ಬತ್ತುತ್ತಿರುವ ಕೆರೆ: ಪಕ್ಷಿಧಾಮ ಬಣಬಣ


ಲಕ್ಷ್ಮೇಶ್ವರ,ಮೇ.17: ಲಕ್ಷ್ಮೇಶ್ವರ ಗದಗ ರಸ್ತೆಯ ಮಾಗಡಿ ಕ್ರಾಸಿನಲ್ಲಿ ಇರುವ ವಿದೇಶಿ ಪಕ್ಷಿಗಳ ಧಾಮ ಈಗ ಕೈ ಕೊಟ್ಟ ಮಳೆಯಿಂದಾಗಿ ಬತ್ತಲಾರಭಿಸಿದ್ದು ಬತ್ತುತ್ತಿರುವ ಈಕೆರೆಯಲ್ಲಿ ಎರಡು ವರ್ಷಗಳ ಹಿಂದೆ ಬಿಟ್ಟ ಅಳಿದುಳಿದ ಮೀನುಗಳನ್ನು ಹಿಡಿಯಲು ಕೆರೆಯಲ್ಲಿ ಹಿಂಡು ಹಿಂಡಾಗಿ ಮೀನುಗಾರರು ಬಲೆ ಬೀಸುತ್ತಿದ್ದಾರೆ.
ಸುಮಾರು 134 ಎಕರೆ ವಿಸ್ತೀರ್ಣದ ಈ ಕೆರೆ ಸದಾ ತುಂಬಿತುಳುಕುತ್ತಿತ್ತು ಈ ಕೆರೆಯಲ್ಲಿ ಪ್ರತಿವರ್ಷ ಅಕ್ಟೋಬರ್ ನವೆಂಬರ್ ನಲ್ಲಿ ವಿದೇಶಿ ಪಕ್ಷಿಗಳು ತಮ್ಮ ಕಲರವ ಮಾಡುತ್ತಿದ್ದವು ಈಗ ಈ ಕೆರೆಯಲ್ಲಿ ನ ನೀರು ವಿಪರೀತವಾದ ಬಿಸಿಲು ಮತ್ತು ಕೈಕೊಟ್ಟ ಮಳೆಯಿಂದಾಗಿ ಬಹುತೇಕ ಬತ್ತುವ ಹಂತಕ್ಕೆ ತಲುಪಿದೆ.
ದಿನದಿಂದ ದಿನಕ್ಕೆ ಮಾಗಡಿ ಕೆರೆಯಲ್ಲಿ ನೀರು ಬತ್ತುತ್ತಿರುವುದರಿಂದ ಮಹಿಳಾ ಮೀನುಗಾರರು ಕೆರೆಯಲ್ಲಿ ಗುಂಪು ಗುಂಪಾಗಿ ಬಲೆ ಬೀಸಿ ಅಳಿದುಳಿದ ಮೀನಗಳನ್ನು ಹಿಡಿಯಲು ಹರಸಾಹಸ ಪಡುತ್ತಿದ್ದಾರೆ.
ಈ ಕುರಿತು ಮಾಗಡಿ ಗ್ರಾಮ ಪಂಚಾಯತಿಯ ಅತ್ಯಂತ ಹಿರಿಯ ಸದಸ್ಯ ವೀರಯ್ಯ ಮಠಪತಿಯವರು ಪ್ರತಿಕ್ರಿಯೆ ನೀಡಿ ಎರಡು ವರ್ಷಗಳ ಹಿಂದೆ ಮೀನು ಮರಿಗಳನ್ನು ಗುತ್ತಿಗೆ ಆಧಾರದ ಮೇಲೆ ಬಿಡಲಾಗಿತ್ತು ಸಾಕಷ್ಟು ಮೀನುಗಳು ಇದ್ದವು ಆದರೆ ಕಳೆದ ವರ್ಷ ಮಳೆ ಆಗದ್ದರಿಂದ ಕರೆಯಲ್ಲಿ ಮೀನುಗಳನ್ನು ಬಿಡಲಿಲ್ಲ ಈಗ ಕೆರೆ ಸಂಪೂರ್ಣ ಒಣಗಲಾರಂಭಿಸಿದ್ದು ಅಳಿದುಳಿದ ಮೀನುಗಳನ್ನು ಕೆರೆಯಲ್ಲಿ ಹಿಡಿಯುತ್ತಿದ್ದಾರೆ ಎಂದು ಹೇಳಿದರು.