ಬಣ್ಣ..ಬಣ್ಣದ…ಲೋಕದಲ್ಲಿ ದಾವಣಗೆರೆ ಯುವಸಮೂಹ… 

ದಾವಣಗೆರೆ.ಮಾ.೮; ಬಣ್ಣದಲ್ಲಿ ಮುಂದೆದ್ದ ಯುವಸಮೂಹ,ಡಿಜೆ ಸದ್ದಿಗೆ ಸಖತ್ ಸ್ಟೆಪ್ ಹಾಕಿದ ಯುವತಿಯರು.ಚಿಣ್ಣರ ಕಿರುಚಾಟದ ಸಂಭ್ರಮ ಇದೆಲ್ಲಾ ದಾವಣಗೆರೆಯ ರಾಮ್ ಅಂಡ್ ಕೋ ಸರ್ಕಲ್ ನಲ್ಲಿ ಕಂಡು ಬಂದ ದೃಶ್ಯ.ಹೋಳಿ ಹಬ್ಬದ ಹಿನ್ನೆಲೆಯಲ್ಲಿ ದಾವಣಗೆರೆ ನಗರಾದ್ಯಂತ ಯುವಕರು ಬಣ್ಣ ಹಚ್ಚಿಕೊಂಡು ಸಂಭ್ರಮಿಸುತ್ತಿದ್ದಾರೆ.ವಿವಿಧ ಬಡಾವಣೆಗಳಲ್ಲಿ ಮಕ್ಕಳು, ಹಿರಿಯರೆನ್ನದೆ ಎಲ್ಲರೂ ಹಬ್ಬದ ಸಡಗರದಲ್ಲಿ ಪಾಲ್ಗೊಂಡಿದ್ದಾರೆ. ಕುಟುಂಬದವರು, ಸ್ನೇಹಿತರು ಬಣ್ಣ ಹಚ್ಚಿಕೊಂಡು ಖುಷಿ ಪಡುತ್ತಿದ್ದಾರೆ.ಪ್ರತಿಬಾರಿಯಂತೆ ರಾಮ್ ಅಂಡ್ ಕೋ ವೃತ್ತ ಸೇರಿದಂತೆ ಹಲವೆಡೆ ವಿವಿಧ ಸಮಿತಿ ವತಿಯಿಂದ ಹೋಳಿ ಹಬ್ಬ ಆಚರಣೆ ಮಾಡಲಾಗುತ್ತಿದೆ. ಬಣ್ಣ ಹಚ್ಚಿಕೊಂಡು, ತಮಟೆ ಮತ್ತು ಹಾಡಿಗೆ ಯುವ ಸಮೂಹ ಸಖತ್ ಡಾನ್ಸ್ ಮಾಡುತ್ತಿದ್ದಾರೆ. ಪ್ರತಿ ವರ್ಷದಂತೆ ವಿವಿಧ ಬಡಾವಣೆಗಳಲ್ಲಿ  ಮಕ್ಕಳು,ಮಹಿಳೆಯರು, ಯುವಕರು ಹಬ್ಬದ ಆಚರಣೆ ಮಾಡುತ್ತಿದ್ದಾರೆ.ಇನ್ನು, ಬಣ್ಣದ ಒಕುಳಿಯಲ್ಲಿ ಮಿಂದಿದ್ದ ಯುವಕರು ದಾವಣಗೆರೆ ನಗರದ ವಿವಿಧೆಡೆ ಬೈಕ್ ರೈಡ್ ಮಾಡುತ್ತಿದ್ದಾರೆ. ನಗರದಾದ್ಯಂತ ಬೈಕ್‍ನಲ್ಲಿ ಸುತ್ತಾಡಿದ ಯುವಕರು, ಬಣ್ಣ ಎರಚುತ್ತಿದ್ದಾರೆ. ಹೋಳಿ ಹಬ್ಬದ ಹಿನ್ನೆಲೆ  ನಗರದಾದ್ಯಂತ ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿದೆ.