ಬಣಜಿಗ  ಸಮಾಜವನ್ನು ಕಡೆಗಣೆನೆಗೆ ತಕ್ಕಪಾಠ: ಎಚ್ಚರಿಕೆ


ಸಂಜೆವಾಣಿ ವಾರ್ತೆ
ಕುಕನೂರು, ಏ.14:  ಭಾರತೀಯ ಜನತಾ ಪಕ್ಷ ರಾಜ್ಯ ಬಣಜಿಗ ಸಮಾಜವನ್ನು ಕಡೆಗಣಿಸಿ ಪಕ್ಷವನ್ನು ಕಟ್ಟಿ ಬೆಳೆಸಿದ ಮಾಜಿ ಸಿ.ಎಂ. ಜಗದೀಶ್ ಶೆಟ್ಟರ ಅವರನ್ನು ರಾಜಕೀಯ ವಾಗಿ ಮೂಲೆಗುಂಪು ಮಾಡುವ ಯತ್ನ ಸರಿಯಲ್ಲ ಎಂದು ಬಣಜಿಗ ಸಮಾಜದ ರಾಜ್ಯಾಧ್ಯಕ್ಷ ಅಂದಪ್ಪ ಜವಳಿ ಆಕ್ರೋಶ ವ್ಯಕ್ತಪಡಿಸಿದರು. ಪಟ್ಟಣದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ,
ದಕ್ಷಿಣ ಭಾರತದಲ್ಲಿ ಮೊಟ್ಟಮೊದಲ ಬಾರಿಗೆ ಭಾರತೀಯ ಜನತಾ ಪಕ್ಷ ಅಧಿಕಾರದ ಗದ್ದುಗೆ ಹಿಡಿಯಲು   ಶ್ರೀ.ಯಡಿಯೂರಪ್ಪನವರು  ಹಾಗೂ ದಿವಂಗತ ಅನಂತ್ ಕುಮಾರ್ ಅವರು ಜೊತೆಗೂಡಿ ಭಾರತೀಯ ಜನತಾ ಪಕ್ಷವನ್ನು ಕರ್ನಾಟಕದಲ್ಲಿ ಆಡಳಿತಕ್ಕೆ ತಂದ ಕೀರ್ತಿ ಇವರೆಲ್ಲರದ್ದಾಗಿರುತ್ತದೆ.
ದಕ್ಷಿಣ ಭಾರತದಲ್ಲಿ ಇದರ ಜೊತೆಯಲ್ಲಿ ಉತ್ತರ ಕರ್ನಾಟಕದಲ್ಲಿ ಒಂದು ಶಕ್ತಿಯಾಗಿ ಭಾರತೀಯ ಜನತಾ ಪಕ್ಷ ಕಟ್ಟಿ ಬೆಳೆಸಿದ ಸರ್ವೋನ್ಮುಖ ಅಭಿವೃದ್ಧಿ ಯನ್ನು ಮಾಡಿದ ಜನನಾಯಕ
ಹಾಗೂ ಇವರು ಕೇಂದ್ರ ಸರ್ಕಾರದ ಮೆಚ್ಚುಗೆಗೆ ಪಾತ್ರವಾಗಿದ್ದಾರೆ.
ಇಂತಹ ಧೀಮಂತ ನಾಯಕನಿಗೆ 2023 ಚುನಾವಣೆಯಲ್ಲಿ ಮೊದಲನೇ ಪಟ್ಟಿಯಲ್ಲಿ ಇರುವ ಹೆಸರನ್ನು ಘೋಷಣೆ ಮಾಡದೇ ಇರುವುದರಿಂದ ಬಣಜಿಗ ಸಮಾಜ ಒಂದೇ ಅಲ್ಲ ರಾಜ್ಯದ ಬೇರೆಬೇರೆ ಸಮಾಜದ ಸಮಸ್ತ  ಸಮಾಜದವರಿಗೂ ಕೂಡ ನೋವುಂಟು ಮಾಡಿದೆ.
ಆದಕಾರಣ ತಡಮಾಡದೆ ಅವರಿಗೆ ಭಾರತೀಯ ಜನತಾ ಪಕ್ಷದ ಟಿಕೆಟನ್ನು ಘೋಷಣೆ ಮಾಡಬೇಕು. ಇಲ್ಲವಾದರೆ ಪಕ್ಷ ಬರುವ ದಿನದಲ್ಲಿ  ಪಕ್ಷ ತಕ್ಕ ಪಾಠ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದರು. ಈ ಸಂಡಭ ೯ದಲ್ಲಿ ಸಮಾಜದ ತಾಲೂಕು ಅಧ್ಯಕ್ಷ ಡಾಕ್ಟರ್ ಜಂಬಣ್ಣ ಅಂಗಡಿ, ಹಿರಿಯರಾದ ಅಂದಾನಪ್ಪ ಅಂಗಡಿ,ಬಸವರಾಜ್ ಜೋಳದ, ಈಶ್ವರಪ್ಪ ಅಂಗಡಿ, ವಿಜಯ್ ಕುಮಾರ್ ಕರಂಡಿ ಮೊದಲಾದವರು ಇದ್ದರು.