ಕಲಬುರಗಿ,ಏ 16: ಇಲ್ಲಿನ ಬನಶಂಕರಿ ನಗರದ ಸಾರ್ವಜನಿಕ ಉದ್ಯಾನವದಲ್ಲಿ ಬುದ್ಧ ಬಸವ ಅಂಬೇಡ್ಕರ್ ವಿಚಾರವಾದಿಗಳ ಸಂಘದಿಂದ ಡಾ.ಬಿ.ಆರ್.ಅಂಬೇಡ್ಕರ್ ಅವರ 132ನೇ ಜಯಂತ್ಯೋತ್ಸವ ಕಾರ್ಯಕ್ರಮವನ್ನು ಸಣ್ಣ ನೀರಾವರಿ ಇಲಾಖೆಯ ಅಧೀಕ್ಷಕ ಇಂಜಿನಿಯರ್ ಡಾ.ಸುರೇಶ ಶರ್ಮಾ ಅವರು ಉದ್ಘಾಟಿಸಿದರು. ಪೂಜ್ಯ ಭಿಕ್ಕುಣಿ, ನಿವೃತ್ತ ಜಿಲ್ಲಾ ವೈದ್ಯಾಧಿಕಾರಿ ಡಾ.ಮಲ್ಲಿಕಾರ್ಜುನ ಮುಕ್ಕಾ, ನಿವೃತ್ತ ಕೃಷಿ ಅಧಿಕಾರಿ ಲಕ್ಷ್ಮಣರಾವ ಕಡಬೂರ, ಸಿಯುಕೆ ಉಪನ್ಯಾಸಕ ಅಪ್ಪುಗೆರೆ ಸೋಮಶೇಖರ, ಸಮಾಜ ಸೇವಕ ಅಶೋಕ ವೀರನಾಯಕ, ಆಳಂದ ಪುರಸಭೆ ನಿವೃತ್ತ ಮುಖ್ಯಾಧಿಕಾರಿ ಬಾಬುರಾವ ವಿಭೂತಿ, ಸಮಾಜ ಸೇವಕ ರಂಜನ್ ಕುಮಾರ ಬಾಲರಾಜ ಕ್ವಾನಳ್ಳಿ, ಸಂಘದ ಗೌರವಾಧ್ಯಕ್ಷ ಮಾಥರ್ಂಡಪ್ಪ ಚಟ್ಟೇರಕರ್, ಅಧ್ಯಕ್ಷ ಮಹಾದೇವಪ್ಪ ಶಿರವಾಳ,ಮರೆಪ್ಪ ಬುಕ್ಕಾನ್, ಅನೀಲಕುಮಾರ ಕಪನೂರ, ಆಕಾಶ ಸಂಗಾವಿ, ಶಾಂತಬಾಯಿ ಶಿರವಾಳ, ಖಜಾಂಚಿ ಕರೆಪ್ಪ, ಗೌತಮ ಗಾಯಕವಾಡ, ರಂಜನಕುಮಾರ ಕ್ವಾನಳಿ, ಸಿದ್ರಾಮಪ್ಪ ರಂಜೋಳ್ಕರ್, ಜೈಭೀಮ ಶಿಂಧೆ, ಶಿವಮೂರ್ತಿ ಶೀಲವಂತ, ರಾಜೇಂದ್ರ ಸೇರಿದಂತೆ ಬಡಾವಣೆ ಗಣ್ಯರು ಇದ್ದರು.