ಬತ್ತಲಾರದ ಬಾವಿ ಸವೆಯದ ಪೆಪ್ಪರಮೆಂಟ್

ವಿಜಯಪುರ :ಜು.17:ಬತ್ತಲಾರದ ಬಾವಿ ಸವೆಯದ ಪೆಪ್ಪರಮೆಂಟ್ ಇದ್ದ ಹಾಗಿದೆ ಎಂದು ಖ್ಯಾತ ಮಕ್ಕಳ ಸಾಹಿತಿಗಳಾದ ಫ.ಗು. ಸಿದ್ದಾಪೂರ ಹೇಳಿದರು.
ಬಬಲೇಶ್ವರ ಶ್ರೀ ಶಾಂತವೀರ ಪದವಿಪೂರ್ವ ಕಾಲೇಜಿನ ಸಭಾಂಗಣದಲ್ಲಿ ಜರುಗಿದ ಸಾಹಿತಿ ಪ್ರೊ. ಮಹಾದೇವ ರೆಬಿನಾಳ ಅವರ ಹೈಕುಗಳ ಸಂಕಲನ ‘ಬತ್ತಲಾರದ ಬಾವಿ’ಯನ್ನು ಲೋಕಾರ್ಪಣೆಗೊಳಿಸಿ ಮಾತನಾಡುತ್ತ ನಮ್ಮ ಜಿಲ್ಲೆಯಲ್ಲಿ ಹೈಕುಗಳನ್ನು ಬರೆಯುವವರು ಬೆರಳೆಣಿಕೆಯಲ್ಲಿದ್ದಾರೆ. ಬರೆಯುವುದು ಸುಲಭ ಆದರೆ ಕೃತಿಗಳನ್ನು ಹೊರತರುವುದು ಕಷ್ಟಕರವಾಗಿದೆ. ಕನ್ನಡ ಪುಸ್ತಕ ಪ್ರಾಧಿಕಾರ ಲೇಖಕರ ಪುಸ್ತಕಗಳನ್ನು ಹೆಚ್ಚು ಹೆಚ್ಚು ಖರೀದಿಸುವಂತಾಗಬೇಕು. ನಿತ್ಯ ಅಧ್ಯಯನಶೀಲನಾದ ಸಾಹಿತಿಯಿಂದ ಮಾತ್ರ ಉತ್ತಮ ಕೃತಿಗಳು ಹೊರಬರಲು ಸಾಧ್ಯವೆಂದರು.
ವಿ.ಎನ್. ಬಿರಾದಾರ ಮಾತನಾಡಿ ಇತ್ತೀಚಿನ ದಿನಗಳಲ್ಲಿ ಪ್ರವರ್ಧಮಾನಕ್ಕೆ ಬಂದ ವಿಶಿಷ್ಟ್ಯ ಸಾಹಿತ್ಯ ಪ್ರಕಾರ ಹೈಕುಗಳಾಗಿವೆ. ನಮ್ಮ ಸಂಸ್ಥೆಯಲ್ಲಿ ಉಪನ್ಯಾಸಕರಾಗಿರುವ ಮಹಾದೇವ ರೆಬಿನಾಳರ ಪ್ರೇರಣೆಯಿಂದ ವಿದ್ಯಾರ್ಥಿಗಳು ಕವನ ರಚಿಸುವಂತಾಗಲಿ ಇಂತವರು ನಮ್ಮ ಸಂಸ್ಥೆಯಲ್ಲಿರುವುದು ನಮಗೆಲ್ಲ ಹೆಮ್ಮೆಯ ವಿಷಯ ಎಂದರು.
ಕಾರ್ಯಕ್ರಮದ ವೇದಿಕೆಯಲ್ಲಿ ಜೆ.ಜೆ. ಕುರಂದವಾಡೆ, ಎಸ್.ಜಿ. ಜಂಗಮಶೆಟ್ಟಿ, ಲಕ್ಷ್ಮೀ ನರಸಯ್ಯ ಎನ್. ಉಪಸ್ಥಿತರಿದ್ದರು.
ಸಾಹಿತಿ ಲಕ್ಷ್ಮಣ ಜಮದಾಡೆ ಕೃತಿಯನ್ನು ಪರಿಚಯಿಸಿದರು. ಕಾರ್ಯಕ್ರಮದಲ್ಲಿ ಪ್ರೊ. ಮಲ್ಲಿಕಾರ್ಜುನ ಅವಟಿ, ಡಾ. ಮುರುಗೇಶ ಸಂಗಮ, ಡಿ.ಬಿ. ನಾಯಕ, ಎ.ಎಂ. ಪಟೇಲ, ಬಿ.ಎಚ್. ಕುಂಬಾರ, ಕೆ.ಆರ್. ಅರಕೇರಿಮಠ, ನವಿತಾ ರೆಬಿನಾಳ, ಆರತಿ ದೊಡಮನಿ, ನಂದಿನಿ ಪಾಟೀಲ, ಎಲ್.ಎಸ್. ಕೆಂಗನಾಳ, ಪಿ.ಕೆ. ಚಿಕ್ಕೊಂಡ, ಜಿ.ಆರ್. ಕಾಖಂಡಕಿ, ಎಸ್.ಎಸ್. ರೊಳ್ಳಿ, ಎನ್.ಎಸ್. ಪೂಜಾರಿ, ಎಂ.ಎಚ್. ಬಟಗಿ, ಅಭಿಷೇಕ ರೆಬಿನಾಳ, ಎಸ್.ಡಿ. ಬಿರಾದಾರ, ವಿ.ಎಂ. ಜಂಗಮಶೆಟ್ಟಿ ಮುಂತಾದವರು ಉಪಸ್ಥಿತರಿದ್ದರು.

ಎ———————————–

ಫ.ಗು.ಹಳಕಟ್ಟಿ ಅವರ ಕೊಡುಗೆ ಅನನ್ಯ : ಪ್ರಕಾಶ ಬಗಲಿ

ವಿಜಯಪುರ: ಜು.17:ಫÀ.ಗು.ಹಳಕಟ್ಟಿ ವ್ಯಕ್ತಿತ್ವ ಅಗಾಧವಾದ್ದು, ಅವರ ಕೊಡುಗೆ ಅನನ್ಯವಾಗಿದೆ ಎಂದು ಸಿದ್ಧೇಶ್ವರ ಸಹಕಾರಿ ಬ್ಯಾಂಕ್ ಅಧ್ಯಕ್ಷರಾದ ಪ್ರಕಾಶ ಎಸ್. ಬಗಲಿ ಹೇಳಿದರು.
ಅವರು ನಗರದ ಕಂದಗಲ್ಲ ಹನುಮಂತರಾಯ ರಂಗಮಂದಿರದಲ್ಲಿ ಡಾ.ಫ.ಗು ಹಳಕಟ್ಟೀಯವರ 143 ನೇ ಜನ್ಮದಿನದ ಅಂಗವಾಗಿ ವಿಜಯಪುರ ಪ್ರಿಂಟಿಂಗ್ ಪ್ರೆಸ್ ಮತ್ತು ವರ್ಕರ್ಸ್ ಅಸೋಶಿಯೇಷನ್ ಅವರು ಹಮ್ಮಿಕೊಂಡಿದ್ದ ಮುದ್ರಣ ಸಾಧಕರಿಗೆ ಮುದ್ರೋಧ್ಯಮಿ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.
ಇಂತಹ ಕಾರ್ಯಕ್ರಮವನ್ನು ಮಾಡಿದ ಅಸೋಸಿಯೇಶನ್‍ದವರು ಇತಿಹಾಸ ಸೃಷ್ಟಿಸಿದ್ದಾರೆ. ಫ.ಗು.ಹಳಕಟ್ಟಿಯವರ ಪುಣ್ಯದಿಂದಲೆ ಸಿದ್ಧೇಶ್ವರ ಬ್ಯಾಂಕ್ ಬೆಳೆಯಲು ಕಾರಣವಾಗಿದೆ. ಫ.ಗು.ಹಳಕಟ್ಟಿಯವರು ಸೈಕನಲ್ಲಿ ತಿರುಗಾಡಿ ಶಿಕ್ಷಣ ಸಂಸ್ಥೆಯಾದ ಬಿ.ಎಲ್.ಡಿ.ಸೇರಿದಂತೆ ಅನೇಕ ಸಂಸ್ಥೆಗಳನ್ನು ಅಭಿವೃದ್ಧಿಯ ಹೊಸ ಶೆಖೆ ಪ್ರಾರಂಭಿಸಲು ಫ.ಗು. ಹಳಕಟ್ಟಿಯವರ ಅಪಾರವಾಗಿ ಶ್ರಮಿಸಿದ್ದಾರೆ ಎಂದರು.
ಕರ್ನಾಟಕ ರಾಜ್ಯ ಕಾರ್ಯನಿರತರ ಪತ್ರಕರ್ತರ ಸಂಘದ ಅಧ್ಯಕ್ಷರಾದ ಸಂಗಮೇಶ ಚೂರಿ ಮಾತನಾಡಿ, ವಚನ ಪಿತಾಮಹ ಜನ್ಮದಿನವನ್ನು ವಿಶೇಷವಾಗಿ ಆಚರಿಸುತ್ತಿರುವಿರಿ. ಅವರು ಇಡೀ ಜಗತ್ತಿಗೆ ಚಿರಪರಿಚಿತರಾಗಿದ್ದಾರೆ. ಡಿಜಿಟಲ್ ಮಾಧ್ಯಮ ಬಂದಿದೆ ಈಗ ಎಲ್ಲರಿಗೂ ಸರಳವಾಗಿದೆ. ನಿಮ್ಮನ್ನು ಬಳಸಿಕೊಳ್ಳದ ಯಾರೂ ಇಲ್ಲ. ಪ್ರಿಟಿಂಗ್ ಪ್ರೆಸ್ ಕೆಲಸ ಶ್ರೇಷ್ಠ ಕಾಯಕವಾಗಿದೆ. ಕಾಯಕಮಾಡಿದವರಿಗೆ ಮುದ್ರೋದ್ಯಮ ಪ್ರಶಸ್ತಿ ನೀಡಿರುವುದು ಇಡೀ ರಾಜ್ಯಕ್ಕೆ ಮಾದರಿಯಾಗಿದೆ ಎಂದರು.
ಈ ಸಂದರ್ಭದಲ್ಲಿ ಉಪನ್ಯಾಸಕ ಹಾಗೂ ಖ್ಯಾತ ವಾಗ್ಮಿ ವಿಷ್ಣು ಎಂ.ಶಿಂಧೆ ಉಪನ್ಯಾಸ ನೀಡಿ ಮಾತನಾಡಿ, ನನಗೂ ಕೂಡಾ ಮುದ್ರಣ ಮಾಧ್ಯಮದ ಅನುಭವ ಇದೆ. ಇಂದು ನಾವು ಮುದ್ರಣ ಮಾಧ್ಯಮ ಅವಲಂಬಿಸಿದ್ದೇವೆ. ನಮ್ಮ ಹಿರಿಯರು ರಾಜ್ಯರ ಕಾಲದಲ್ಲಿ ಕಲ್ಲಿನ ಮೇಲೆ ಶಾಸನಗಳನ್ನು ಕೆತ್ತುತಿದ್ದರು ನಂತರ ತಾಮ್ರದ ಪತ್ರ ಅದ ನಂತರ ಬಂದಿದ್ದು ಕಾಗದ ಮೇಲೆ ಮುದ್ರಿಸುವುದು. ಅದು ಬಂದಿದ್ದು ಪೆÇೀರ್ಚು ಗೀಜರ್ ಕಾಲದಲ್ಲಿ. ಮೊಬೈಲ್ ಬಂದ ಮೇಲೆ ಇಂದು ಎಲ್ಲರೂ ಮುದ್ರಕರು ಮತ್ತು ಫೆÇೀಟೋಗ್ರಾಫರ್ ಆಗಿದ್ದಾರೆ. ಇಂದು ಮುದ್ರಣ ಮಾಧ್ಯಮ ಬಹಳಷ್ಟು ವಿಶಾಲವಾಗಿ ಬೆಳೆದಿದೆ. ಜೊತೆಗೆ ಮುದ್ರಕರು ಅಷ್ಟೇ ಸಮಸ್ಯೆ ಎದುರಿಸುತ್ತಿದ್ದಾರೆ ಹಳಕಟ್ಟಿಯವರು ಮುದ್ರಣ ಮಾಧ್ಯಮದಲ್ಲಿ ತೊಡಗಿಸಿಕೊಂಡಾಗ ಮೈಯೊಳಗಿನ ಅಂಗಿ ಹರದಿತ್ತು ಅದರ ಮೇಲೆ ಕೋಟು ಧರಿಸಿದ್ದರಿಂದ ಹರಿದ ಅಂಗಿ ಸಮಾಜಕ್ಕೆ ಕಾಣುತ್ತಿರಲ್ಲಿಲ್ಲ ಅದೇ ಪರಸ್ಥಿತಿ ಇಂದಿನ ಮುದ್ರಾಕರದ್ದಾಗಿದೆ. ಇಂದು ಮುದ್ರಣ ಮಾಧ್ಯಮ ಹಲವು ಸಂಕಟ ಸವಾಲುಗಳನ್ನು ಎದುರಿಸುತ್ತಿದೆ ಎಂದರು.
ನಾವು ಹಿಂದಿನ ಕಾಲದಲ್ಲಿ ಹೇಳುತ್ತಿದ್ದೆವು ಇಂದು ಚಿಕ್ಕ ಮಕ್ಕಳು ಕೈಗೆ ಮೊಬೈಲ್ ಕೊಡದಿದ್ದರೆ ಮಕ್ಕಳು ಊಟ ಮಾಡುವುದಿಲ್ಲ ಇಂದು ಮಕ್ಕಳು ಮೊಬೈಲ್ ಗೀಳಿಗೆ ಬಿದ್ದಿದ್ದಾರೆ ಮುಂದೊಂದು ದಿನ ಇದು ದೊಡ್ಡ ಪರಿಣಾಮ ಬೀರುತ್ತದೆ ಎಂದು ಆತಂಕ ವ್ಯಕ್ತಪಡಿಸಿದರು. ಇಂದು ಜನ ದೃಶ್ಯ ಮಾಧ್ಯಮದಿಂದ ಕಲಿಯುತ್ತಿದ್ದಾರೆ ಮುದ್ರಣ ಮಾಧ್ಯಮದಿಂದ ದೂರ ಸರಿಯುತ್ತಿದ್ದಾರೆ ಮುದ್ರಣ ಮಾಧ್ಯಮ ಸಂಕಷ್ಟ ಎದುರಿಸುತ್ತಿರುವುದರಿಂದ ಸರ್ಕಾರ ಮುದ್ರಕರಿಗೆ ವಿಶೇಷ ಯೋಜನೆ ರೂಪಿಸಿ ಆರ್ಥಿಕವಾಗಿ ಸಬಲರನ್ನಾಗಿ ಮಾಡಲು ಮುಂದಾಗಬೇಕು ಎಂದರು. ಈ ಸಂಘಟನೆ ತಾಲೂಕು ಮಟ್ಟದಲ್ಲಿ ವಿಸ್ತರಿಸಿ ಗ್ರಾಮೀಣ ಭಾಗದ ಮುದ್ರಕರ ಸಮಸ್ಯೆಗಳ ಡಾಟಾ ಸಂಗ್ರಹಿಸುವ ಕಾರ್ಯ ಮಾಡಬೇಕು ಜೊತೆಗೆ ಇದು ಸರ್ಕಾರಕ್ಕೆ ತಲುಪಿಸಿದರೆ ಸರಕಾರ ತಮ್ಮ ಪರಿಹಾರ ಒದಗಿಸಬಹುದೆಂದು ಎಂದು ಆಶಾಭಾವನೆ ವ್ಯಕ್ತಪಡಿಸಿದರು.
ಕಲಬುರ್ಗಿ ವಿಭಾಗ ಸಂಚಾಲಕರಾದ ಕಲಬುರ್ಗಿ ವಿಭಾಗ ಸಂಚಾಲಕರಾದ ರವಿ ಮುಕ್ಕಾ ಮಾತನಾಡಿ, ಒಳ್ಳೆಯ ಮನುಷ್ಯರಾದರೆ ಏನೆಲ್ಲ ಸಾಧಸಬಹುದಾಗಿದೆ. ವಿಜಯಪುರ ಜಿಲ್ಲೆ ಭೂಮಿ ಪುಣ್ಯಭೂಮಿಯಾಗಿದೆ.
ಇದೇ ಸಂದರ್ಭದಲ್ಲಿ ಪತ್ರಕರ್ತ ಹಾಗೂ ಸಾಹಿತಿ ಕಲ್ಲಪ್ಪ ಶಿವಶರಣ ಅವರ ಸಂಪಾದಕತ್ವದ ಅಚ್ಚುಮೆಚ್ಚು ಪುಸ್ತಕದ ಮುಖಪುಟವನ್ನು ಬಿಡುಗಡೆಗೊಳಿಸಲಾಯಿತು.
ಈ ಸಂದರ್ಭದಲ್ಲಿ ವಿಜಯಪುರ ಪ್ರಿಂಟಿಂಗ್ ಪ್ರೆಸ್ ಮತ್ತು ವರ್ಕರ್ಸ್ ಅಸೋಶಿಯೇಷನ್ (ರಿ) ಸಂಘದ ಅಧ್ಯಕ್ಷ ಚಿದಾನಂದ ವಾಲಿ, ವಿಜಯಪುರ ಪ್ರಿಂಟಿಂಗ್ ಪ್ರೆಸ್ ಮತ್ತು ವರ್ಕರ್ಸ್ ಅಸೋಸಿಯೇಶನ್ (ರಿ) ಗೌರವಾದ್ಯಕ್ಷರಾದ ಚಂದ್ರಶೇಖರ ಸಿ.ಬುರಾಣಪೂರ, ಮಹಾನಗರ ಪಾಲಿಕೆ ಮಾಜಿ ಸದಸ್ಯರಾದ ಉಮೇಶ ವಂದಾಲ, ಪ್ರಭು ಮಲ್ಲಿಕಾರ್ಜುನಮಠ, ಹೆಚ್.ಎಂ.ಬಾಗವಾನ ವೇದಿಕೆ ಮೇಲಿದ್ದರು.
ಇದೇ ಸಂದÀರ್ಭದಲ್ಲಿ ಟ್ರೆಡಲ್ ಮಶೀನ್ ನಲ್ಲಿ 30 ರಿಂದ 40 ವರ್ಷ ಮುದ್ರಕ, ಮಾಲಿಕರಾಗಿ ಸೇವೆ ಸಲ್ಲಿಸಿದ ಮಹನೀಯರಾದ ಶ್ರೀಮಹಾಂತೇಶ ಪ್ರಭು, ಬಸವರಾಜ ಅಶೋಕ ಹೆಬ್ಬಳ್ಳಿ, ಮುದ್ದೇಬಿಹಾಳದ ಅಂಬಿಕಾ ಆಫಸೆಟ್, ಬಾಗೇವಾಡಿಯ ಚನ್ನಬಸವೇಶ್ವರ ಆಫ್ ಸೆಟ್ ಪ್ರಿಂಟರ್ಸ, ಪ್ರಿಂಟರ್ ರಾಹುಲ ಠೋಣೆ ಸೇರಿದಂತೆ ಇನ್ನಿತರ ಮುದ್ರಕ, ಮಾಲಿಕ ಸಾಧಕರಿಗೆ ಮದ್ರೋದ್ಯಮಿ ಪ್ರಶಸ್ತಿಯನ್ನು ನೀಡಿ ಸಾಲು, ಹಾರ ಹಾಕಿ ಸನ್ಮಾನಿಸಿ ಗೌರವಿಸಲಾಯಿತು.
ಇದೇ ಸಂದರ್ಭದಲ್ಲಿ ಐಶ್ವರ್ಯ ಗಾಯಕವಾಡ ಭರತನಾಟ್ಯ ಹಾಗೂ ನಿಜಗುಣಿ ಶಿವಶರಣ ಬಾನಿನಲ್ಲಿ ಮೂಡಿಬಂದ ಚೆಂದಾಮಾಮಾ ನೃತ್ಯ ಎಲ್ಲರನ್ನು ಮನ ಸೂರೆಗೊಳಿಸಿತು.
ಈ ಸಂದರ್ಭದಲ್ಲಿ ಕಾರ್ಯದರ್ಶಿಗಳಾದ ವೆಂಕಟೇಶ ಕಪಾಳೆ, ನಿರ್ದೇಶಕರುಗಳಾದ ಮಹ್ಮದ ಹನೀಫ ಮುಲ್ಲಾ, ಮೃತ್ಯುಂಜಯ ನಿ.ಶಾಸ್ತ್ರಿ, ಜಗದೀಶ ಶಹಾಪುರ, ನಾಗರಾಜ ಬಿಸನಾಳ, ಬಸವರಾಜ ಹಾವಿನಾಳ, ದೀಪಕ ಜಾಧವ, ಉಮೇಶ ಶಿವಶರಣ, ನಬಿಲಾಲ ಮಕಾನದಾರ, ಮಂಜುನಾಥ ರೂಗಿ, ಸುರೇಶ ಗೊಳಸಂಗಿ, ಶ್ರೀಮಂತ ಬೂದಿಹಾಳ, ತೇಜಶ್ವಿನಿ ಕುಲಕರ್ಣಿ ಹಾಗೂ ಲಾಯಪ್ಪ ಇಂಗಳೆ, ಕು.ಕೃತಿಕಾ ವಾಲಿ, ಶಶಿಕಲಾ ವಾಲಿ, ಅಂಬಿಕಾ ಜಾಧವ, ನಾಗರಾಜ ಬಿದರಿ, ದೀಪಿಕಾ ಬಿದರಿ, ಸಂತೋಷ ಹುಣಶ್ಯಾಳ ಸೇರಿದಂತೆ ಮುದ್ರಣ ಮಾಲೀಕರು ಹಾಗೂ ಮುದ್ರಣ ಕಾರ್ಮಿಕರು-ಬಂಧುಬಳಗದವರು ಅಪಾರ ಜನರು ಉಪಸ್ಥಿತರಿದ್ದರು.
ಶ್ರೀಮಂತ ಬೂದಿಹಾಳ ನಿರೂಪಿಸಿದರು. ಉಮೇಶ ಕುಲಕರ್ಣಿ ವಂದಿಸಿದರು.

ಬಿ——————————

ಸಂಖ್ಯಾ ಶಾಸ್ತ್ರದ ಪಿತಾಮಹ ಭಾಸ್ಕರಾಚಾರ್ಯರು : ಡಾ ಆನಂದ ಕುಲಕರ್ಣಿ

ವಿಜಯಪುರ :ಜು.17: ಭಾಸ್ಕರಾಚಾರ್ಯರು ವಿಜಯಪುರ ಜಿಲ್ಲೆಯ ಬಿಜ್ಜರಗಿ ಗ್ರಾಮದಲ್ಲಿ ಜನಸಿ ಜಗತ್ತಿಗೆ ಕೊಡುಗೆ ನೀಡಿದ ಮಹಾನ ಚೇತನ, ಅಂಕಿಅಂಶಗಳ ಜೀವಾಳವೇ ಶೂನ್ಯದಿಂದ, ಇದರ ಕೊಡುಗೆ ನೀಡುವದರ ಮೂಲಕ ಸಂಖ್ಯಾಶಾಸ್ತ್ರದ ಪಿತಾಮಹರಾದರು ಎಂದರು.
ವಿಜಯಪುರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ತಾಲೂಕ ಮತ್ತು ನಗರ ಘಟಕ ವತಿಯಿಂದ ಹಮ್ಮಿಕೊಂಡ ಡಿ ಎಸ್ ಗುಡ್ಡೋಡಗಿ ಅವರ ದತ್ತಿ ಕಾರ್ಯಕ್ರಮದ ಉಪನ್ಯಾಸಕರಾಗಿ ಮಾತನಾಡಿದರು.
ಇನ್ನೊಬ್ಬ ಉಪನ್ಯಾಸಕರಾದ ಸಂತೋಷ ಬಂಡೆ ಸಾಹಿತಿಗಳು ಮಾತನಾಡಿ ಇಂದು ವಚನಗಳು ಬಾಯಿಮಾತಿನ ರುಚಿಗಾಗಿ ಮಾತನಾಡುವದು ಬೆಳೆದು ಬರುತ್ತಿದೆ ಇದು ಒಳ್ಳೆಯ ಬೆಳವಣಿಗೆ ಅಲ್ಲ, ಹನ್ನೆರಡನೇ ಶತಮಾನದ ಶರಣರು ಸರ್ವಕಾಲಿಕ ರತ್ನಗಳು ಅವರ ನಡೆನುಡು ಅನುಕರಣೀಯ ಹಡಪದ ಅಪ್ಪಣ್ಣ, ಮಡಿವಾಳ ಮಾಚಿದೇವ, ಡೋಹರ ಕಕ್ಕಯ್ಯ, ಅಕ್ಕಮ್ಮ ನೀಲಾಂಬಿಕೆ ಮುಂತಾದ ವಚನಕಾರರು ಇಂದಿಗೂ ಆದರ್ಶ ಪ್ರಾಯರಾಗಿದ್ದಾರೆ ಎಂದರು. ಸಾನಿಧ್ಯವಹಿಸಿದ ವೇದಮೂರ್ತಿ ಚಿದಾನಂದ ಹಿರೇಮಠ ಅವರು ಮಾತನಾಡಿ ಎಲ್ಲದಕ್ಕೂ ಲೆಕ್ಕ ಬೇಕು, ಲೆಕ್ಕ ಬದುಕನ್ನು ಹಸನುಗೊಳಿಸುತ್ತದೆ, ಶರಣರು ನುಡಿದಂತೆ ನಡೆದರು ಹಿರಿಯರು ಕಂಡುಹಿಡಿದ ಸತ್ಯದ ಪುನರ್ ಅನ್ವೇಷಣೆ ಆಗಬೇಕಿದೆ, ಜೀವನಕ್ಕೂ ಗಣಿತಕ್ಕೂ ಸಂಬಂಧವಿದೆ, ಜೀವನದಲ್ಲಿ ಲೆಕ್ಕತಪ್ಪಬಾರದು ಎಂದರು.
ಕಾರ್ಯಕ್ರದಲ್ಲಿ ಮುಖ್ಯ ಅತಿಥಿಗಳಾಗಿ ಡಾ ಮಮತಾ ಬನ್ನೂರ,ಅರ್ಜುನ ಶಿರೂರ,ಸ್ಮೀತಾ ಇಂಡಿಕರ್, ನೀಲಗಂಗಾ ಅಣ್ಣೆಪ್ಪನವರ ಮಾತನಾಡಿದರು. ಕಾರ್ಯದಲ್ಲಿ ಡಾ ಸಂಗಮೇಶ ಮೇತ್ರಿ ಪ್ರಾಸ್ತಾವಿಕ ಮಾತನಾಡಿದರು. ಕಾರ್ಯಕ್ರಮ ಉದ್ಘಾಟಿಸಿದ ಸಂಗಮೇಶ ಗುಡ್ಡೋಡಗಿ ಅವರು ದತ್ತಿ ಉಪನ್ಯಾಸಗಳ ಮೂಲಕ ಸಾಹಿತ್ಯ ಕ್ಷೇತ್ರದ ಕೊಡುಗೆ ಬೆಳೆಯುತ್ತದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷ ಸ್ಥಾನವಹಿಸಿದ ರಾಜ್ಯ ಮತ್ತು ರಾಷ್ಟ್ರ ಪ್ರಶಸ್ತಿ ಪುರಸ್ಕøತರಾದ ಡಾ ಜಿ ಡಿ ಕೊಟ್ಟಾಳ ಮಾತನಾಡಿ ಕನ್ನಡ ಸಾಹಿತ್ಯ ಪರಿಷತ್ತು ಜನ ಸಾಮನ್ಯರ ಪರಿಷತ್ತು ಆಗುತ್ತಿದೆ, ಹೊಸ ಹೊಸ ಪ್ರತಿಭೆಗಳಿಗೆ ಅವಕಾಶ ನೀಡುತ್ತೀರುವದು ಶ್ಲ್ಯಾಘನೀಯ ಎಂದರು. ದತ್ತಿ ವಿಷಯಗಳಿಗೆ ಪ್ರತಿಭಾವಂತರನ್ನು ಗೋಷ್ಠಿಗಳಿಗೆ ಪರಿಚಯಿಸುತ್ತಿರುವದು ಸ್ತುತ್ಯಾರ್ಯ ಎಂದರು,
ನಾಟಕ ಅಕಾಡಮಿ ಮಾಜಿ ಅಧ್ಯಕ್ಷ ಎಲ್ ಬಿ ಶೇಖ ಅವರು ರಂಗ ಗೀತೆಗಳೊಂದಿಗೆ ಪ್ರಾರಂಭವಾಯಿತು. ಬಾಲ ಪ್ರತಿಭೆಗಳಾದ ಸನ್ನಧಿ ಕಲ್ಯಾಣಪ್ಪಗೋಳ, ರೋಹನ್ ಕೊಟ್ನಾಳ ವಚನ ಸಾದರಪಡಿಸಿದರು, ಕಸಾಪ ಗೌರವ ಕೋಶಾಧ್ಯಕ್ಷರಾದ ಡಾ ಸಂಗಮೇಶ ಮೇತ್ರಿ ಪ್ರಾಸ್ತಾವಿಕವಾಗಿ ಮಾತನಾಡಿ ಕೊಡುಗೈ ದಾನಿಗಳಾದ ಡಿ ಎಸ್ ಗುಡ್ಡೋಡಗಿಯವರ ಸಮಾಜ ಸೇವೆ ಶ್ಲ್ಯಾಘನೀಯ ಎಂದರು.
ಕವಿತಾ ಕಲ್ಯಾಣಪ್ಪಗೋಳ ಸ್ವಾಗತಿಸಿ ನಿರೂಪಿಸಿದರು. ಶೋಭಾ ಮೆಡೆದಾರ ವಂದಿಸಿದರು ವೇದಿಕೆಯಲ್ಲಿ ಕಾರ್ಯಕ್ರಮದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಹಾಸಿಂಪೀರ ವಾಲೀಕಾರ , ಜಿಲ್ಲಾ ದತ್ತಿ ಸಂಚಾಲಕರಾದ ರಾಜೇಸಾಬ ಶಿವನಗುತ್ತಿ, ಉಪಸ್ಥಿತಿತರದ್ದರು ಮುಖ್ಯ ಅತಿಥಿಗಳಾಗಿ ಡಾ ಮಮತಾ ಬನ್ನೂರ,ಅರ್ಜುನ ಶಿರೂರ,ಸ್ಮೀತಾ ಇಂಡಿಕರ್ ವೇದಿಕೆ ಮೇಲಿದ್ದರು.
ಕಾರ್ಯಕ್ರಮದಲ್ಲಿ ಕಮಲಾ ಮುರಾಳ, ಸುಖದೇವಿ ಅಲಬಾಳಮಠ,ಸಿದ್ರಾಮಯ್ಯ ಲಕ್ಕುಂಡಿಮಠ,ಅನ್ನಪೂರ್ಣ ಬೆಳ್ಳಣ್ಣವರ,ಎ ಡಿ ಮುಲ್ಲಾ,ಅಲ್ಲಪ್ರಭು ಮಲ್ಲಿಕಾರ್ಜುನಮಠ,ಪ್ರದೀಪ್ ಕುಲಕರ್ಣಿ,ಲಕ್ಷ್ಮಿ ಎಸ್ ತೊರವಿ,ಅಹ್ಮದ ವಾಲೀಕಾರ, ಗೀತಾ ಕುಲಕರ್ಣಿ,ಮಹಾದೇವಿ ತೆಲಗಿ,ಶಾಂತಾ ವಿಭೂತಿ, ಪೂಜ್ಯ ಬಡಿಗೇರ,ಭುವನೇಶ್ವರಿ ಹಿರೇಮಠ,ಎಸ್ ಎಂ ಭಾಟಿ,ಸಲೀಮ್ ಬಾಗವಾನ,ಮೈಬೂಬ ಕೋಲಾರ,ಶ್ರೀಧರ ಹೆಗಡೆ, ತೇಜಸ್ವಿನಿ ವಾಂಗಿ,ತ್ರಿವೇಣಿ ಬುರ್ಲಿ,ಪ್ರದೀಪ ನಾಯ್ಕೋಡಿ ಮುಂತಾದವರು ಉಪಸ್ಥಿತರಿದ್ದರು.