ಬಡ ಸರ್ಕಾರಿ ವಿದ್ಯಾರ್ಥಿಗಳಿಗೆ ಬ್ಯಾಗ್ ವಿತರಣೆ

ಮಾನ್ವಿ,ಸೆ.೧೫- ತಾಲೂಕ ಆಡಳಿತದಿಂದ ನಡೆದ ಸಂವಿಧಾನ ಪೀಠಿಕೆ ಓದುವ ದಿನಾಚರಣೆ ಕಾರ್ಯಕ್ರಮದಲ್ಲಿ ಸರ್ವಧರ್ಮ ಸೇವಾ ವೇಲ್ಫರ ಟ್ರಸ್ಟ್ ಅಧ್ಯಕ್ಷ ಹನುಮಂತ ಕೋಟೆ ಇವರು ಸರ್ಕಾರಿ ಶಾಲೆಯ ಬಡ ವಿದ್ಯಾರ್ಥಿಗಳಿಗೆ ಉಚಿತ ಶಾಲೆ ಬ್ಯಾಗ್‌ಗಳನ್ನು ವಿತರಣೆ ಮಾಡಿದರು.
ನಂತರ ಮಾತಾನಾಡಿದ ಅವರು ಈಗಾಗಲೇ ನಮ್ಮ ಸಂಸ್ಥೆಯಿಂದ ಈಗಾಗಲೇ ನೂರಾರು ವಿದ್ಯಾರ್ಥಿಗೆ ಉಚಿತ ಬ್ಯಾಗ್ ವಿತರಣೆ ಮಾಡಲಾಗಿದ್ದು ಡಾ ಬಿ ಅಂಬೇಡ್ಕರ್ ಪೀಠಿಕೆ ದಿನಾಚರಣೆ ಅಂಗವಾಗಿ ಕೆಲ ಬಡ ವಿದ್ಯಾರ್ಥಿಗಳಿಗೆ ಆಯ್ಕೆ ಮಾಡಿ ಉಚಿತವಾಗಿ ನೀಡಲಾಗಿದೆ ಮುಂದಿನ ದಿನದ ಕೂಡ ಈ ನಿಸ್ವಾರ್ಥ ಸೇವೆಯನ್ನು ಮುಂದುವರೆಸುತ್ತೇನೆ ಎಂದರು. ಈ ಸಂದರ್ಭದಲ್ಲಿ ಅನೇಕರು ಇದ್ದರು..