ಬದುಕಿಗೆ ಮೌಲ್ಯಯುತ ಸಂದೇಶಗಳು ಅವಶ್ಯ- ಒಪ್ಪತ್ತೇಶ್ವರ ಶ್ರೀ

ಪೂಜ್ಯ ಮಹಾದೇವ ದೇವರ ಪಟ್ಟಾಧಿಕಾರ ಮಹೋತ್ಸವ ಉದ್ಘಾಟನೆ


ಕುಕನೂರ ಜ 13 : ಬದುಕಿನಲ್ಲಿ ಮೌಲ್ಯಾದಾರಿತ ಸಂದೇಶಗಳನ್ನ ಅಳವಡಿಸಿಕೊಂಡು ಜೀವನ ನಡೆಸಿದರೆ ಆ ಬದುಕಿಗೊಂದು ಸಾರ್ಥಕತೆ ಇರುತ್ತದೆ ಗುಳೇದಗುಡ್ಡದ ಶ್ರೀ ಮ ನಿ ಪ್ರ ಒಪ್ಪತ್ತೇಶ್ವರ ಮಹಾಸ್ವಾಮಿಗಳು ಹೇಳಿದರು.
ಅವರು ಕುಕನೂರ ಪಟ್ಟಣದ ಅನ್ನದಾನೀಶ್ವರ ಮಠದಲ್ಲಿ ಪೂಜ್ಯ ಮಹಾದೇವ ದೇವರ ಪಟ್ಟಾಧಿಕಾರ ನಿರಂಜನ ಮಹೋತ್ಸವದ ಪ್ರವಚನ ಉದ್ಘಾಟನಾ ಸಮಾರಂಭದ ಸಾನಿದ್ಯ ವಹಿಸಿ ಮಾತನಾಡುತ್ತಾ ಮನುಷ್ಯ ಎಷ್ಟೇ ಎತ್ತರಕ್ಕೆ ಬೆಳೆದರು ಅವನಲ್ಲಿ ಮೌಲ್ಯಾದಾರಿತ ಶಿಕ್ಷಣ ಮತ್ತು ಸಂಸ್ಕಾರ ನಯ ವಿನಯ ಇರದಿದ್ದರೆ ಅವನು ಬದುಕು ವ್ಯರ್ಥ ಆದ್ದರಿಂದ ಉತ್ತಮ ಸಂದೇಶಗಳನ್ನ ಕೇಳುತ್ತಾ ಅವುಗಳನ್ನ ಜೀವನ ಅಳವಡಿಸಿಕೊಂಡು ಬದುಕುವ ಕಲೆಯನ್ನ ಕಲಿಯಬೇಕೆಂದರು.
ನಂತರ ಮಾತನಾಡಿದ ಕಂಪ್ಲಿ ಪಟ್ಟಣದ ಶ್ರೀ ಮ ನಿ ಪ್ರ ಅಭಿನವ ಪ್ರಭು ಮಹಾಸ್ವಾಮಿಗಳು ಬದುಕಿನಲ್ಲಿ ಗುರುವಿನ ಕೃಪೆಬೇಕು, ಗುರುವಿನ ಕೃಪೆಯಿಂದ ಜೀವನದಲ್ಲಿ ಏನ್ನಾನ್ನದರು ಸಾಧಿಸಬಹುದು ಎಂಬುದಕ್ಕೆ ಜೀವಂತ ಉದಾಹರಣೆ ಎಂದರೆ ಶ್ರೀಮಠದ ಮಹಾದೇವ ದೇವರು, ಆದ್ದರಿಂದ ಬದುಕಿನಲ್ಲಿ ಗುರುವಿನ ಸೇವೆ ಮಾಡುವ ಮೂಲಕ ಪುನೀತರಾಗೋಣ ಎಂದರು.
ಇಟಗಿ ಗುರುಶಾಂತವೀರ ಸ್ವಾಮೀಜಿ ಮಾತನಾಡಿ ದೇವರ ಪಟ್ಟಾಧಿಕಾರ ಮಹೋತ್ಸವವನ್ನ ಸಮಸ್ತ ಭಕ್ತರು ಸೇರಿಕೊಂಡು ಅತ್ಯಂತ್ಯ ಯಶಸ್ವಿಯಾಗಿ ಮಾಡಬೇಕು, ನಾ ಮಾಡಿದೆ ನನ್ನಿಂದ ಎಂಬುದನ್ನ ಬಿಟ್ಟು ನಾವು ಮಾಡಿದೆವು ಎಂಬ ಭಾವ ಮೂಡಲಿ, ದುಡಿಯುವವರು ಇದ್ದಾಗ ಮಾತ್ರ ಕಾರ್ಯಕ್ರಮಕ್ಕೆ ಶೋಭೆ, ಕುಕನೂರ ಪಟ್ಟಣದ ಜನರು ಕಾಯಕಯೋಗಿಗಳು ಎಂದರು.
ಈ ಸಂದರ್ಭದಲ್ಲಿ ದಾನಿಗಳಿಗೆ ಗಣ್ಯರಿಗೆ ಪೂಜ್ಯರು ಸನ್ಮಾನ ಮಾಡಿದರು.
ಪೂಜ್ಯ ಮಹಾದೇವ ದೇವರು, ಗದಿಗೆಪ್ಪ ಪವಾಡಶೆಟ್ಟಿ, ಮ್ಯಾಳಿ ಈರಪ್ಪ, ವೀರಯ್ಯ ತೋಂಟದಾರ್ಯಮಠ, ಕಾಶಿಂಸಾಬ್ ತಳಕಲ್, ಅಬ್ದುಲ್ ಸಾಬ್ ತಳಕಲ್, ಕಾಶೀಂಸಾಬ್ ಸಂಗಟಿ, ಯಲ್ಲಪ್ಪ ಹೊಸಮನಿ, ಪ್ರಭು ಶಿವಶಿಂಪರ, ಬಸವರಾಜ ಹಳ್ಳಿಗುಡಿ, ಮಂಗಳೇಶ ಗವಾಯಿಗಳು, ಪ್ರಕಾಶ ಶಾಸ್ತ್ರೀ ಬಂಡಿ, ವೀರಭದ್ರಪ್ಪ ಸುಂಕದ, ಮೇಘರಾಜ ಜಿಡಗಿ, ಕಳಕಪ್ಪ ಕುಂಬಾರ ಮತ್ತು ಇತರರು ಇದ್ದರು.
ಪೋಟೊ ಪೈಲ್ : ಕುಕನೂರ ಪಟ್ಟಣದ ಅನ್ನದಾನೀಶ್ವರ ಮಠದಲ್ಲಿ ಪೂಜ್ಯ ಮಹಾದೇವ ದೇವರ ಪಟ್ಟಾಧಿಕಾರ ನಿರಂಜನ ಮಹೋತ್ಸವದ ಅಂಗವಾಗಿ ಪ್ರವಚನ ಉದ್ಘಾಟನಾ ಸಮಾರಂಭದಲ್ಲಿ ಗುಳೇದಗುಡ್ಡ ಶ್ರೀ ಪ್ರವಚನ ನೀಡಿದರು.