ಬದಲಾದ ಕಾಲಘಟ್ಟಕ್ಕೆ ತಕ್ಕಂತೆ ಶಿಕ್ಷಣ ವ್ಯವಸ್ಥೆ ಕಲ್ಪಿಸಲಾಗುವುದು

ಹೊನ್ನಾಳಿ.ಜೂ.೧೧: ಜಗತ್ತು ಎಲ್ಲಾ ಕ್ಷೇತ್ರಗಳಲ್ಲೂ ಬದಲಾವಣೆ ಹೊಂದಿದೆ ಆದರೆ ಶಿಕ್ಷಣ ಕ್ಷೇತ್ರದಲ್ಲಿ ಮಾತ್ರ ಬದಲಾವಣೆ ಹೊಂದಿಲ್ಲ ಪೋದಾರ್ ಶಿಕ್ಷಣ ಸಂಸ್ಥೆಗಳು ಈಗಿನ ಪೀಳಿಗೆಗೆ ತಕ್ಕಂತೆ ಶಿಕ್ಷಣ ಕಲಿಸುವ ವ್ಯವಸ್ಥೆಯನ್ನು ಮಾಡುತ್ತಿದ್ದು ಪೋಷಕರು ಸದುಪಯೋಗಪಡಿಸಿಕೊಳ್ಳುವಂತೆ ಶಿವಮೊಗ್ಗದ ಪೋದಾರ್ ಇಂಟರ್‌ನ್ಯಾಷನಲ್ ಸ್ಕೂಲ್‌ನ ಪ್ರಾಂಶುಪಾಲರಾದ ಸುಕೇಶ್ ಸಿರಿಗಾರ್ ಕರೆ ನೀಡಿದರು.ಅವರು ತಾಲ್ಲೂಕಿನ ಕಮ್ಮಾರಘಟ್ಟೆ ಗ್ರಾಮದ ಬಳಿ ನೂತನವಾಗಿ ಪ್ರಾರಂಭವಾದ ಪೋದಾರ್ ಸ್ಕೂಲ್‌ನ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿದರು.ನಾವೆಲ್ಲರೂ 20ನೇ ಶತಮಾನದಲ್ಲಿ ಶಾಲಾ-ಕಾಲೇಜುಗಳಲ್ಲಿ ವಿದ್ಯಾಭ್ಯಾಸ ಮಾಡಿದ್ದು ನಮ್ಮ ಮುಂದಿನ ಪೀಳಿಗೆಯು 21ನೇ ಶತಮಾನದಲ್ಲಿ ಕಲಿಯುತ್ತಿದೆ ಬದಲಾದ ಕಾಲಘಟ್ಟದಲ್ಲಿ ಮಕ್ಕಳ ಮುಂದಿನ ಭವಿಷ್ಯವನ್ನು ಗಮನದಲ್ಲಿಟ್ಟುಕೊಂಡು ಭವಿಷ್ಯತ್ತಿನ ಸ್ಪರ್ಧಾತ್ಮಕ ಯುಗಕ್ಕೆ ನಿಮ್ಮ ಮಕ್ಕಳನ್ನು ಅಣಿಗೊಳಿಸುವ ಪ್ರಯತ್ನವನ್ನು ಪೋದಾರ್ ಲರ್ನ್ ಸ್ಕೂಲ್ ಮಾಡುತ್ತಿದೆ ಎಂದು ವಿವರಿಸಿದರು.ದೇಶಾದ್ಯಂತ 150ಕ್ಕೂ ಹೆಚ್ಚು ಬ್ರಾಂಚ್‌ಗಳನ್ನು ಹೊಂದಿದ ಹೆಮ್ಮೆ ನಮ್ಮ ಸಂಸ್ಥೆಯದಾಗಿದ್ದು.ನಮ್ಮ ಸಂಸ್ಥೆಯಲ್ಲಿ ಕಲಿತಿರುವ ವಿದ್ಯಾರ್ಥಿಗಳು ವಿವಿಧ ಕ್ಷೇತ್ರಗಳಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.ನೂತನವಾಗಿ ಪ್ರಾರಂಭವಾದ ಪೋದಾರ್ ಲರ್ನ್ ಸ್ಕೂಲ್ ಕಮ್ಮಾರಘಟ್ಟೆಯ ಪ್ರಾಂಶುಪಾಲರಾದ ತಿಪ್ಪೇಸ್ವಾಮಿ ನಾಯಕ್ ಮಾತನಾಡಿ ದೆಹಲಿ,ಗುಜರಾತ್,ಮುಂಬೈ,ಬೆAಗಳೂರು ಮಾದರಿಯ ಶಿಕ್ಷಣವನ್ನು ಈ ಭಾಗದ ವಿದ್ಯಾರ್ಥಿಗಳಿಗೂ ಕಲಿಸುವ ವ್ಯವಸ್ಥೆ ಮಾಡಲಾಗುವುದು ಎಂದು ತಿಳಿಸಿದರು.ಪ್ರತೀ ವಾರಕ್ಕೊಮ್ಮ ಶಿಕ್ಷಕರ-ಪೋಷಕರ ಸಭೆಗಳನ್ನು ಆಯೋಜಿಸಲು ತೀರ್ಮಾನಿಸಿದ್ದು ತಮ್ಮ ಮಕ್ಕಳ ಕಲಿಕೆಗೆ ಸಂಬAಧಪಟ್ಟAತೆ ಪೋಷಕರು ಈ ಸಭೆಗಳಿಗೆ ಕಡ್ಡಾಯವಾಗಿ ಭಾಗವಹಿಸಬೇಕೆಂದು ವಿನಂತಿಸಿದರು.ಶಾಲೆ-ಮಗು-ಪೋಷಕರು-ಶಿಕ್ಷಕರು-ಆಡಳಿತ ಮಂಡಳಿ ಹೊಂದಾಣಿಕೆಯಿAದ ಕೆಲಸ ಮಾಡಿದರೆ ಅತ್ಯುತ್ತಮ ಫಲಿತಾಂಶ ಲಭಿಸುವುದು ಇಂತಹ ವ್ಯವಸ್ಥೆ ನಮ್ಮ ಸಂಸ್ಥೆಯಲ್ಲಿದೆ ಎಂದು ವಿವರಿಸಿದರು.ಮಗುವಿನ ಮನಸ್ಥಿತಿಯನ್ನು ಅರಿತುಕೊಂಡು ಪ್ರಾರಂಭದಲ್ಲಿ ಬ್ರಿಡ್ಜ್ ಕೋರ್ಸ್ ಮುಖಾಂತರ ಮಕ್ಕಳ ಕಲಿಕೆಯ ಗುಣಮಟ್ಟವನ್ನು ಪರೀಕ್ಷಿಸಲಾಗುವುದು.ತರಬೇತಿ ಪಡೆದ ನುರಿತ ಶಿಕ್ಷಣ ವೃಂದವಿದ್ದು ಕಾಲ-ಕಾಲಕ್ಕೆ ಶಿಕ್ಷಕರಿಗೂ ತರಬೇತಿ ವ್ಯವಸ್ಥೆ ಮಾಡಲಾಗುವುದು ಈ ಮೂಲಕ ನಮ್ಮ ಸಂಸ್ಥೆಯ ಬಗ್ಗೆ ನಂಬಿಕೆ-ವಿಶ್ವಾಸದಿAದ ತಮ್ಮ ಮಕ್ಕಳನ್ನು ಸೇರಿಸಿದ್ದಕ್ಕೆ ಪೋಷಕರಿಗೆ ಧನ್ಯವಾದಗಳನ್ನು ಅರ್ಪಿಸಿದರು. ಬಿಇಒ,ಡಿಡಿಪಿಐ ಮತ್ತು ಕರ್ನಾಟಕ ಸರ್ಕಾರದಿಂದ ಮಾನ್ಯತೆ ಪಡೆದ ಸಂಸ್ಥೆಯಾಗಿದೆೆ ಎಂದು ಮಾಹಿತಿ ನೀಡಿದರು.ರಾಣೆಬೆನ್ನೂರಿನ ಪೋದಾರ್ ಲರ್ನ್ ಸ್ಕೂಲ್‌ನ ಪ್ರಾಂಶುಪಾಲರಾದ ರೂಪೇಶ್ ಅವರು ಮಾತನಾಡಿ ಮಗುವು ಶಿಕ್ಷಣವನ್ನು ಸಂತೋಷದಿAದ ಕಲಿತರೆ ದೀರ್ಘಾವಧಿ ನೆನಪಿನಲ್ಲಿಟ್ಟುಕೊಳ್ಳಲು ಸಾಧ್ಯವಿದೆ ನಮ್ಮಲ್ಲಿ ರೀಸರ್ಚ್ ಮತ್ತು ಡೆವೆಲಪ್ಮೆಂಟ್ ಮಾಡಿ ಶಾಲಾ ಪಠ್ಯಕ್ರಮವನ್ನು ತಯಾರಿಸಲಾಗಿದ್ದು ನಮ್ಮಲ್ಲಿ ಶಿಕ್ಷಣ ಪಡೆದ ವಿದ್ಯಾರ್ಥಿಗಳು ಉತ್ತಮ ಚಾರಿತ್ರö್ಯದಿಂದ ಕೂಡಿರುತ್ತಾರೆ.ಮಾನವೀಯ ಮೌಲ್ಯಗಳು,ಸಂವಹನ ಕೌಶಲ್ಯಗಳು,ಮಾನವೀಯತೆಯಂತಹ ಅತ್ಯುತ್ತಮ ಗುಣಗಳನ್ನು ಹೊಂದುತ್ತಾರೆ.ಎAತಹದೇ ಕಠಿಣ ಸಂದರ್ಭಗಳಲ್ಲೂ ಆತ್ಮಹತ್ಯೆಯಂತಹ ದುಡುಕಿನ ಕೆಲಸಕ್ಕೆ ಮುಂದಾಗದೇ ಆತ್ಮಸ್ಥೆöÊರ್ಯದಿಂದ ಪರಿಸ್ಥಿತಿಗಳನ್ನು ನಿಭಾಯಿಸಲು ಸಮರ್ಥರಾಗುತ್ತಾರೆ ಎಂದು ವಿವರಿಸಿದರು.ಶಾಲೆಗೆ ಪ್ರಥಮವಾಗಿ ದಾಖಲಾದ ತೇಜಸ್ವಿ ಮತ್ತು ಕಿಶೋರ್ ಕುಮಾರ್ ಅವರು ಟೇಪ್ ಕತ್ತರಿಸುವ ಮೂಲಕ ನೂತನವಾಗಿ ಪ್ರಾರಂಭವಾದ ಶಾಲೆಗೆ ಚಾಲನೆ ನೀಡಿದರು.ಈ ಸಂದರ್ಭದಲ್ಲಿ ಸಂಸ್ಥೆಯ ಸಂಯೋಜಕರಾದ ಉಮಾಮಹೇಶ್ವರಿ,ನಿರ್ದೇಶಕರಾದ ನವೀನ್,ಸುನಿಲ್,ವಸಂತ್,ಪೋದಾರ್ ಜಂಬೋ ಕಿಡ್ಸ್ನ ಮುಖ್ಯ ಶಿಕ್ಷಕಿ ಲೀನಾ ರಾಬರ್ಟ್,ಶಿಕ್ಷಕರಾದ ಧನಂಜಯ್,ರಾಜೇಶ್,ಮಾರುತಿ,ಶಿಕ್ಷಕಿಯರಾದ ರಶ್ಮಿ,ನೇತ್ರಾ,ಜ್ಯೋತಿ, ಮೆಂಟರ್ ಅಶೊಕ್,ಮಾರ್ಕೇಟಿಂಗ್ ಮ್ಯಾನೇಜರ್ ಕೀರ್ತಿ,ಅಕೌಟೆಂಟ್ ಮ್ಯಾನೇಜರ್ ಯಶವಂತ್ ಮತ್ತಿತರರು ಉಪಸ್ಥಿತರಿದ್ದರು.