ಬನದಮ್ಮ ದೇವಾಲಯದಲ್ಲಿ ದೇವಿ ಮಹಾತ್ಮೆ ಪಾರಾಯಣ

ಹಿರಿಯೂರು ಏ. 16-  ಇದೇ 19ರ ಬುಧವಾರ  ದರ್ಶ ಅಮಾವಾಸ್ಯೆ ಪ್ರಯುಕ್ತ, ಹಿರಿಯೂರು ನಗರದ ಶ್ರೀ ಬನದಮ್ಮ ದೇವಾಲಯದಲ್ಲಿ  ಸಂಜೆ 6, 30 ರಿಂದ  ಶ್ರೀ ದೇವಿ ಮಹಾತ್ಮೆ ಪಾರಾಯಣ ನಡೆಯಲಿದೆ, ಶ್ರೀ ದೇವಿಯ ಮಹಾತ್ಮೆ ಯ ಚರಿತ್ರೆಯನ್ನು ಭಕ್ತರು ಪಾಲ್ಗೊಂಡು ಪಾರಾಯಣ ಮಾಡುವರು,ಅದೇದಿನ ರಾತ್ರಿ 8, 30,ಕ್ಕೆ ಅನ್ನದಾನ ಸೇವೆ ನಡೆಯಲಿದೆ, ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಶ್ರೀ ಬನದಮ್ಮ ದೇವಿ ಕೃಪೆಗೆ ಪಾತ್ರರಾಗಬೇಕಾಗಿ ಶ್ರೀ ಬನದಮ್ಮ ದೇವಸ್ಥಾನದಅಧ್ಯಕ್ಷರು ಮತ್ತು ಕಾರ್ಯದರ್ಶಿಯವರು ಭಕ್ತಾದಿಗಳಲ್ಲಿ ಮನವಿ ಮಾಡಿದ್ದಾರೆ