ಬದುಕಿದ ಹಾಗೆ ಬರೆದ ಸಜನಾ

ಕಲಬುರಗಿ,ಜು.23-“ಸಜನಾ_82″ಸ್ಮರೋಣತ್ಸವ “ಸಜನಾ ಬದುಕು ಬರಹ ಮತ್ತು ಸಂಶೋಧನೆ,”ಕುರಿತು ಡಾ.ಎಸ್.ಜಿ.ನಾಗಲೋಟಿಮಠ ಇಂಟರ್ ನ್ಯಾಷನಲ್ ಫೌಂಡೇಷನ್ ಬೆಳಗಾವಿ,ಷಡಕ್ಷರಿಸ್ವಾಮಿ ದಿಗ್ಗಾಂವಕರ ಟ್ರಸ್ಟ್,ಸಖಿ ಓದಿನ ಬಳಗ,ಕನ್ನಡ ಸಾಹಿತ್ಯ ವಿಭಾಗ ಮತ್ತು ಕನ್ನಡ ಸಾಹಿತ್ಯ ಸಂಘ ಇವರುಗಳ ಸಂಯುಕ್ತ ಆಶ್ರಯದಲ್ಲಿ ಶ್ರೀಮತಿ ವೀರಮ್ಮ ಗಂಗಸಿರಿ ಮಹಿಳಾ ಮಹಾವಿದ್ಯಾಲಯದಲ್ಲಿ ಡಾ.ಎಸ್.ಜಿನಾಗಲೋಟಿಮಠ ಅವರ” ಬದುಕು ಬರಹ ಮತ್ತು ಸಂಶೋಧನೆ” ಕುರಿತುವಿಚಾರ ಸಂಕಿರಣ ಜರುಗಿತು.
ಮೊದಲಿಗೆ ಸಂಗೀತ ವಿಭಾಗದ ಮುಖ್ಯಸ್ಥರಾದ ಡಾ.ರೇಣುಕಾ ಮೊಲಗಿಯವರು ಪ್ರಾರ್ಥನೆ ಗೀತೆ ಹಾಡಿದರು,ಡಾ.ನಾಗೇಂದ್ರ ಮಸೂತಿಯವರು ಸ್ವಾಗತಿಸಿದರು,ಡಾ.ಶಶಿಶೇಖರ ರೆಡ್ಡಿ ಅತಿಥಿಗಳ ಪರಿಚಯ ಮಾಡಿದರು. ಡಾ.ಎಸ್.ಎಸ್.ಹಿರೇಮಠ ಪ್ರಾಸ್ತಾವಿಕವಾಗಿ ಮಾತನಾಡಿದರು.
ಡಾ.ನಾ.ಸೋಮೇಶ್ವರ ಅವರುಕಾರ್ಯಕ್ರಮ ಉದ್ಘಾಟಿಸಿ ಮಾತನಾಡುತ್ತ, ಅದ್ಭುತ ಸಾಧನೆ ಮಾಡಿದ ಸಜನಾ ಅವರ ವಿಚಾರ ಸಂಕಿರಣ ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ಆಗಬೇಕಾಗಿತ್ತು, ಅವರು ಹೊಂದಾಣಿಕೆ ಸ್ವಭಾವದವರಲ್ಲ, ಸಜನಾರಂಥ ವ್ಯಕ್ತಿ ಈ ಭೂಮಿಯ ಮೇಲೆ ಇದ್ದರು ಎಂದರೆ ಯಾರು ನಂಬರು, ಅವರು ಒಬ್ಬ ದಂತಕಥೆಯಾಗಿದ್ದರು, ಅವರದ್ದು ಬದ್ದತೆಯ ಜೀವನ, ಅವರು ಒಬ್ಬ ಮಾದರಿ ವ್ಯಕ್ತಿಯಾಗಿದ್ದರು, ಅವರದ್ದು ಬಿಚ್ಚಿದ ಜೋಳಿಗೆ ಕೃತಿ ಓದಲೇಬೇಕಾದ್ದದ್ದು ಆಗಿದೆ ಎಂದರು.
ಸಜನಾ ಬದುಕು ಕುರಿತು ಜಯವಂತ ಕಾಡದೇವರು ಮಾತನಾಡುತ್ತ, ನಾಗಲೋಟಿಮಠ ರವರ ಬದುಕು ಬರಹ ಒಂದಾಗಿತ್ತು. ಅವರು ಬದುಕಿದ ಹಾಗೆ ಬರೆದಿದ್ದಾರೆ, ಅವರ ಜೊತೆ ನಾನು ಜೀವನವಿಡಿ ಸಮೀಪ ಇದ್ದು ಅವರ ಸರಳ ಜೀವನ ಕಂಡಿರುವೆ, ಅವರು ನಡದಲೆಲ್ಲ ನಗೆ, ಹುಮ್ಮಸ್ಸು, ಆನಂದ ತುಂಬಿರುತಿತ್ತು. ಅವರು ತಮ್ಮ ಬಾಲ್ಯದ ಸ್ನೇಹಿತರನ್ನು ಕೊನೆಯವರೆಗು ಕಾಪಾಡಿಕೊಂಡು ಬಂದವರು. ಅವರ ಜೀವನ ನಮಗೆಲ್ಲಾ ಮಾದರಿಯಾಗಿದೆ ಎಂದರು.
ವಿಚಾರ ಸಂಕಿರಣದ ಪ್ರಥಮ ಗೋಷ್ಠಿಯಲ್ಲಿ ಡಾ.ನಾ.ಸೋಮೇಶ್ವರ ಅವರು ಸಜನಾ ಬರಹ ಮತ್ತು ಸಂಶೋಧನೆ ಕುರಿತು ಮಾತನಾಡುತ್ತ ಕುಷ್ಠರೋಗದ ಕುರಿತು ನಾಗಲೋಟಿ ಮಠರು ಮಾಡಿದ ಸಂಶೋಧನೆಯ ಸಾಧನೆ ಅಪಾರವಾಗಿದೆ. ಕುಷ್ಠರೋಗದ ಹುಟ್ಟು ಮತ್ತು ಹರಡುವಿಕೆಯ ಗುಟ್ಟು ಬಿಚ್ಚಿಟ್ಟರು ನಾಗಲೋಟಿಮಠರು. ಹೀಗೆ ಅವರ ಬರಹ ಮತ್ತು ಸಂಶೋಧನೆಯ ಕ್ಷಣಗಳು ಹಂಚಿಕೊಂಡರು.
ಡಾ.ಮೀನಾಕ್ಷಿ ಬಾಳಿಯವರು ಸಜನಾ ಆತ್ಮ ವೃತ್ತಾಂತ “ಬಿಚ್ಚಿದ ಜೋಳಿಗೆ” ಕೃತಿಯ ಕುರಿತು ಎಳೆ ಎಳೆಯಾಗಿ ಬಿಚ್ಚಿಟ್ಟರು, ಪ್ರತಿಯೊಬ್ಬರು ಓದಲೇಬೇಕಾದ ಕೃತಿ ಇದು ಎಂದರು.
ಡಾ.ಎಸ್.ಎಸ್ ಗುಬ್ಬಿ ಮಾತನಾಡಿದರು, ಈ ಸಭೆಯ ಅಧ್ಯಕ್ಷತೆ ವಹಿಸಿದ ಶ್ರೀಮತಿ ವಿ.ಜಿ ಕಾಲೇಜಿನ ಪ್ರಾಂಶುಪಾಲರಾದ ಡಾ.ರಾಜೇಂದ್ರ ಕೊಂಡಾ ಅವರು ಅಧ್ಯಕ್ಷೀಯ ಮಾತನಾಡಿದರು.ಇದೆ ಸಂದರ್ಭದಲ್ಲಿ ಸಜನಾ ಆತ್ಮವೃತ್ತಾಂತ ಕೃತಿ”ಬಿಚ್ಚಿದ ಜೋಳಿಗೆ”ಕುರಿತು ಬರೆದ ಹತ್ತು ಆಯ್ದ ಅತ್ಯುತ್ತಮ ಪ್ರಬಂಧಕಾರರಿಗೆ ಪುಸ್ತಕ ಬಹುಮಾನವನ್ನು ಇದೆ ಸಂದರ್ಭದಲ್ಲಿ ವಿತರಿಸಲಾಯಿತು. ವಿವಿಧ ಕಾಲೇಜಿನ ವಿದ್ಯಾರ್ಥಿಗಳು, ನಗರದ ಆಸಕ್ತ ನಾಗರಿಕರು ವಿಚಾರ ಸಂಕಿರಣದಲ್ಲಿ ಭಾಗವಹಿಸಿದ್ದರು,ಡಾ.ಶಾಂತಾ ಮಠ ಅವರು ಮತ್ತು ಪೆÇ್ರೀ.ಕವಿತಾ .ಎ ಅವರು ಕಾರ್ಯಕ್ರಮವನ್ನು ನಿರುಪಿಸಿದರು ಕೊನೆಗೆ ಡಾ.ಶಿವಗಂಗಾ ಬಿಲಗುಂದಿ ವಂದನೆ ಸಲ್ಲಿಸಿದರು.