ಬದುಕಿನ ಸಾರ್ಥಕತೆಗೆ ಸತ್ಸಂಗ ಅಗತ್ಯ

ಕೆಂಭಾವಿ :ನ.29:ಬದುಕಿನ ಸಾರ್ಥಕತೆಗೆ ಮಾನವನು
ಉತ್ತಮ ಸಂಸ್ಕಾರದ ಸತ್ಸಂಗದಲ್ಲಿ ಪಾಲ್ಗೊಂಡು ಶಿವ ಸ್ಮರಣೆ ಮಾಡುತ್ತಾ ಸಂತೃಪ್ತ ಮನೋಭಾವದಿಂದ ಸತ್ಕಾರ್ಯ ಮಾಡಿದಾಗ ನಮಗೆ ಪುಣ್ಯ ದೊರಕಲು ಸಾಧ್ಯ ಎಂದು ಪುರಾಣ ಪ್ರವಚನಕಾರ ಮಲ್ಲಯ್ಯ ಸ್ವಾಮಿ ವಡಿಗೇರಿ ಹೇಳಿದರು.
ಪಟ್ಟಣದ ಹಿರೇಮಠ ಸಂಸ್ತಾನದಲ್ಲಿ ಮಂಗಳವಾರ ಶ್ರೀ ಗುರುಕಾಂತೇಶ್ವರ ಜನ ಕಲ್ಯಾಣ ಸೇವಾ ಪ್ರತಿಷ್ಠಾನದ ವತಿಯಿಂದ ನಡೆದ ಮಾಸಿಕ ಹುಣ್ಣಿಮೆ ಶಿವಾನುಭವ ಗೋಷ್ಠಿ ಉದ್ಘಾಟಿಸಿ ಮಾತನಾಡಿದ ಅವರು, ಪಾಪ ಕಾರ್ಯಗಳನ್ನು ಬಿಟ್ಟು ಪರೋಪಕಾರ ಭಾವ ಮೈಗೂಡಿಸಿಕೊಂಡಾಗಪರಶಿವನ ಒಲುಮೆ ಸುಲಭ ಸಾಧ್ಯವಾಗುತ್ತದೆ. ಹುಣ್ಣಿಮೆ ಸತ್ಸಂಗದಲ್ಲಿ ಭಾಗಿಯಾದ ನಾವುಗಳೆ ಪುಣ್ಯವಂತರು. ಪುಣ್ಯದ ಮೂಲ ಸುಖವೆ ಹೊರತು ದುಖವಲ್ಲ ಎಂದು ಸತ್ಸಂಗದ ಮಹಿಮೆಯನ್ನು ಭಕ್ತರಿಗೆ ಉಣಬಡಿಸಿದರು.
ಪೀಠಾಧಿಪತಿ ಶ್ರೀ ಷ.ಬ್ರ ಚನ್ನಬಸವ ಶಿವಾಚಾರ್ಯ ಸ್ವಾಮಿಗಳು ಸಾನಿಧ್ಯ ವಹಿಸಿದ್ದರು. ಯಮುನೇಶ ಯಾಳಗಿ ಹಾಗೂ ಶರಣಕುಮಾರ ಯಾಳಗಿ ಅವರಿಂದ ಸಂಗೀತ ಕಾರ್ಯಕ್ರಮ ಜರುಗಿತು. ನಿಜಗುಣಿ ವಿಶ್ವಕರ್ಮ, ಅಭಿಷೇಕ ಪಾಟೀಲ ಸೇರಿದಂತೆ ಹಲವರಿದ್ದರು. ಡಾ, ಯಂಕನಗೌಡ ಪಾಟೀಲ ನಿರೂಪಿಸಿ ವಂದಿಸಿದರು.