ಬದಲಾದ ನಿಯಮಗಳನ್ನು ಅಳವಡಿಸಿಕೊಳ್ಳಲು ಸಲಹೆ

ತಿ.ನರಸೀಪುರ: ಜ.16:- ಹೊಸ ಮೋಟಾರು ವಾಹನ ಕಾಯ್ದೆಯಂತೆ ಬದಲಾದ ನಿಯಗಳಗಳನ್ನು ವಾಹನ ಚಾಲಕರು ಅಳವಡಿಸಿಕೊಳ್ಳಬೇಕು ಎಂದು ತಿ.ನರಸೀಪುರ ಪೆÇಲೀಸ್ ಠಾಣೆಯ ಪಿಎಸ್‍ಐ ತಿರುಮಲ್ಲೇಶ ಸಲಹೆ ನೀಡಿದರು.
ಪಟ್ಟಣದ ಭಗವಾನ್ ವೃತ್ತದಲ್ಲಿ ನಡೆದ ಆಟೋ ಮಾಲೀಕರು ಮತ್ತು ಚಾಲಕರ ಸಂಘದ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು,ಹೊಸ ಮೋಟಾರ್ ಕಾಯ್ದೆ ಅತ್ಯಂತ ಕಠಿಣವಾಗಿದ್ದು,ಬದಲಾದ ವಾಹನ ಕಾಯ್ದೆಯಂತೆ ವಾಹನ ಚಾಲಕರು ಪರವಾನಗಿ,ವಾಹನ ವಿಮೆ ಮತ್ತು ವಾಹನ ದಾಖಲಾತಿಗಳನ್ನು ಕಡ್ಡಾಯವಾಗಿ ಮಾಡಿಸಬೇಕು.ಅಲ್ಲದೆ ಸಂಚಾರಿ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದು ಅವರು ತಿಳಿಸಿದರು.
ವಾಹನ ಕಾಯ್ದೆಯ ಪ್ರಕಾರ ವಾಹನಗಳನ್ನು ಚಲಾಯಿಸಬೇಕು.ಆಟೋ ಚಾಲಕರು ಸಮವಸ್ತ್ರವನ್ನು ಕಡ್ಡಾಯವಾಗಿ ಧರಿಸಬೇಕು,ಕುಡಿದು ವಾಹನಗಳನ್ನು ಚಲಾಯಿಸಬಾರದು.ಇದಕ್ಕೆ ಭಾರೀ ಮೊತ್ತದ ದಂಡ ತೆರಬೇಕಾಗುತ್ತದೆ.ವಾಹನ ಚಾಲನೆ ಮಾಡುವಾಗ ರಸ್ತೆ ಮತ್ತು ವಾಹನದ ಮೇಲೆ ಗಮನ ಕೇಂದ್ರೀಕರಿಸುವಂತೆ ಸಲಹೆ ನೀಡಿದರು.
ಕಾರ್ಯಕ್ರದಲ್ಲಿ ಹಾಜರಿದ್ದ ಜಿಲ್ಲಾ ದಸಂಸ ಸಂಚಾಲಕ ಡಾ.ಆಲಗೂಡು ಚಂದ್ರಶೇಖರ್,ಆಟೋ ಚಾಲಕರು ಕೀಳಿರಿಮೆ ಇಲ್ಲದೆ ದುಡಿಮೆ ಶಕ್ತಿಯನ್ನು ನಂಬಿ ಸ್ವಾಭಿಮಾನದ ಬದುಕು ನಡೆಸಬೇಕು.
ಆಟೋ ಚಾಲಕರು ಅತ್ಯಂತ ಪ್ರಾಮಾಣಿಕರು,ಶ್ರಮಜೀವಿಗಳು.ತಮ್ಮ ವಾಹನದಲ್ಲಿ ಪ್ರಯಾಣಿಕರು ಹಣ,ಚಿನ್ನ ಇನ್ನಿತರ ಅಮೂಲ್ಯ ವಸ್ತುಗಳನ್ನು ಮರೆತು ಹೋದ ಪಕ್ಷದಲ್ಲಿ ಅದನ್ನು ಪ್ರಾಮಾಣಿಕವಾಗಿ ಪೆÇಲೀಸ್ ಅಥವ ಮಾಲೀಕರಿಗೆ ಹಿಂತಿರುಗಿಸಿದ ಪ್ರಾಮಾಣಿಕ ಕೆಲಸವನ್ನು ಆಟೋ ಚಾಲಕರು ಮಾಡಿದ್ದಾರೆ.ಹಾಗಾಗಿ ಆಟೋ ಚಾಲಕರಿಗೆ ಸಮಾಜದಲ್ಲಿ ಗೌರವಯುತ ಸ್ಥಾನ ಇದೆ.ಅದಕ್ಕೆ ತಕ್ಕುದಾಗಿ ಚಾಲಕರು ನಡೆದುಕೊಳ್ಳಲು ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ತಾಲೂಕು ವೀರಶೈವ ಮಹಾಸಭಾ ಅಧ್ಯಕ್ಷ ತೊಟ್ಟವಾಡಿ ಮಹದೇವಸ್ವಾಮಿ, ಸೇವಾಶ್ರಯ ಫೌಂಡೇಶನ್ ಅಧ್ಯಕ್ಷ ಮಣಿಕಂಠರಾಜ್ ಗೌಡ,ತಾಲೂಕು ಒಕ್ಕಲಿಗರ ಸಂಘದ ಅಧ್ಯಕ್ಷ ಸ್ವಾಮಿನಾಥ್, ತಾಲೂಕು ನಾಯಕರ ಸಂಘದ ಅಧ್ಯಕ್ಷ ಚಿಕ್ಕಯ್ಯ ,ತಾಲೂಕು ಕುರುಬರ ಸಂಘದ ಅಧ್ಯಕ್ಷ ಮಹೇಶ್, ತಾಲೂಕು ಬಾಬು ಜೀವನ್ ರಾಂ ಸಂಘದ ಅಧ್ಯಕ್ಷ ಪುಟ್ಟಯ್ಯ, ಹೊಸಕೋಟೆ ರಾಜು, ಆಟೋ ಚಾಲಕರ ಸಂಘದ ಅಧ್ಯಕ್ಷ ನಿಲಸೋಗೆ ಕುಮಾರ್, ಹಿರಿಯೂರು ಶಿವಪ್ರಸಾದ್ ,ಆಲಗೂಡುಲಕ್ಷ್ಮಿ ,ರಮೇಶ್, ಸಿದ್ದರಾಜು ಇತರರು ಹಾಜರಿದ್ದರು.