ಬಣಜಿಗ ಭವನ ನಿರ್ಮಾಣಕ್ಕೆ 25ಲಕ್ಷರೂ ಅನುದಾನ :ಭೀಮಾನಾಯ್ಕ


ಸಂಜೆವಾಣಿ ವಾರ್ತೆ
 ಹಗರಿಬೊಮ್ಮನಹಳ್ಳಿ:ಮಾ.04 ಪಟ್ಟಣದಲ್ಲಿ ಬಣಜಿಗರ ಭವನ ನಿರ್ಮಾಣಕ್ಕೆ 25ಲಕ್ಷರೂ ಅನುದಾನ ನೀಡಲಾಗುವುದು ಎಂದು ಶಾಸಕ ಎಸ್.ಭೀಮಾನಾಯ್ಕ ಭರವಸೆ ನೀಡಿದರು.
ಪಟ್ಟಣದ ಕನ್ನಿಕಾಪರಮೇಶ್ವರಿ ಕಲ್ಯಾಣ ಮಂಟಪದಲ್ಲಿ ನಡೆದ ಬಣಜಿಗರ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು. ಬಣಜಿಗ ಸಮಾಜ ಎಲ್ಲಾ ಸಮಾಜದವರೊಂದಿಗೆ ಅನ್ಯೋನ್ಯ ಸಂಬಂಧ ಹೊಂದಿದೆ. ಅತ್ಯಂತ ಕ್ರಮಬದ್ದವಾದ ಜೀವನ ಕ್ರಮ ಅನುಸರಿಸುತ್ತಾರೆ. ಕ್ಷೇತ್ರದ ಎಲ್ಲಾ ಸಮುದಾಯಗಳಿಗೆ ಆಧ್ಯತೆ ನೀಡಲಾಗಿದೆ. ವಿರೋಧಿಗಳಿಗೆ ನಮ್ಮ ಅಭಿವೃಧ್ದಿಯೇ ಪಾಠ ಕಲಿಸುತ್ತವೆ. ಚುನಾವಣೆ ಸಮಯದಲ್ಲಿ ವಿರೋಧಿಗಳು ಯಾವುದೇ ಷಡ್ಯಂತ್ರ್ಯ ಮಾಡಿದರೂ ಯಶಸ್ವಿಯಾಗುವುದು ಕಷ್ಟಸಾಧ್ಯ ಎಂದು ತಿಳಿಸಿದರು.
ನಿವೃತ್ತ ಐಪಿಎಸ್ ಅಧಿಕಾರಿ ಶಂಕರಿ ಬಿದರಿ ಮಾತನಾಡಿ, ಸಮಾಜದ ಯುವಕರು ಶೈಕ್ಷಣಿಕ ಬೆಳವಣಿಗೆ ಹೊಂದಿದಾಗ ಮಾತ್ರ ಸಮಾಜದ ಅಬಿವೃಧ್ದಿ ಸಾಧ್ಯ. ಹಿರಿಯರು ಸೂಕ್ತ ಮಾರ್ಗದರ್ಶನದೊಂದಿಗೆ ಸಮಾಜವನ್ನು ಕಟ್ಟಬೇಕು ಎಂದು ತಿಳಿಸಿದರು. ಸಮಾಜದ ಭವನ ನಿರ್ಮಾಣ ಮಾಡುವುದಕ್ಕೆ ಉಚಿತವಾಗಿ ನಿವೇಶನ ಕಲ್ಪಿಸಿದ ಹಳೇವೂರಿನ ಹಾಲ್ದಾಳ್ ವಿಜಯಕುಮಾರ ಕುಟುಂಬದವರನ್ನು ಹಾಗೂ ಸಮಾಜದ ಹಿರಿಯ ವಕೀಲ ಬಿ.ವಿ.ಶಿವಯೋಗಿಯರವನ್ನು ಸನ್ಮಾನಸಿ ಗೌರವಿಸಲಾಯಿತು. ಇದಕ್ಕೂ ಮುನ್ನ ಪಟ್ಟಣದ ಬಸವೇಶ್ವರ ರಸ್ತೆಯಲ್ಲಿ ಬಸವೇಶ್ವರ ಭಾವಚಿತ್ರದ ಮೆರವಣಿಗೆಯನ್ನು ಅತ್ಯಂತ ವಿಜೃಂಭಣೆಯಿಂದ ಮಾಡಿದರು. ಮಹಿಳೆಯರು ಕಳಸ ಕುಂಬದೊಂದಿಗೆ ಕಲ್ಯಾಣ ಮಂಟಪದವರೆಗೆ ಸಾಗಿದರು. ಮೆರವಣಿಗೆಗೆ ನಂದಿಕೋಲು, ಸಮಾಳ, ತಾರ್ಸಿ ಮೆರಗು ತಂದಿದ್ದವು.
ಗದ್ದಿಕೇರಿ ಚರಂತೇಶ್ವರ ಸ್ವಾಮೀಜಿ, ಹಾಲಸಿದ್ದೇಶ್ವರ ಸ್ವಾಮೀಜಿ ಸಾನಿಧ್ಯ ವಹಿಸಿ ಮಾತನಾಡಿದರು. ಸಮಾಜದ ಜಿಲ್ಲಾಧ್ಯಕ್ಷ ಕೋರಿ ವಿರುಪಾಕ್ಷಪ್ಪ, ತಾಲೂಕು ಅಧ್ಯಕ್ಷ ರಾಚಪ್ಪ ಅಂಗಡಿ, ಹಾಲ್ದಾಳ್ ವಿಜಯಕುಮಾರ, ಮಂಜನಾಥ ಪಟ್ಟೇದ್,ಕೊಟ್ರೇಶ್ ಪಟ್ಟೇದ್, ಮಹಿಳಾ ಅಧ್ಯಕ್ಷೆ ಬಿ.ಕಸ್ತೂರಿ, ಬಿಡಿಡಿಎಸ್‍ನ ಶೋಭಾ, ಬಣಜಿಗ ಸಮಾಜದ ಮುಖಂಡರು ಬಾಗವಹಿಸಿದ್ದರು. ಕಾರ್ಯಕ್ರಮವನ್ನು ಅಕ್ಕಿ ಬಸವೇಶ, ರೊಟ್ಟಿ ಕೊಟ್ರಪ್ಪ, ಕರಿಬಸಪ್ಪ ನಿರ್ವಹಿಸಿದರು.