣ ಟ್ರಸ್ಟ್, ಭಾರತ್ ವಿಕಾಸ್ ಪರಿಷತ್ ಸ್ವಾಮಿ ವಿವೇಕಾನಂದ ಶಾಖೆಯ ಸ್ವಯಂ ಸೇವಕರ ಹಾಗೂ ಬನಶಂಕರಿ ಬಡಾವಣೆ ನಾಗರಿಕರ ಸಹಯೋಗದೊಂದಿಗೆ ಹಮ್ಮಿಕೊಳ್ಳಲಾಗಿತ್ತು.ಕಾರ್ಯಕ್ರಮಕ್ಕೆ ಮಹಾನಗರ ಪಾಲಿಕೆಯ ಮಹಾಪೌರರಾದ ಜಯಮ್ಮ ಗೋಪಿ ನಾಯ್ಕ್ ಹಾಗೂ ಆಯುಕ್ತ ವಿಶ್ವನಾಥ್.ಪಿ ಮುದ್ದಜ್ಜಿ ಚಾಲನೆ ನೀಡಿದರು.