ಬದು ನಿರ್ಮಾಣ ಕಾರ್ಯದಲ್ಲಿ ನಟ ಆನಂದ

ಗಜೇಂದ್ರಗಡ, ಏ 23: ಕೃಷಿ ಕುಟುಂಬದಲ್ಲಿ ಜನಿಸಿ ಸಿನಿಮಾ ಕ್ಷೇತ್ರದಲ್ಲಿ ಕಿರು ತೆರೆಯ ನಾಯಕ ನಟನಾಗಿರುವ ಆನಂದ ಕೆ ಅವರು ಜೈ ಕೇಸರಿನಂದನ ಎಂಬ ಚಲನಚಿತ್ರ ಮೂಲಕ ಜನರಿಗೆ ಪರಿಚಿತರು . ನಟ ಆನಂದ ಜಡದೇಲಿ ಅವರು ತಮ್ಮ ಸ್ವ – ಗ್ರಾಮವಾದ ರೋಣ ತಾಲ್ಲೂಕಿನ ಇಟಗಿ ಗ್ರಾಮದಲ್ಲಿ ದುಡಿಯೋಣ ಬಾ ಎಂಬ ಯೋಜನೆಯಲ್ಲಿ ಬದು ನಿರ್ಮಾಣ ಕೆಲಸದಲ್ಲಿ ತೊಡಗಿದರು.
ಚಲನಚಿತ್ರದ ನಟರಾದ ಆನಂದ ಕೆ ಅವರು ಜೈ ಕೇಸರಿನಂದನ ಹಾಗೂ ಜಿಂಕೆ ಮುಖ ಎಂಬ ಎರಡು ಸಿನಿಮಾದಲ್ಲಿ ನಾಯಕ ನಟನಾಗಿ ಅಭಿನಯಿಸಿದರು. ಇವರು ಮಹಾತ್ಮಾ ಗಾಂಧಿ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಗೆ ಬಂದು ಕೆಲಸವನ್ನು ಮಾಡಿದರು.
ದುಡಿಯೋಣ ಯೋಜನೆಯನ್ನು ಎಲ್ಲರೂ ಸದುಪಯೋಗ ಪಡೆದುಕೊಳ್ಳಬೇಕು, ಮನೆಯಲ್ಲಿ ಸುಮ್ಮನೆ ಕುಳಿತುಕೊಳ್ಳುವ ಬದಲು ರೈತರ ಜೊತೆಗೆ ಸೇರಿ ಕೆಲಸ ಮಾಡುವುದರಲ್ಲಿ ಸಂತೋಷವಾಗುತ್ತದೆ. ಗ್ರಾಮೀಣ ಭಾಗದ ಜನರು ತುಂಬಾ ಶ್ರಮ ಜೀವಿಗಳು, ಗ್ರಾಮೀಣ ಜನರು ದಿನ ನಿತ್ಯ ತಮ್ಮ ಜಮೀನಿನಲ್ಲಿ ತೊಡಗಿರುವರು, ಈ ಬರಗಾಲದಲ್ಲಿ ಜನರಿಗೆ ದುಡಿಯೋಣ ಬಾ ಯೋಜನೆ ಉತ್ತಮವಾದದ್ದು ಎಂದು ನಟ ಆನಂದ ಕೆ. ಅವರು ಸಂತೋಷ ವ್ಯಕ್ತಪಡಿಸಿದರು.