ಬಣಜಿಗ ಸಮಾಜದ ಅಧ್ಯಕ್ಷರಾಗಿ ಅಂಗಡಿ ರಾಚಪ್ಪ ಆಯ್ಕೆ


ಹಗರಿಬೊಮ್ಮನಹಳ್ಳಿ:ನ.22 ತಾಲೂಕಿನ ಬಣಜಿಗ ಸಮಾಜದ ಕ್ಷೇಮಾಭಿವೃಧ್ಧಿ ಸಂಘದ ತಾಲೂಕಾಧ್ಯಕ್ಷರಾಗಿ ಅಂಗಡಿ ರಾಜಪ್ಪ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಪಟ್ಟಣದ ಕಲ್ಲೇಶ್ವರ ದೇವಸ್ಥಾನದಲ್ಲಿ ಬಣಜಿಗ ಸಮಾಜದ ಮುಖಂಡರ ಸಭೆ ನಡೆಸಿ ಪದಾಧಿಕಾರಿಗಳನ್ನು ಆಯ್ಕೆ ಮಾಡಿದ್ದು ಇದರಲ್ಲಿ ಗೌರವಾಧ್ಯಕ್ಷರಾಗಿ ಹಾಲ್ದಾಳ್ ವಿಜಯಕುಮಾರ್, ಅಧ್ಯಕ್ಷರಾಗಿ ಅಂಗಡಿ ರಾಜಪ್ಪ, ಉಪಾಧ್ಯಕ್ಷರುಗಳಾಗಿ ಅಂಗಡಿ ಲೇಪಾಕ್ಷಿ, ಬಾವಿಹಳ್ಳಿ ಅಂಬರೀಷಪ್ಪ, ಕರಡಕಲ್ಲು ಪ್ರಕಾಶ್, ವೈ.ನಾಗರಾಜ, ಎ.ಮಂಜುನಾಥ್, ಕಾರ್ಯದರ್ಶಿಯಾಗಿ ಇಕ್ಕೇರಿ ಕೊಟ್ರೇಶ್, ಸಹಕಾರ್ಯದರ್ಶಿಯಾಗಿ ಪ್ರವೀಣ್ ಮಜ್ಗಿ, ಕಣವಿ ಮಂಜುನಾಥ್, ಖಚಾಂಚಿಯಾಗಿ ಆರ್.ಬಿ.ಚನ್ನಬಸಪ್ಪ, ಸಂಘಟನಾ ಕಾರ್ಯದರ್ಶಿ ಅಕ್ಕಿ ಬಸವೇಶ ಅವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು.
ಈ ವೇಳೆ ನೂತನ ಅಧ್ಯಕ್ಷ ರಾಚಪ್ಪ ಮಾತನಾಡಿ ಸಮಾಜದ ಸರ್ವತೋಮುಖ ಬೆಳವಣಿಗೆಗೆ ಸದಾ ಜೊತೆಗಿರುವೆ ಹಾಗೂ ಸಮಾಜವನ್ನು ಶೈಕ್ಷಣಿಕ ಸೇರಿದಂತೆ ಅಭಿವೃಧ್ಧಿ ಪಡಿಸುವಲ್ಲಿ ಪ್ರತಿಯೊಬ್ಬರೂ ಸಹಾಕಾರ ನೀಡುವಂತೆ ಕೋರಿದರು. ಪ್ರತಿಯೊಬ್ಬರನ್ನು ಗಣನೆಗೆ ತೆಗೆದುಕೊಂಡು ಸಮಾಜವನ್ನು ಒಗ್ಗೂಡಿಸುವಲ್ಲಿ ಪ್ರಮಾಣಿಕ ಪ್ರಯತ್ನ ಮಾಡುವೆ ಎಂದರು.
ಈ ಸಂಧರ್ಭದಲ್ಲಿ  ಮಂಜಣ್ಣ ಪಟ್ಟೇದ್, ಆರ್.ಬಿ.ನಿಂಗಪ್ಪ, ಎಂ.ಎಸ್.ಹಿಮರಾಜ್, ಮಲ್ಲಿಕಾರ್ಜುನ ವಾಲಿ ಶೇಟ್ಟರ್, ಕೋರಿ ಪ್ರಕಾಶ್, ಚಿನಿವಾಲರ ಕೊಟ್ರೇಶ್, ಶಿವಕುಮಾರ್ ಬೆಲ್ಲದ್, ಜಾಲಿ ರವಿ,  ಉಮೇಶ್ ಬೋರ್‍ಶೆಟ್ರು, ಬಸವರಾಜ ಯಡ್ರಮ್ಮನಹಳ್ಳಿ, ಪಂಪಾಪತಿ ಯಡ್ರಮ್ಮನಹಳ್ಳಿ, ಉಪಸ್ಥಿತರಿದ್ದರು. ಶಿವಾನಂದನಗರ, ಬನ್ನಿಕಲ್ಲು, ಪಂಪಸಾಗರ, ನಂದೀಪುರ, ಮುತ್ಕೂರು, ಆನಂದೇವನಹಳ್ಳಿ, ಪಿಂಜಾರ್‍ಹೆಗ್ಡಾಳ್ ಗ್ರಾಮದ ಮುಖಂಡರು ಇದ್ದರು.