ಮುಂಬೈ, ಮಾ ೨೯- ಬಾಲಿವುಡ್ ನ ದೇಸಿ ಗರ್ಲ್ ನಟಿ ಪ್ರಿಯಾಂಕಾ ಚೋಪ್ರಾ ’ಡ್ಯಾಮೇಜಿಂಗ್’ ಫೇರ್ ನೆಸ್ ಕ್ರೀಮ್ ಜಾಹೀರಾತಿನಲ್ಲಿ ನಟಿಸಿರುವ ಬಗ್ಗೆ ಇದೇ ಮೊದಲ ಬಾರಿಗೆ ಮನ ಬಿಚ್ಚಿ ಮಾತನಾಡಿದ್ದಾರೆ.
ಆರಂಭಿಕ ವರ್ಷಗಳಲ್ಲಿ ಚಲನಚಿತ್ರೋದ್ಯಮದಲ್ಲಿ, ನಟಿ ಬಣ್ಣದ ಕುರಿತಾಗಿ ಸಮಸ್ಯೆಗಳನ್ನು ಎದುರಿಸುತ್ತಾರೆ. ೨೦೦೦ರ ದಶಕದ ಮಧ್ಯಭಾಗದಲ್ಲಿ ’ಹಾನಿಕಾರಕ’ ಚರ್ಮದ ಫೇರ್ನೆಸ್ ಜಾಹೀರಾತುಗಳ ಭಾಗವಾಗಿದ್ದಕ್ಕಾಗಿ ಅವರು ಪಶ್ಚಾತ್ತಾಪವನ್ನು ಪಟ್ಟಿರುವುದಾಗಿಯೂ ಹೇಳಿಕೊಂಡಿದ್ದಾರೆ. ನಟಿ ಕೂಡ ಅದರಲ್ಲಿ ಸಿಲುಕಿಕೊಂಡು ಪರದಾಡಿದ ಬಗ್ಗೆ ಹೇಳಿದ್ದಾರೆ.
ಬಾಲಿವುಡ್ ಇಂಡಸ್ಟ್ರಿಯಲ್ಲಿ ನನ್ನನ್ನು ಮೂಲೆಗೆ ತಳ್ಳಲಾಯಿತು. ಅವಕಾಶಗಳು ಸಿಗುತ್ತಿರಲಿಲ್ಲ, ನನಗೆ ಬೇಕು ಅಂತಲೇ ಅವಕಾಶಗಳಿಂದ ವಂಚಿಸಲಾಗುತ್ತಿತ್ತು. ಸಂಗೀತದ ಅವಕಾಶ ಬಂದಾಗ ನಾನು ಅಮೆರಿಕಕ್ಕೆ ಹೋಗಲು ನಿರ್ಧರಿಸಿದೆ. ಪಿಟ್ಬುಲ್, ವಿಲ್.ಐ.ಎಂ, ಫಾರೆಲ್ ವಿಲಿಯಮ್ಸ್ ಅವರೊಂದಿಗೆ ಕೆಲಸ ಮಾಡುವ ಅವಕಾಶ ಸಿಕ್ಕಿತು. ಆದಾಗ್ಯೂ, ಅವರಿಗೆ ನಾನು ನಟನೆಯಲ್ಲಿ ಹೆಚ್ಚು ಉತ್ತಮ ಅರಿತುಕೊಂಡರು. ನಂತರ ನನಗೆ ’ಕ್ವಾಂಟಿಕೋ’ನಲ್ಲಿ ಪಾತ್ರ ಸಿಕ್ಕಿತು??ಎಂದು ಹೇಳಿಕೊಂಡಿದ್ದಾರೆ.
ಸದ್ಯ ಪಿಗ್ಗಿ ಅಭಿನಯದ ಸಿಟಾಡೆಲ್ ಗೆ ಸಿರೀಸ್ ಬಿಡುಗಡೆಗೆ ಸಿದ್ಧವಾಗಿದೆ.ಶೀಘ್ರದಲ್ಲೇ ನಟಿ ರಿಚರ್ಡ್ ಮ್ಯಾಡೆನ್ ಅಭಿನಯದ ರುಸ್ಸೋ ಬ್ರದರ್ಸ್ ಸಿಟಾಡೆಲ್ ನಲ್ಲಿ ಆಯಕ್ಷನ್ ಅವತಾರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇದಲ್ಲದೆ, ಪ್ರಿಯಾಂಕಾ ಅನೇಕ ಅಂತಾರಾಷ್ಟ್ರೀಯ ಪ್ರಾಜೆಕ್ಟ್ಗಳಲ್ಲಿ ಸಹ ಭಾಗವಾಗಿದ್ದಾರೆ. ಅದಕ್ಕೂ ಮುನ್ನ, ಪ್ರಿಯಾಂಕಾ ಅವರು ಸಂದರ್ಶನವೊಂದರಲ್ಲಿ ಬಾಲಿವುಡ್ ನ ಪ್ರಯಾಣ ಹಾಗೂ ಹಾಲಿವುಡ್ನಲ್ಲಿ ವೃತ್ತಿಜೀವನವನ್ನು ಮುಂದುವರಿಸಲು ಏಕೆ ನಿರ್ಧರಿಸಿದ್ದಾರಂಬುದನ್ನು ಬಹಿರಂಗಪಡಿಸಿದ್ದಾರೆ.
ಡಾಕ್ಸ್ ಶೆಪರ್ಡ್ ಅವರ ಪಾಡ್ಕ್ಯಾಸ್ಟ್ ’ಆರ್ಮ್ಚೇರ್ ಎಕ್ಸ್ಪರ್ಟ್’ ನಲ್ಲಿ, ಪ್ರಿಯಾಂಕಾ ಚೋಪ್ರಾ ಅಮೆರಿಕಾದಲ್ಲಿ ಕೆಲಸ ಮಾಡುವ ನಿರ್ಧಾರದ ಹಿಂದಿನ ಕಾರಣವನ್ನು ಕೇಳಲಾಯಿತು. ಇದಕ್ಕೆ ಪ್ರತಿಕ್ರಿಯಿಸಿದ ಪ್ರಿಯಾಂಕಾ, ’ನಾನು ಈ ಬಗ್ಗೆ ಎಂದಿಗೂ ಮಾತನಾಡಿಲ್ಲ ಆದರೆ ನೀವು ನನ್ನನ್ನು ಸುರಕ್ಷಿತವಾಗಿರಿಸುತ್ತಿದ್ದೀರಿ, ಆದ್ದರಿಂದ ನಾನು ಈ ಬಗ್ಗೆ ಮಾತನಾಡುತ್ತಿದ್ದೇನೆ’ ಎಂದು ಹೇಳಿದರು
೨೦೦೦ರಲ್ಲಿ ವಿಶ್ವ ಸುಂದರಿ ಸ್ಪರ್ಧೆಯನ್ನು ಗೆದ್ದ ನಂತರ, ಪ್ರಿಯಾಂಕಾ ಚೋಪ್ರಾ ಕೆಲವು ವರ್ಷಗಳ ನಂತರ ೨೦೦೨ರಲ್ಲಿ ತಮಿಳು ಚಿತ್ರರಂಗಕ್ಕೆ ಎಂಟ್ರಿ ಕೊಟ್ಟರು. ೨೦೦೩ ರಲ್ಲಿ ದಿ ಹೀರೋ: ಲವ್ ಸ್ಟೋರಿ ಆಫ್ ಎ ಸ್ಪೈ ಮೂಲಕ ಬಾಲಿವುಡ್ ಗೆ ಪದಾರ್ಪಣೆ ಮಾಡಿದ್ದರು.