ಬದನೆಕಾಯಿ ಪಲಾವ್

ಬೇಕಾಗುವ ಸಾಮಗ್ರಿಗಳು

*ಬದನೆಕಾಯಿ – ಒಂದೂವರೆ
*ಅಕ್ಕಿ – ೧ ಕಪ್
*ಅನಾನಸ್ ಹೂ – ೧ ಚಮಚ
*ಜಾಪತ್ರೆ – ೧
*ಏಲಕ್ಕಿ – ೩
*ಚಕ್ಕೆ – ೧
*ಲವಂಗ – ೪
*ಈರುಳ್ಳಿ – ೧
*ಪುದೀನ ಸೊಪ್ಪು – ೫೦ ಗ್ರಾಂ
*ಮೆಂತ್ಯೆ ಸೊಪ್ಪು – ೫೦ ಗ್ರಾಂ
*ಕೊತ್ತಂಬರಿ ಸೊಪ್ಪು – ಸ್ವಲ್ಪ
*ಶುಂಠಿ – ಬೆಳುಳ್ಳಿ ಪೇಸ್ಟ್ – ೧ ಚಮಚ
*ದಪ್ಪ ಮೆಣಸಿನಕಾಯಿ – ೨
*ಹಸಿರು ಮೆಣಸಿನಕಾಯಿ – ೨
*ಹಸಿ ಬಟಾಣಿ – ೧/೪ ಕೆ.ಜಿ
*ಅರಿಶಿಣ – ಚಮಚ
*ಗರಂ ಮಸಾಲಾ -೧ ಚಮಚ
*ಧನಿಯಾ ಪುಡಿ – ೧ ಚಮಚ
*ಅಚ್ಚಖಾರದ ಪುಡಿ – ೧ ಚಮಚ
*ಟೊಮೆಟೊ – ೧
*ತೆಂಗಿನಕಾಯಿ ತುರಿ – ೫೦ ಗ್ರಾಂ
*ತುಪ್ಪ – ೧ ಚಮಚ
*ನಿಂಬೆರಸ – ೧ ಚಮಚ
*ಉಪ್ಪು – ೧ ಚಮಚ

*ಎಣ್ಣೆ – ೭ ಚಮಚ

ಮಾಡುವ ವಿಧಾನ :
ತೆಂಗಿನಕಾಯಿ ತುರಿಗೆ ಅಗತ್ಯವಿರುವಷ್ಟು ನೀರು ಬೆರೆಸಿ ನುಣ್ಣಗೆ ರುಬ್ಬಿ, ಹಾಲು ತೆಗೆದಿಟ್ಟುಕೊಳ್ಳಿ. ಕುಕ್ಕರ್ ಎಣ್ಣೆ ಹಾಕಿ ಕಾದ ನಂತರ ಜಾಪತ್ರೆ, ಏಲಕ್ಕಿ, ಲವಂಗ, ಚಕ್ಕೆ, ಈರುಳ್ಳಿ, ಪುದೀನ, ಮೆಂತ್ಯ ಹಾಕಿ ಫ್ರೈ ಮಾಡಿ. ಇದಕ್ಕೆ ಶುಂಠಿ ಬೆಳುಳ್ಳಿ ಪೇಸ್ಟ್, ದಪ್ಪ ಮೆಣಸಿನಕಾಯಿ, ಹಸಿರು ಮೆಣಸಿನಕಾಯಿ, ಬದನೆಕಾಯಿ, ಹಸಿ ಬಟಾಣಿ, ಅರಿಶಿನ, ಗರಂ ಮಸಾಲಾ, ಧನಿಯಾ ಪುಡಿ, ಅಚ್ಚ ಖಾರದ ಪುಡಿ,
ಟೊಮೆಟೊ, ತೆಂಗಿನ ಕಾಯಿ ಹಾಲು, ನೆನೆಸಿದ ಅಕ್ಕಿ, ಬಿಸಿನೀರು, ರುಚಿಗೆ ತಕ್ಕಷ್ಟು ಉಪ್ಪು, ಕೊತ್ತಂಬರಿ ಸೊಪ್ಪು, ನಿಂಬೆರಸ ಮಿಕ್ಸ್ ಮಾಡಿ ಕೈಯಾಡಿಸಿ. ಸ್ವಲ್ಪ ತುಪ್ಪ ಹಾಕಿ ಬೇಯಿಸಿದರೆ ಬದನೆಕಾಯಿ ಪಲಾವ್ ರೆಡಿ.