ಬಣ್ಣದಲ್ಲಿ ಮಿಂದೆದ್ದ ಯುವಕರ ಪಡೆ

ತಾಳಿಕೋಟೆ:ಮಾ.9: ಈ ಭಾರಿಯ ಹೋಳಿ ಹುಣ್ಣಿಮೆಯ ಬಣ್ಣದಾಟದಲ್ಲಿ ಯುವಕರಲ್ಲಿ ಹಾಗೂ ಚಿಣ್ಣರಲ್ಲಿ ಮಹಿಳೆಯರಲ್ಲಿ ಉತ್ಸಾಹ ಹೆಚ್ಚಿದ್ದು ಕಂಡುಬಂದಿತು.

   ಬುಧವಾರರಂದು ಮೊದಲನೇಯ ದಿನದ ರಂಗಿನಾಟವು ಸಂಭ್ರಮಕ್ಕೇನು ಕಡಿಮೇನಿದ್ದಿದ್ದಿಲ್ಲಾ ಬಣ್ಣದಾಟದಲ್ಲಿ ಚಿಣ್ಣರು ಫಿಚಗಾರಿಯ ಮೂಲಕ ಒಬ್ಬರಿಗೊಬ್ಬರು ಏರಚುತ್ತಾ ಮನೆಯ ಬಡಾವಣೆಗಳಲ್ಲಿ ಓಡಾಡಿಕೊಂಡಿದಿದ್ದು ಕಂಡುಬಂದಿತು.
      ಯುವಕರ ಪಡೆಗಳು ಹಲಗೆಯ ನಾದದೊಂದಿಗೆ ಯುವಕರ ತಂಡಗಳು ಪ್ರತಿ ಬಡಾವಣೆಗಳಲ್ಲಿ ಸಂಚರಿಸುತ್ತಾ ಆತ್ಮೀಯ ಸ್ನೇಹಿತರಿಗೆ ಪರಸ್ಪರ ಬಣ್ಣ ಹಚ್ಚುತ್ತಾ ಖುಷಿ ಪಡುತ್ತಿದ್ದರು ಕೆಲವು ಬಡಾವಣೆಗಳಲ್ಲಿ ಯುವಕರ ತಂಡಗಳು ಪ್ರತೇಕವಾಗಿ ಹಲಗೆಯ ನಾದದದೊಂದಿಗೆ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿ ದಾರಿಹೋಕ ಮಿತ್ರರಿಗೆ ಬಣ್ಣ ಹಚ್ಚುತ್ತಾ ತಮ್ಮ ತಮ್ಮ ತಂಡದಲ್ಲಿ ಯುವಕರ ಗುಂಪು ಹೆಚ್ಚಿಸಿಕೊಳ್ಳುತ್ತಾ ಸಾಗಿದರು.

ಮಂಗಳವಾರ ರಾತ್ರಿ ಪ್ರತಿ ಬಡಾವಣೆಗಳಲ್ಲಿ ಕಳುವಿನ ಕಟ್ಟಿಗೆ ಕುಳ್ಳುಗಳಿಂದ ಬೃಹತ್ ಆಕಾರದ ಗುಂಪನ್ನು ನಿರ್ಮಿಸಿ ಅದಕ್ಕೆ ಕಾಮಣ್ಣನ ಭಾವಚಿತ್ರ ಅಂಟಿಸಿ ಕಾಮದಹನ ಮಾಡಿ ಬಾಯಿ ಬಡೆದುಕೊಂಡು ಕುಷಿ ಪಟ್ಟರು.

  ಇನ್ನೂ ಕೆಲವರು ಕೇಮಿಕಲ್ ಬಣ್ಣಕ್ಕೆ ಹೆದರಿ ಯುವಕರು ಹಿರಿಯರು ಊರಿಂದಾಚೆಯ ಹೊಲಗದ್ದೆಗಳಲ್ಲಿ ಪಾರ್ಟಿಯ ನೆಪದ ಮೇಲೆ ತೆರಳಿದರೆ ಇನ್ನೂ ಕೆಲವು ಯುವಕರು ದೇವರದರ್ಶಕ್ಕೆಂದು ಮತ್ತು ಕೆಲವರು ಗೋವಾ ಇನ್ನಿತರಕಡೆಗಳ ಮಜಾ ಉಡಾಯಿಸಲು ತೆರಳಿದ್ದು ಕಂಡುಬಂದಿತು.

ಮೊದಲನೇ ದಿನದ ರಂಗಿನಾಟದಲ್ಲಿ ಯಾವುದೇ ರೀತಿಯ ಘಟನೆಗಳು ಜರುಗದಂತೆ ಪಿ.ಎಸ್.ಐ.ಸುರೇಶ ಮಂಟೂರ ಅವರು ತಮ್ಮ ಪೊಲೀಸ್ ಸಿಬ್ಬಂದಿಗಳೊಂದಿಗೆ ಯೋಗ್ಯ ಬಂದೋಬಸ್ತ ಕೈಗೊಂಡಿದ್ದರು.