ಬನಶಂಕರಿ ದೇವಿಗೆ ವಿಶೇಷ ಪೂಜೆ

ಚಿತ್ರದುರ್ಗ.ಜ.೮; ನಗರದ ಸಿಹಿ ನೀರು ಹೊಂಡದ ಹತ್ತಿರದ ಸಾವಂತನಹಟ್ಟಿಯಲ್ಲಿರುವ ಶ್ರೀ ಬನಶಂಕರಿ ದೇವಸ್ಥಾನದಲ್ಲಿ ಬನದ ಹುಣ್ಣಿಮೆ ಪ್ರಯುಕ್ತ  ಬನಶಂಕರಿ ದೇವಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು.ಬನಶಂಕರಿ ದೇವಿಗೆ ವಿಶೇಷ ಪೂಜೆ ಹಿನ್ನಲೆಯಲ್ಲಿ ಅನ್ನಸಂತರ್ಪಣೆ ನಡೆಯಿತು. ಈ ಸಂದರ್ಭದಲ್ಲಿ ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ, ನಗರಸಭೆ ಸದಸ್ಯೆ ಪಿ.ಕೆ.ಮೀನಾಕ್ಷಿ, ಕಾಂಗ್ರೆಸ್ ಯುವ ಮುಖಂಡ ಬಿ.ಟಿ.ಜಗದೀಶ್, ಬನಶಂಕರಿ ಸೇವಾ ಸಮಿತಿ ಅಧ್ಯಕ್ಷ ಬಿ.ಎಸ್.ಕೃಷ್ಣಪ್ಪ, ಕಾರ್ಯದರ್ಶಿ ಬಿ.ಎಸ್.ಶಂಕರ್, ಉಪಾಧ್ಯಕ್ಷ ಬಿ.ಲಕ್ಷ್ಮಣಪ್ಪ, ನಿರ್ದೇಶಕರಾದ ಟಿ.ಎನ್,. ಕಾಂತರಾಜ್, ವಿ.ಶ್ರೀನಿವಾಸ್, ರತ್ನಮ್ಮ, ಬದರಿ, ಟಿ.ಎನ್. ಶ್ರೀನಿವಾಸ್, ಬಿ ಕೃಷ್ಣ, ಮಂಜುನಾಥಗೌಡ, ಶೇಖರಪ್ಪ, ಮಾರುತಿ, ಪ್ರಜ್ವಲ್ ಇದ್ದರು.