ಬದುಕನ್ನು ಹಸುನಗೊಳಿಸುತ್ತವೆ ಪುರಾಣ ಪ್ರವಚನ: ಶರಣ ಶಂಕರಲಿಂಗ ಮಹಾರಾಜರು

ಚಿಟಗುಪ್ಪ:ಜ.30:ತಾಲೂಕಿನ ವಳಖಂಡಿ ಗ್ರಾಮದಲ್ಲಿ ಶ್ರೀ ಸದ್ಗುರು ದತ್ತದಿಗಂಬರ ಮಹಾಯೋಗಿ ಮಾಣಿಕೇಶ್ವರ ಮಹಾರಾಜರ ಭವ್ಯ ರಥ ನಿರ್ಮಾಣದ ನಿಮಿತ್ತವಾಗಿ ಸೊಂತ ಮುಲ್ಲಾಮಾರಿ ತೀರಕ್ಷೇತ್ರದ ಶ್ರೀ ಶ್ರೀ ಶ್ರೀ ಅಭಿನವ ಬಾಲಯೋಗಿ ಶರಣ ಶಂಕರಲಿಂಗ ಮಹಾರಾಜರ ದಿವ್ಯ ಸಾನಿಧ್ಯದಲ್ಲಿ ಕಳೆದ 11 ದಿನಗಳಿಂದ ನಡೆಸುತ್ತಿದ್ದ ಕಲಬುರ್ಗಿಯ ಮಹಾದಾಸೋಹಿ ಶರಣ ಬಸವೇಶ್ವರ ಮಹಾಪುರಾಣ ಕಾರ್ಯಕ್ರಮದ ಮಂಗಲೋತ್ಸವ ಜರುಗಿತ್ತು. 2001 ಮುತ್ತೈದೆಯರಿಗೆ ಊಡಿ ತುಂಬುವ ಕಾರ್ಯಕ್ರಮ, ದೀಪಾ ಹಚ್ಚುವ ಕಾರ್ಯಕ್ರಮ ಸೇರಿ ಅನೇಕ ಕಾರ್ಯಕ್ರಮಗಳನ್ನು ನಡೆದವು. ನಂತರ ಬಾಲಯೋಗಿ ಶರಣ ಶಂಕರಲಿಂಗ ಮಹಾರಾಜರು ಮಾತನಾಡಿ ಜನರು ಪುರಾಣ, ಪ್ರವಚನ ಮತ್ತು ಸತ್ಸಂಗಗಳಲ್ಲಿ ಭಾಗವಹಿಸುವುದರಿಂದ ಜೀವನದಲ್ಲಿ ಶಾಂತಿ, ನೆಮ್ಮದಿ ಪಡೆಯುವುದರ ಜೆuಟಿಜeಜಿiಟಿeಜತೆಗೆ ದಾರಿದ್ರ್ಯ ಮತ್ತು ಪಾಪಗಳಿಂದ ಮುಕ್ತರಾಗುತ್ತಾರೆ ದೇವರನ್ನು ಒಲಿಸಿಕೊಳ್ಳಲು ಗಂಟೆ, ಜಾಗಟೆ, ಪೂಜೆ, ಪುನಸ್ಕಾರಗಳ ಅವಶ್ಯಕತೆಯಿಲ್ಲ, ಅಂತರಂಗ ಶುದ್ಧಿಯಾಗಬೇಕು. ಶರಣರು ತೀರ್ಥಕ್ಷೆ?ತ್ರಗಳಿಗೆ ಹೋಗದೆ ದೇಹವನ್ನೆ? ದೇವಾಲಯವನ್ನಾಗಿ ಮಾಡಿಕೊಂಡರು. ಉತ್ತಮರ ನೆರವಿಗೆ ಬರುವುದು ಆತ್ಮಬಲವೊಂದೇ, ಆತ್ಮಬಲದ ಮುಂದೆ ಸಾಮಾಜಿಕ ಮತ್ತು ಆರ್ಥಿಕ ಬಲಗಳು ದುರ್ಬಲವೇ ಆಗಿವೆ. ಮನುಷ್ಯನಿಗೆ ಬೇಕಾದದು ವಿಕಾರವಲ್ಲ, ವಿಕಾಸ. ಶರಣರ ವಚನಗಳನ್ನು ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು ಎಂದು ಹೇಳಿ ಆಶೀರ್ವಚನ ನೀಡಿದರು. ಪುರಾಣಿಕರಾದ ಶರಣುಕುಮಾರ ಶಾಸ್ತ್ರಿಗಳು, ಸಿದ್ದಯ್ಯಾ ಸ್ವಾಮಿ, ಷಣ್ಮುಖಯ ಸ್ವಾಮಿ, ಪ್ರವಚನವನ್ನು ನಡೆಸಿಕೊಟ್ಟರು. ಬಾಲಯೋಗಿ ಅಭಿನವ ಶರಣ ಶಂಕರಲಿಂಗ ಮಹಾರಾಜರಿಗೆ ನಾಣ್ಯಗಳ ತುಲಾಭಾರ ಮಾಡಲಾಯಿತ್ತು. ಈ ಸಂದರ್ಭದಲ್ಲಿ ಬಸವರಾಜ ಶೇರಿಕಾರ್, ಮಾಣಿಕಪ್ಪಾ ಮಾಡಗುಳ, ರಾಮಚಂದ್ರ ಮೇತ್ರೆ, ವಿಜಯಕುಮಾರ ಕುಲಕರ್ಣಿ, ಸೂರ್ಯಕಾಂತ ಪಾಟೀಲ್, ನಾಗೇಶ್ ನಿಂಗದಳ್ಳಿ, ಮಲಯ್ಯಾ ಸ್ವಾಮಿ, ಬಲವಂತ ಭುಯ್ಯರ್, ಬಸವರಾಜ ಚಿಟಗುಪ್ಪ, ಸಂತೋಷ್ ಕೋಟಗಿ, ಹಣಮಂತ ಕಣಜಿಕ್ಕರ್, ಗಿರೀಶ್, ಗೋಪಾಲ್ ರೆಡ್ಡಿ ಮುದನ್ನಾಳ ಸೇರಿದಂತೆ ಸಾವಿರಾರು ಮಹಿಳೆಯರು, ಯುವಕರು, ಹಿರಿಯರು, ಮಕ್ಕಳು ಹಾಗೂ ಸುತ್ತ ಮುತ್ತಲಿನ ಗ್ರಾಮಸ್ಥರು ಇದ್ದರು.