ಬಣ್ಣಗಳ ಹಬ್ಬವೇ ಹೋಳಿ

ಮೈಸೂರು:ಮಾ:28: ಬಣ್ಣಗಳ ಹಬ್ಬ ಎಂದರೆ ಹೋಳಿಹಬ್ಬ. ಇದು ವಿವಿಧ ಬಣ್ಣಗಳ ಎರಚುವುಕೆಯಿಂದ ಪ್ರತಿಯೊಬ್ಬರಲ್ಲೂ ಉಲ್ಲಾಸ ತುರುತ್ತದೆ. ವಿವಿಧ ವರ್ಣಗಳ ಓಕುಳಿಯನ್ನು ಆಚರಿಸಿ ಇಡೀ ವರ್ಷ ಸಂತೋಷವೇ ಹರಿದು ಬರಲಿ ಎಂಬುದೇ ಈ ಹಬ್ಬದ ಪ್ರಮುಖ ಉದ್ದೇಶ. ಈ ಹಿನ್ನಲೆಯಲ್ಲಿ ನಗರದ ವಿವಿದೆಡೆ ಯುವ ಜನತೆ ಹೋಳಿ ಹಬ್ಬವನ್ನು ಆಚರಿಸಿದರು.
ಕಾಮನಹಬ್ಬದ ವಿಶೇಷತೆ: ಕಾಮನ ಹಬ್ಬ ಎಂದು ಕರೆಯಲ್ಪಡುವ ಈ ಹೋಳಿ ಆಚರಣೆಯು ಉತ್ತರ ಭಾರತದಲ್ಲಿ ಮಾತ್ರ ಆಚರಿಸಲಾಗುತ್ತಿತ್ತು. ಆದರೆ ಅದನ್ನು ಇಂದು ದೇಶಾದ್ಯಂತ ಆಚರಿಸಲಾಗುತ್ತಿದೆ. ಪ್ರತಿ ವರ್ಷದ ಫಾಲ್ಗುಣ ಮಾಸದ ಶುಕ್ಲ ಪಕ್ಷದ ಹುಣ್ಣಿಮೆಯ ದಿನದಂದು ಈ ಹೋಳಿ ಹಬ್ಬವನ್ನು ದೇಶಾದ್ಯಂತ ಆಚರಿಸಲಾಗುತ್ತದೆ. ಇಂದು ರಾತ್ರಿ ಕಟ್ಟಿಗೆಯ ಮೇಲೆ ಕಾಮನನ್ನ ಕೂರಿಸಿ ದಹನ ಮಾಡಲಾಗುತ್ತದೆ. ಕಾಮನನ್ನು ಸುಟ್ಟ ನಂತರ ಸಿಗುವ ಬೂದಿಯನ್ನು ವಿಭೂತಿಯಂತೆ ಹಣೆಗೆ ಹಚ್ಚಿಸಿಕೊಳ್ಳಲಾಗುತ್ತದೆ. ಇದು ಕೆಟ್ಟ ಕಾಮವನ್ನು ಜ್ಞಾನ ಎಂಬ ಭಿಕ್ಷುವಿನಿಂದ ಸುಟ್ಟು ಬೊಟ್ಟಿಡುವುದು ಸಾಕ್ಷಾತ್ ಈಶ್ವರಬ ಸಾಕ್ಷಾತ್ಕಾರದ ಸಾಧನ ಎಂದೇ ಬಿಂಬಿತವಾಗಿದೆ. ನಮ್ಮ ಆಸೆ-ಆಕಾಂಕ್ಷಿಗಳಲ್ಲಿ ಧರ್ಮಸೂಕ್ಷ್ಮ ದರ್ಶನ ಕಾಣ್ಯೆ ಇದು. ಇದು ಅಂತರಂಗ ಮತ್ತು ಬಹಿರಂಗ ಶುದ್ಧಿಯಿಂದ ಶರೀರದ ಪವಿತ್ರ ಪಡೆಯಲು ಈ ವಿಭೂತಿಯನ್ನೆ ಧಾರಣೆ ಮಾಡಬೇಕು. ಇದು ಕಾಮ ದಹನದ ಮೂಲಕ ಉತ್ತಮ ಸಂಸ್ಕಾರ ಹೊಂದಬಹುದು ಎಂಬ ನಂಬಿಕೆ ಇದೆ.
ವಿಜಯನಗರ ಅರಸರ ಕಾಲದಲ್ಲಿ ಅಹಮದ್ ನಗರ ಮೇವಾರ ಮತ್ತು ಬುಂಡಿಯಲ್ಲಿರುವ ಚಿತ್ರಕಲೆಗಳಲ್ಲಿ ಹೋಳಿ ಹಬ್ಬವನ್ನ ಆಚರಿಸಿರುವ ಬಗ್ಗೆ ಕುರುಹುಗಳು ಲಭಿಸಿವೆ. ಇದಲ್ಲದೆ ವಿಷ್ಣು ಪುರಾಣ, ಭಾಗತ ಪುರಾಣಗಳಲ್ಲೂ ಇದರ ಬಗ್ಗೆ ಮಾಹಿತಿಗಳು ಲಭ್ಯವಿವೆ.
ಒಟ್ಟಾರೆ ಇಂದಿನ ಹೋಳಿ ಹಬ್ಬವು ದೇಶದೆಲ್ಲೆಡೆ ಶಾಂತಿ, ನೆಮ್ಮದಿ, ಸೌಹಾರ್ದತೆಯನ್ನು ಕಾಣಲಿ ಎಂಬುದೇ ನಮ್ಮೆಲ್ಲರ ಆಶಯ.