ಬಣವೆಗಳಿಗೆ ಬೆಂಕಿ ಗ್ರಾಮಸ್ಥರಲ್ಲಿ ಅತಂಕ

ಕೋಲಾರ,ಮಾ.೨೯: ಕಳೆದ ೧೦ ದಿನಗಳಿಂದ ಗ್ರಾಮದಲ್ಲಿ ಹುಲ್ಲಿನ ಮೆದೆಗಳಿಗೆ ಆಕಸ್ಮಿಕವಾಗಿ ಬೆಂಕಿ ಬೀಳುತ್ತಿರುವ ಪರಿಣಾಮ ಗ್ರಾಮಸ್ಥರು ಆತಂಕಕ್ಕೊಳಗಾಗಿರುವಂತಹ ಘಟನೆ ಕೋಲಾರದಲ್ಲಿ ಜರುಗಿದೆ.
ಕೋಲಾರ ಜಿಲ್ಲೆ ಮುಳಬಾಗಿಲು ತಾಲೂಕಿನ ನಂಗಲಿ ವ್ಯಾಪ್ತಿಯ ಚಿನ್ನಹಳ್ಳಿ ಗ್ರಾಮದಲ್ಲಿ ಆಕಸ್ಮಿಕ ಬೆಂಕಿಗೆ ಹುಲ್ಲಿನ ಮೆದೆಗಳು ಆಹುತಿಯಾಗುತ್ತಿದ್ದ ಗ್ರಾಮಸ್ಥರು ಆತಂಕಕ್ಕೀಡಾಗಿದ್ದಾರೆ. ಇನ್ನು ನಿನ್ನೆಯಷ್ಟು ಸುಮಾರು ೫ ಹಲ್ಲಿನ ಮೆದೆಗಳಿಗೆ ಬೆಂಕಿಬಿದ್ದಿದ್ದು, ಇಂದೂ ಸಹ ಐದು ಹುಲ್ಲಿನ ಮೆದೆಗಳು ಸಂಪೂರ್ಣ ಬೆಂಕಿಗಾಹುತಿಯಾಗಿದೆ. ಇನ್ನು ಸ್ಥಳಕ್ಕೆ ಅಗ್ನಿಶಾಮಕದಳದ ಸಿಬ್ಬಂದಿ ಆಗಮಿಸಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾದರೂ. ಇದಕ್ಕೂ ಮುನ್ನಾ ಗ್ರಾಮಸ್ಥರು ಬಕೆಟ್ ಗಳಲ್ಲಿ ನೀರೆರಚುವ ಮೂಲಕ ಬೆಂಕಿ ನಂದಿಸಲು ಹರಸಾಹಸಪಟ್ಟರು. ಬೇಸಿಗೆ ಪ್ರಾರಂಭದಲ್ಲಿಯೇ ರೈತರು ಶೇಖರಿಸಿದ್ದ ಬೃಹತ್ ಹುಲ್ಲಿನ ಮೆದೆಗಳಿಗೆ ಬೆಂಕಿ ಬೀಳುತ್ತಿರುವ ಪರಿಣಾಮ, ಬೇಸಿಗೆಯಲ್ಲಿ ಜಾನುವಾರುಗಳಿಗೆ ಆಹಾರ ಸಮಸ್ಯೆ ಎದುರಾಗುವ ಭೀತಿ ಗ್ರಾಮಸ್ಥರದ್ದಾಗಿದೆ. ಇನ್ನು ನಂಗಲಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.