ಬದಲಾಗುತ್ತಿರುವ ಜಗತ್ತಿನಲ್ಲಿ ಇಂದಿನ ಯುವ ಸಮುದಾಯಲ್ಲಿ ಮಾನಸಿಕ ಆರೋಗ್ಯದ ಕುರಿತು ಅರಿವು ಅಗತ್ಯ :ಡಾ. ಶ್ವೇತಾ ಕುಣಕೇರಿ

ಬೀದರ:ಅ.15:ಇಂದಿನ ಯುವಸಮುದಾಯಲ್ಲಿ ಮಾನಸಿಕ ಆರೋಗ್ಯ ಮತ್ತು ಸಾಮಾಜಿಕ ಜವಾಬ್ದಾರಿಯ ಕುರಿತು ಅರಿವು ಅಗತ್ಯವಾಗಿದೆ ಎಂದು ಬ್ರಿಮ್ಸ್ ಮಹಾವಿಧ್ಯಾಲಯದ ಮನೋರೋಗ ವಿಭಾಗದ ಮುಖ್ಯಸ್ಥರಾದ ಡಾ|| ಶ್ವೇತಾ ಕುಣಕೇರಿ ಬೀದರ ನಗರದ ಬ್ರಿಮ್ಸ್ ಮಹಾವಿದ್ಯಾಲಯದಲ್ಲಿ ಆಯೋಜಿಸಿದ ವಿಶ್ವ ಮಾನಸಿಕ ಆರೋಗ್ಯ ದಿನಾಚರಣೆಯ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಮಾನಸಿಕ ಆರೋಗ್ಯವು ಸಾರ್ವತ್ರಿಕ ಮಾನವ ಹಕ್ಕು ಎಂದು ವಿಶ್ವ ಆರೋಗ್ಯ ಸಂಸ್ಥೆ 2023ರ ಘೋಷ ವಾಕ್ಯ ಹೊರಡಿದೆ ಎಂದು ತಿಳಿಸಿದರು. ಸಾರ್ವಜನಿಕರಲ್ಲಿ ಮಾನಸಿಕ ಆರೋಗ್ಯದ ಕುರಿತು ಹೆಚ್ಚಿನ ಅರಿವು ಅಗತ್ಯವಿದು ಈ ನಿಟ್ಟಿನಲ್ಲಿ ಬ್ರಿಮ್ಸ್ ಮಾನಸಿಕ ವಿಭಾಗದಿಂದ ಉತ್ತಮ ಕಾರ್ಯನಿರ್ವಹಿಸುತ್ತಿದೆ ಎಂದು ಡಾ|| ಸುನೀಲ್ ತಾಪ್ಸೆ ಇವರು ವಿಶ್ವ ಮಾನಸಿಕ ಆರೋಗ್ಯ ದಿನಾಚಾರಣೆಯ ನಿಮಿತ್ಯ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಮುಖ್ಯ ಅತಿಥಿಗಳಾಗಿ ಡಾ|| ಮಹೇಶ ಬಿರಾದರ ಮಾತನಾಡಿ ಮನುಷ್ಯನಿಗೆ ಮಾನಸಿಕ ದೈಹಿಕ ಮತ್ತು ಸಾಮಾಜಿಕವಾಗಿ ಆರೋಗ್ಯವಂತರಿದ್ದಾಗ ಮಾತ್ರ ಸ್ವಸ್ಥ ಮತ್ತು ಆರೋಗ್ಯವಂತ ವ್ಯಕ್ತಿ ಎನ್ನಲು ಸಾಧ್ಯ ಹಾಗೂ ಮಾನಸಿಕ ವಿಭಾಗದಿಂದ ಮಾನಸಿಕ ರೋಗಿಗಳನ್ನು ಗುರುತಿಸಿ ಉತ್ತಮ ಚಿಕಿತ್ಸೆ ಹಾಗೂ ಪೂರ್ನವಸತಿ ಕಲ್ಪಿಸಿ ಮುಖ್ಯ ವಾಹಿನಿಗೆ ತರುವ ಕಾರ್ಯ ನಡೆದಿರುವುದು ಶ್ಲಾಘನಿಯವೆಂದರು. ಸಂಪನ್ಮೂಲ ವ್ಯಕ್ತಿಗಳಾದ ಡಾ|| ರಾಘವೇಂದ್ರ ವಾಘೋಲೆ ಇವರು ಮಾತನಾಡಿ ವಿಶ್ವದಲ್ಲಿ ಶೇ 20 ಜನರು ಮಾನಸಿ ಕಾಯಿಲೆಗಳಿಂದ ಬಳಲುತ್ತಿದ್ದಾರೆ ಅದರು ವಿಶೇಷವಾಗಿ ಯುವಜನತೆಯಲ್ಲಿ ಆರು ಜನರಲ್ಲಿ ಒಬ್ಬ ವ್ಯಕ್ತಿಯು ಮಾನಸಿಕ ಕಾಯಿಲೆಯಿಂದ ಬಳಲುತ್ತಿರುವುದು ಕಳವಳಕಾರಿ ಸಂಗತಿಯಾಗಿದೆ ಎಂದರು. ಮನೋರೋಗ ವಿಭಾಗದ ಮುಖ್ಯಸ್ಥರಾದ ಡಾ|| ಶ್ವೇತಾ ಪಾಟೀಲ್ ಮಾತನಾಡಿ ಯುವಕರು ಹೆಚ್ಚಿ ಸಂಖ್ಯೆಯಲ್ಲಿ ದುಷ್ಚಟಗಳಿಗೆ ಬಲಿಯಾಗುತ್ತಿದು ಯುವಕರು ಆಧುನಿಕ ತಂತ್ರಜ್ಞಾನದ ಜೋತೆಗೆ ಮಾದಕ ಪದಾರ್ಥಗಳ ಸೇವನೆ ಹೆಚ್ಚಾಗಿ ಕಂಡುಬರುತ್ತಿದು ಅವರ ಮಾನಸಿಕ ಜೀವನದ ಮೇಲೆ ಹೆಚ್ಚಿನ ದುಷಪರಿಣಾಮ ಬಿರುತಿದೆ, ಈ ಸಂಬಂಧಿಸದ ಮಾನಸಿಕ ಕಾಯಿಲೆಯಿಂದ ಬಳಲುವ ರೋಗಿಗಳು ಬ್ರಿಮ್ಸ್ ಮಾನಸಿಕ ವಿಭಾಗಕ್ಕೆ ಭೇಟಿ ನೀಡಿ ಆಪ್ತಸಮಾಲೋಚನೆ ಮತ್ತು ಸೂಕ್ತ ಚಿಕಿತ್ಸೆ ಪಡೆದುಕೊಂಡು ತಮ್ಮ ಮಾನಸಿಕ ಆರೋಗ್ಯ ಕಾಪಾಡಿಕೊಳ್ಳಲು ಕರೆ ನೀಡಿದರು. ಈಲ್ಲಾ ಅಂಗವಿಕಲ ಮತ್ತು ಹಿರಿಯ ನಾಗರಿಕರ ಕಲ್ಯಾಣ ಅಧಿಕಾರಿಗಳಾದ ನಾಗರಾಜ ಮಠ ಅವರು ಮಾತನಾಡಿ ವಿಶೇಷವಾಗಿ ವಿಕಲಚೇತನರು ಮಾನಸಿಕ ಒತ್ತಡಕ್ಕೆ ಒಳಗಾಗುತ್ತಿರುವುದು ಕಳವಳಕಾರಿ ಸೂಕ್ತ ಸಲಹೆ ಆಪ್ತ ಸಮಾಲೋಚನೆ ಹಾಗೂ ಚಿಕಿತ್ಸೆ ಪಡೆಯಲು ಸಲಹೆ ನೀಡಿದರು. ವೆದಿಕೆ ಮೇಲೆ ಡಾ|| ಪೂರ್ಣಿಮಾ ಡಾ|| ಬಾಬುರಾವ, ಡಾ|| ಪ್ರಿತಂ, ಡಾ|| ಶಿವಕುಮಾರ ಸಂಗನ ಡಾ|| ಮಲ್ಲಿಕಾರ್ಜುನ ಪ್ರಥಮ ವರ್ಷದ ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು. ಡಾ|| ರಾಜೇಶ ಹಾಗೂ ಡಾ ಶಾಲನಿ ನಿರೊಪಿಸಿದರು ಡಾ|| ಪ್ರಿತಂ ವಂದಿಸಿದರು.