ಬದೆನೆಹಾಳಿನ ಬಹುಮುಖ ಪ್ರತಿಭೆ ಕಾಸೀಂ ಅಲಿಗೆ ಅಭಿನಂದನೆ 


(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ:ಜು,24- ನೆರೆಯ ಆಂದ್ರಪ್ರದೇಶದ ಬದೆನಹಾಳ್ ಗ್ರಾಮದ ಬಹುಮುಖ ಪ್ರತಿಭೆ, ಉಪನ್ಯಾಸಕ, ಕಲಾವಿದ ಕಾಸೀಂ ಅಲಿ ಅವರಿಗೆ ನಗರದ ಡಿಆರ್ ಕೆ ರಂಗ ಮಂದಿರದಲ್ಲಿ ನಿನ್ನೆ ರಂಗ ಜಂಗಮ‌ ಸಂಸ್ಥೆಯಿಂದ ಅಭಿನಂದನೆ ಸಮಾರಂಭ ಹಮ್ಮಿಕೊಂಡಿತ್ತು.
ನಲ್ಲಚೆರುವಿನ ಸರ್ಕಾರಿ ಕಾಲೇಜಿನ ಅರ್ಥಶಾಸ್ತ್ರ ಉಪನ್ಯಾಸಕರಾಗಿ ನಿವೃತ್ತಿ ಹೊಂದಿದ ಕಾರಣ ಅವರಿಗೆ ಅಭಿನಂದನೆ ಸಮಾರಂಭ ಹಮ್ಮಿಕೊಂಡಿತ್ತು.
ನಗರದ ಖ್ಯಾತ ಹಿಂದೂಸ್ತಾನಿ ಗಸಯಕ ದೊಡ್ಡ ಬಸವ ಗವಾಯಿಗಳು ಕಗ್ಗಲ್ಲು ಎರ್ರಿಗೌಡ ,ಬಸವರಾಜ , ಕೆ ಜಗದೀಶ್ , ಅಣ್ಣಾಜಿ ಕೃಷ್ಣಾರೆಡ್ಡಿ ,ಪಂಡಿತ ರಾಘವೇಂದ್ರ ಗುಡುದೂರು ಹಾಗು ಮಕ್ಕಳು ಸುಗುಮ ಸಂಗೀತ ವಚನ ಗಾಯನ  ಹಾಗು ರಂಗಗೀತೆಗಳನ್ನು ಪ್ರಸ್ತುತ ಪಡಿಸಿದರು.
ನಂತರ ಕಾಸಿಂ ಅಲಿ ಮತ್ತು ಕುಟುಂಬಕ್ಕೆ  ಸನ್ಮಾನಿಸಿ ಗೌರವಿಸಲಾಯ್ತು.
ಉಪನ್ಯಾಸಕಎ.ಎಂ.ಪಿ.ವೀರೇಶಸ್ವಾಮಿ ಅವರು ಕಾಸಿಂ ಅಲಿ ಅವರ ವ್ಯಕ್ತಿತ್ವ ಪರಿಚಯಿಸುವ  ಕವನ ವಾಚಸಿದರು. ಪತ್ರಕರ್ತ ಎನ್. ವೀರಭದ್ರಗೌಡ, ಕಲೆಯು ಜೀವಂತ ಉಳಿಯಬೇಕಾದರೆ ಆಸಕ್ತ ಪ್ರೇಕ್ಷಕರು ಇದ್ದಾಗ ಮಾತ್ರ ಸಾಧ್ಯ ಎಂದರು.
 ಇತಿಹಾಸ ಅಕಾಡಮಿಯ ಜಿಲ್ಲಾ ಅದ್ಯಕ್ಷ ಟಿ.ಎಚ್.ಎಂ ಬಸವರಾಜ ಮಾತನಾಡಿ,  ಕಲಾ ಪೋಷಕರು ಹೆಚ್ಚಾದರೆ ಮಾತ್ರ ಕಲೆ ಉಳಿಯುತ್ತದೆ .ಮನುಷ್ಯ ಆರೋಗ್ಯವಾಗಿರಬೇಕಾದರೆ ಅವನು ಕಲಾವಂತನಾಗಬೇಕು ಈ ದಿಶೆಯಲಿ ಕಾಸಿಂ ಒಬ್ಬ ಅಪ್ಪಟ ಕಲಾವಿದ ಈತನ ಕಲಾ ಸೇವೆ ಇನ್ನೂ ಮುಂದುವರಿಯಲಿ ಭಗವಂತ‌ ಅಶೀರ್ವಾದ ಈ ಕಲಾವಿದನ ಮೇಲೆ ಸದಾ ಇರಲಿ ಎಂದರು.
 ಹಿರಿಯ ರಂಗ ಭೂಮಿ ಕಲಾವಿದ ಬದನೆಹಾಳು ಭೀಮಣ್ಣ  ಮಾತನಾಡಿ,  ಕಾಸೀಂ ಅವರು  ಅನುಭವಿಸಿದ ಅವಮಾನವೇ ಅವರು ಉಪನ್ಯಾಸಕರಾಗಲು ಪ್ರೇರಣೆಯಾಗಿ  ಕಾರಣವಾಯ್ತು, ಮನೆತನದಿಂದ ಶ್ರೀಮಂತರಾದರೂ ಗರವ ಇಲ್ಲದೆ ಬದುಕಿದ ಉತ್ತಮ ವ್ಯಕ್ತಿತ್ವ ಎಂದರು.
ಅಭಿನಯ ಕಲಾ ಕೇಂದ್ರದ ನಿರ್ದೇಶಕ ಕೆ. ಜಗದೀಶ್  ಮಾತನಾಡಿ, ಎಲ್ಲ  ಜನಾಂಗದವರು ಸೇರುವ  ಮಂದಿರ ಎಂದರೆ ಅದು ಕಲಾ ಮಂದಿರ‌  ಒಂದೆ  ಕಲೆ ಮನಸು ಮನಸುಗಳನ್ನು ಬೆಸೆಯುತ್ತದೆಯೇ ಹೊರತು ಮುರಿಯುವುದಿಲ್ಲ ಎಂದರು.
ನಿವೃತ್ತ ಉಪನ್ಯಾಸ ಎನ್. ಬಸವರಾಜ  ಕಾಸೀಂ ಅಲಿಯವರು ದೊಡ್ಡ ಬಸವ ಗವಾಯಿಗಳ ಅತ್ಯುತ್ತಮ ಶಿಷ್ಯರು ಈಗಾಗಲೇ ನಾಲ್ಕು ಸಿ.ಡಿಗಳನ್ನು ಹೊರತಂದಿದ್ದಾರೆ ಎಂದು ಅವರ ಸಾಧನೆಯನ್ನು ಬಣ್ಣಿಸಿದರು. ಮನೆ ಭಾಷೆ  ಉರ್ದು, ಊರಿನ ಭಾಷೆ ತೆಲುಗು, ಕಲಿತಿದ್ದು ಕನ್ನಡ ಹೀಗೆ ಭಾಷಾ ಭಾಂಧವ್ಯದ ಜೀವಿ ಎಂದರು.
ಕಾಸಿಂ ಅಲಿ ಅವರ ಸ್ನೇಹಿತರು ಬಂಧುಗಳು ಕಲಾವಿದರು  ಈ ಕಾರ್ಯಕ್ರಮಕ್ಕೆ ಆಗಮಿಸಿ ಸನ್ಮಾನಿಸಿ ಗೌರವಿಸಿದರು..
ರಂಗ ಜಂಗಮ ಸಂಸ್ಥೆಯ ಮುಖ್ಯಸ್ಥ ಡಾ.ಅಣ್ಣಾಜಿ ಕೃಷ್ಣಾರೆಡ್ಡಿ  ಕಾರ್ಯಕ್ರಮ ನಿರೂಪಿಸಿದರು, ವೀಣಾ ಎರ್ರಿಗೌಡ ವಂದಿಸಿದರು.