ಬಡ ವಿಪ್ರವಿದ್ಯಾರ್ಥಿನಿಲಯ ಆರಂಭಿಸಲು ಮನವಿ

ಕಲಬುರಗಿ, ಜ 4: ಜೇವರಗಿ ಕಾಲೋನಿಯ ಶ್ರೀರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಪ್ರತಿ ತಿಂಗಳು ಜ್ಞಾನಸತ್ರ ಕಾರ್ಯಗಳು ಆಯೋಜಿಸಬೇಕು ಮತ್ತು ಶ್ರೀಮಠದ ನಿವೇಶನದಲ್ಲಿ ಬಡ ವಿಪ್ರ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ನಿಲಯ ಪ್ರಾರಂಭಿಸಬೇಕು ಎಂದು ಅಖಿಲ ಭಾರತೀಯ ಬ್ರಾಹ್ಮಣ ಮಹಾಸಂಘದ ಅಧ್ಯಕ್ಷ ರವಿ ಲಾತೂರಕರ ಮನವಿ ಮಾಡಿದರು.ಜೇವರಗಿ ಕಾಲೋನಿಯ ಶ್ರೀರಾಘವೇಂದ್ರ ಸ್ವಾಮಿಗಳ ಮಠದ ಕಾರ್ಯಕಾರಿ ಸಮಿತಿಯ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ನರೇಂದ್ರಾಚಾರ್ ಫಿರೋಜಾಬಾದಕರ್ ಅವರಿಗೆ ಅ.ಭಾ ಬ್ರಾಹ್ಮಣ ಮಹಾಸಂಘದ ಸನ್ಮಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಅತ್ಯಂತ ಧಾರ್ಮಿಕರು ಮತ್ತು ಸಾತ್ವಿಕರಾದ ನರೇಂದ್ರಾಚಾರ್ ಕಾರ್ಯಕಾರಿ ಸಮಿತಿ ಅಧ್ಯಕ್ಷರಾಗಿರುವುದು ನಮ್ಮೆಲ್ಲರಿಗೂ ಸಂತೋಷ ಮತ್ತು ಹೆಮ್ಮೆಯ ಎನಿಸಿದೆ ಎಂದರು.ಬ್ರಾಹ್ಮಣ ಮಹಾಸಂಘದ ಪ್ರಧಾನ ಕಾರ್ಯದರ್ಶಿ ವಿನುತ ಜೋಶಿ, ಪ್ರಮುಖರಾದ ಮುರಳೀಧರ ಕರಲಗಿಕರ್, ವೆಂಕಟೇಶ್ ಕುಲಕರಣಿ ಚಿತ್ತಾಪುರ, ಶಶಾಂಕ್ ಪೂಜಾರಿ, ವಿನಾಯಕ ಕುಲಕರ್ಣಿ, ಲಕ್ಷ್ಮಣ ಕುಲಕರ್ಣಿ, ಅರ್ಚಕರಾದ ಪಂಡಿತ ಗಿರೀಶ್ ಆಚಾರ್ಯ ಅವಧಾನಿ ಅವರು ಉಪಸ್ಥಿತರಿದ್ದರು.