
ಸೊರಬ. ಎ.7: ಮನುಕುಲದ ಉದ್ದಾರಕ್ಕಾಗಿ ಸಾಧು ಸಂತರು. ಶಿವಯೋಗಿಗಳು ದಾರ್ಶನಿಕರು ತಮ್ಮ ಜೀವನದುದ್ದಕ್ಕೂ ಸಮಾಜದ ಒಳಿತಿಗಾಗಿ ತುಡಿತತ್ವದಿಂದ ದುಡಿಯುತ್ತಿದ್ದರೂ ಎಂದು ಜಡೆ ಸಂಸ್ಥಾನ ಮಠದ ಡಾ. ಮ.ನಿ. ಪ್ರ. ಮಹಾಂತ ಸ್ವಾಮೀಜಿ ಹೇಳಿದರು.ಪಟ್ಟಣದ ಮುರುಘಾ ಮಠದಲ್ಲಿ ದವನದ ಹುಣ್ಣಿಮೆ ಪ್ರಯುಕ್ತ ಮಾಸಿಕ ಶಿವಾನುಭವ ಹಾಗೂ ಶಿವಶರಣೆ ಅಕ್ಕಮಹಾದೇವಿ ಜಯಂತಿಯ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು ಸಾನಿಧ್ಯ ವಹಿಸಿ ಮಾತನಾಡಿದ ಅವರು ಬದುಕಿನ ದುಗುಡತೆಯ ದುಃಖಗಳನ್ನು ದೂರ ಮಾಡಲು ಬಸವಾದಿ ಶರಣರು ಕಾಯಕತ್ವಕ್ಕೆ ಪ್ರೇರಣೆ ನೀಡಿದ್ದರು ದಾಸೋಹ ಸೇವೆ. ಕಾಯಕತ್ವ ಮನುಷ್ಯನ ಏಳಿಗೆಗೆ ಪೂರಕವಾದ ಕೈಂಕರತೆಯ ಸದ್ಗತೆಯನ್ನು ನೀಡುವ ಮೂಲಕ ಬದುಕಿನ ದುಗುಡತೆಯನ್ನು ದೂರ ಮಾಡಲು ಸಾಧ್ಯವಾಗುತ್ತದೆ ಎಂದರು. 12ನೇ ಶತಮಾನದಲ್ಲಿ ಅಕ್ಕಮಹಾದೇವಿಯು ಬಸವಾದಿ ತತ್ವದಿಂದ ಕಾಯಕತ್ವದಿಂದ ದೈನ್ಯತೆ ಮೆರೆದವಳಾಗಿದ್ದಳು ಬದುಕಿನಲ್ಲಿ ದಾನ ಧರ್ಮದ ಗುಣಗಳನ್ನು ಬೆಳೆಸಿಕೊಳ್ಳುವುದರಿಂದ ಜೀವನದ ಸಾರ್ಥಕತೆಯನ್ನ ಹೊಂದಬಹುದು ಎಂದರು. ಈ ಸಂದರ್ಭದಲ್ಲಿ ಜಡೆ ಮಠದ ರುದ್ರ ದೇವರು, ಡಿ ಶಿವಯೋಗಿ, ರೇಣುಕಮ್ಮ ಗೌಳಿ, ನಿಜಗುಣ ಚಂದ್ರಶೇಖರ್, ಶಂಕರ್ ಶೇಟ್, ನಾಗರಾಜ ಗುತ್ತಿ, ಜಯಮಾಲಾ , ಪುಷ್ಪ, ಲತಾ,ಮಾನಸ, ರೇವತಿ, ರೂಪ, ರಾಘವೇಂದ್ರ ಸೇರಿದಂತೆ ಮೊದಲಾದವರಿದ್ದರು.