
ದಾವಣಗೆರೆ-ಫೆ.೨೮; ಪ್ರೌಢಶಿಕ್ಷಣದ ಹಂತದಲ್ಲೇ ಮಕ್ಕಳು ಯಾವುದೇ ತರಹದ ಉದಾಸೀನತೆ, ನಿರ್ಲಕ್ಷö್ಯ ಮಾಡದೇ ತಮ್ಮ ಜೀವನದ ಮುಂದಿನ ಗುರಿ ಮುಟ್ಟಲು, ಸಾಧನೆ ಮಾಡಲು ಬದ್ದತೆಯ ಕಾಳಜಿಯೊಂದಿಗೆ ತೊಡಗಿಸಿಕೊಂಡಾಗ ಉತ್ತಮ ಫಲಿತಾಂಶಕ್ಕೆ ಪೂರಕವಾಗುತ್ತದೆ ಎಂದು ಕಲಾಕುಂಚ ಸಕ್ರಿಯ ಸದಸ್ಯರು ಸಮಾಜ ಸೇವಕರಾದ ಶ್ರೀಮತಿ ಭಾಗ್ಯ ಸತೀಶ್ ಪಿಸಾಳೆ ತಮ್ಮ ಅಭಿಮತ ವ್ಯಕ್ತಪಡಿಸಿದರು.ದಾವಣಗೆರೆಯ ಕಲಾಕುಂಚ ಸಾಂಸ್ಕೃತಿಕ ಸಂಸ್ಥೆಯು ಎಸ್.ಎಸ್.ಎಲ್.ಸಿ. ಪರೀಕ್ಷೆ ಎದುರಿಸಲು ಮಕ್ಕಳಲ್ಲಿ ಆತ್ಮಸ್ಥೆöÊರ್ಯ ತುಂಬಲು ವಿದ್ಯಾರ್ಥಿಗಳಿಗೆ ಪರೀಕ್ಷಾ ಪೂರ್ವ ತಯಾರಿ ಸಿದ್ಧತಾ ಉಚಿತ ಕಾರ್ಯಾಗಾರ ನಗರದ ವೀರಮದಕರಿ ನಾಯಕ ವೃತ್ತದಲ್ಲಿರುವ ಶ್ರೀ ದುರ್ಗಾಂಬಿಕಾ ಪ್ರೌಢಶಾಲೆಯಲ್ಲಿ ಇತ್ತೀಚಿಗೆ ನಡೆದಿದ್ದು ಪಿಸಾಳೆಯವರು ಮಾತನಾಡಿದರು. ಶಾಲೆಯ ಮುಖ್ಯೋಪಾಧ್ಯಾಯರಾದ ಆರ್.ಪ್ರಭುರವರು ಅಧ್ಯಕ್ಷತೆ ವಹಿಸಿ ಮಾತನಾಡಿ, ಶಿಕ್ಷಣ ಕೇವಲ ಅಂಕಪಟ್ಟಿಗೆ ಸೀಮಿತವಾಗದೆ ಸಭ್ಯತೆ, ಸಂಸ್ಕೃತಿ, ಸಂಸ್ಕಾರವನ್ನು ಬೆಳೆಸಿಕೊಂಡರೆ ವಿದ್ಯಾಭ್ಯಾಸಕ್ಕೆ ಪರಿಪೂರ್ಣತೆ ಬರುತ್ತದೆ ಎಂದರು.ಕಲಾಕುAಚ ಸಾಂಸ್ಕೃತಿಕ ಸಂಸ್ಥೆಯ ಸಂಸ್ಥಾಪಕರಾದ ಸಾಲಿಗ್ರಾಮ ಗಣೇಶ್ ಶೆಣೈಯವರು ಶಿಕ್ಷಣದ ಕುರಿತು ಉಪನ್ಯಾಸ ನೀಡಿ ಮಕ್ಕಳಲ್ಲಿ ಆತ್ಮಸ್ಥೆöÊರ್ಯ ತುಂಬಿದರು. ಶಿಕ್ಷಕಿ ಕಲಾವತಿಯವರ ಪ್ರಾರ್ಥನೆಯೊಂದಿಗೆ ಪ್ರಾರಂಭವಾದ ಕಾರ್ಯಾಗಾರಕ್ಕೆ ಮಮತಾ ಕೊಟ್ರೇಶ್ ಸ್ವಾಗತಿಸಿದರು. ಪತ್ರಕರ್ತ ಸಂಸ್ಥೆಯ ಸಕ್ರಿಯ ಸದಸ್ಯರಾದ ಚನ್ನಬಸವ ಶೀಲವಂತ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕೊನೆಯಲ್ಲಿ ಜಯಶ್ರೀ ರಾಜು ವಂದಿಸಿದರು.