ಬಡ ಹಾಗೂ ನಿರ್ಗತಿಕಜನರಿಗೆ ನಯ ಸವೆರ ಸಂಘಟನೆ ವತಿಯಿಂದ ಆಹಾರ ವಿತರಣೆ

ಕಲಬುರಗಿ:ಮೇ.21: ನಯ ಸವೆರ ಸಂಘಟನೆ ವತಿಯಿಂದ ಸತತವಾಗಿ 11 ನೇ ದಿನಗಳಿಂದ ತಯಾರಿಸಿದ ಆಹಾರವನ್ನು ಬಡಜನರಿಗೆ ನಿರ್ಗತಿಕರಿಗೆ ಹಂಚಲಾಗುತ್ತಿದೆ. ನಗರದ ಸರ್ಕಾರಿ ಆಸ್ಪತ್ರೆ ಹಿರಾಪುರ್ ನಲ್ಲಿ ಮತ್ತು ಮಹಾನಗರ ಪಾಲಿಕೆ ಪೌರಕಾರ್ಮಿಕರಿಗೆ ತಯಾರಿಸಿದ ಆಹಾರವನ್ನು ವಿತರಿಸಲಾಯಿತು ದಿನನಿತ್ಯ ರಾಮತೀರ್ಥ ಜೋಪಡ್ಪಟ್ಟಿ ಸಂತ್ರಾಸವಾಡಿ, ಆಶ್ರಯ ಕಾಲೋನಿ, ರಾಮನಗರ ಜೋಪಡ ಪಟ್ಟಿ, ಕುಷ್ಟರೋಗಿಗಳ ಕಾಲೋನಿ, ಸೂಪರ್ ಮಾರ್ಕೆಟ್ ಚೌಪಟ್ಟಿ, ಸೆಂಟ್ರಲ್ ಬಸ್ಟಾಂಡ್ ಹತ್ತಿರ ಕಣ್ಣಿ ಮಾರ್ಕೆಟ್ ಜೋಪಡಿ ಪಟ್ಟಿ, ಹಜರತ್ ಖಾಜಾ ಬಂದಾ ನವಾಜ್ ದರ್ಗಾ, ಶ್ರೀ ಶರಣಬಸವೇಶ್ವರ ದೇವಸ್ಥಾನದ ಎದುರುಗಡೆ ಇಂಥ ಅನೇಕ ಸ್ಥಳಗಳಲ್ಲಿ ನಿರ್ಗತಿಕರಿಗೆ ಬಡವರಿಗೆ ಮನೆಯಲ್ಲಿ ತಯಾರಿಸಿದ ಆಹಾರದ ಪ್ಯಾಕೆಟಗಳನ್ನು ಕೊಡಲಾಯಿತು.
ಈ ಸಂದರ್ಭದಲ್ಲಿ ಅಧ್ಯಕ್ಷ ಮೋದಿನ ಪಟೇಲ್ ಅಣಬಿ, ಹೈದರ್ ಅಲಿ ಇನಮಾದಾರ, ಶ್ರೀಮತಿ ಸೈರಾ ಬಾನು, ಅಬ್ದುಲ್ ವಾಹಿದ್, ಶ್ರೀಮತಿ ರಾಬಿಯಾ ಶಿಕಾರಿ, ಶ್ರೀಮತಿ ಗೀತಾ ಮುದುಗಲ್, ಬಾಬಾ ಫಕ್ರುದ್ದಿನ್, ಶೇಕ್ ಮೋಹಿನ್, ಯುನುಸ್ ಪಟೇಲ್, ಶ್ರೀಮತಿ ಆಯೇಶ ಶಿಕಾರಿ, ತಹೇನಿಯತ್ ಫಾತೀಮಾ, ಶ್ರೀಮತಿ ಶ್ವೇತಾ ಇದ್ದರು.