ಬನದಮ್ಮದೇವಿಯ ವೈಭವದ ಕಾರ್ತೀಕೋತ್ಸವ

ಹಿರಿಯೂರು.ಡಿ.26: ನಗರದ ಮಿರ್ಜಾ ಬಡಾವಣೆ ಬಳಿ ಅನಾದಿಕಾಲದಿಂದಲೂ ನೆಲೆಸಿರುವ ಪುರಾತನ ಶ್ರೀಹೊಳೆ ಬನದಮ್ಮ ದೇವಿಯ ಕಡೇ ಕಾರ್ತೀಕೋತ್ಸವ ಪೂಜಾ ಕಾರ್ಯಕ್ರಮ ಭಕ್ತಿಭಾವದಿಂದ ಜರುಗಿತು. ಇದರ ಅಂಗವಾಗಿ ಮಾತೆಗೆ ಅರ್ಚನೆ ಅಭಿಷೇಕ ಹೂವಿನ ಅಲಂಕಾರ ಮಾಡಲಾಗಿತ್ತು ಮಹಾ ಮಂಗಳಾರತಿ ತೀರ್ಥಪ್ರಸಾದ ವಿನಿಯೋಗ ನಡೆಯಿತು. ನಗರದ ಅನೇಕ ಭಕ್ತರು ಪೂಜಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.