ಬಡ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ನೆರವಾಗಿ

ಇಂಡಿ:ಜು.26:ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸನ್ಮಾನಿಸುವ ಜತೆಗೆ ಅರ್ಥಿಕವಾಗಿ ಹಿಂದುಳಿದಿರುವ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ನೆರವಾಗಬೇಕು ಎಂದು ವಿಶ್ರಾಂತ ಪ್ರಾದ್ಯಾಪಕ ಎಂ.ಎಸ್.ಹೈಯ್ಯಾಳಕರ ಹೇಳಿದರು.

ಪಟ್ಟಣದ ಜಗಜೀವನರಾಮ ಭವನದಲ್ಲಿ ಜಿಲ್ಲಾ ಮಾದಿಗ ನೌಕರರ ಕ್ಷೇಮಾಭಿವೃದ್ಧಿ ಸಂಘ, ತಾಲೂಕಾ ಘಟಕ ಇಂಡಿಯವರು ಆಯೋಜಿಸಿದ ಇಂಡಿ ತಾಲೂಕಾ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಹಾಗೂ ನಿವೃತ್ತ ನೌಕರರಿಗೆ ಸನ್ಮಾನ ಸಮಾರಂಭದಲ್ಲಿ ಮಾತನಾಡುತ್ತಿದ್ದರು.

ಬೆಂಗಳೂರದ ಅಭಿಯಂತರ ರಾಚಪ್ಪ ಖೇಡಗಿ ಮಾತನಾಡಿ ಪರೀಕ್ಷೆಗಳಲ್ಲಿ ಅತಿ ಹೆಚ್ಚು ಅಂಕಗಳನ್ನು ಗಳಿಸಿದ ವಿದ್ಯಾರ್ಥಿಗಳನ್ನು ಮಾತ್ರ ಗುರುತಿಸಿ ಸನ್ಮಾನಿಸಲಾಗುತ್ತದೆ. ಹಾಗೆಯೇ ಪರೀಕ್ಷೆಗಳಲ್ಲಿ ಹಲವು ವಿದ್ಯಾರ್ಥಿಗಳು ಅತೀ ಹೆಚ್ಚು ಅಂಕ ಪಡೆದು ಉತ್ತೀರ್ಣರಾಗಿದ್ದರೂ ಅವರಿಗೆ ವಿದ್ಯಾಬ್ಯಾಸವನ್ನು ಮುಂದೆ ವರೆಸುವ ಪರಿಸ್ಥಿತಿ ಇರುವದಿಲ್ಲ. ಅಂತಹ ವಿದ್ಯಾರ್ಥಿಗಳನ್ನು ಗುರುತಿಸಿ ಪ್ರೋತ್ಸಾಹಿಸಬೇಕು ಎಂದರು.

ಇಓ ತಾ.ಪಂ ಚಡಚಣದ ಸಂಜಯ ಖಡಗೇಕರ ಮಾತನಾಡಿ ಎಲ್ಲರೂ ಪರಸ್ಪರ ಸಹಕಾರ ಮನೋಭಾವದಿಂದ ಕೈ ಜೋಡಿಸಿದಾಗ ಮಾತ್ರ ಸಮಾಜವನ್ನು ಮುಖ್ಯವಾಹಿನಿಗೆ ತರಬಹುದು ಎಂದು ಹೇಳಿದರು.

ಜ್ಯೋತಿ ಬೆಳಗಿಸಿದ ಮೈಸೂರಿನ ನಿವೃತ್ತ ವೈದ್ಯಾಧಿಕಾರಿ ಡಾ. ರಮೇಶ ಜೋವೂರ, ಚಾಮರಾಜ ದೊಡಮನಿ, ಎಚ್.ಎಲ್.ದೊಡಮನಿ, ಜಟ್ಟೆಪ್ಪ ಮಾದರ, ಮಲ್ಲಿಕಾರ್ಜುನ ಹಡಲಸಂಗ ಮಾತನಾಡಿದರು.

ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ರಾಜ್ಯಕ್ಕೆ ಪ್ರಥಮ ರ್ಯಾಂಕ ಪಡೆದ ಅಮೀತ ಮಾದರ ಸೇರಿದಂತೆ 60 ವಿದ್ಯಾರ್ಥಿಗಳನ್ನು ಮತ್ತು ನಿವೃತ್ತ ಹೊಂದಿದ ನೌಕರರನ್ನು ಸನ್ಮಾನಿಸಲಾಯಿತು.

ಮೇತ್ರಿ ಸರ್ ಸೋಲಾಪುರ, ಸಾಗರ ಬಂಡೆನವರ, ಯಲ್ಲಪ್ಪ ಮಾದರ, ಪ್ರಲ್ಹಾದ ಬಗಲಿ, ಯಲಗೊಂಡ ಓಲೆಕಾರ, ಶರಣಪ್ಪ ಮಾದರ, ಅರವಿಂದ ಜಿಗಜಿಣಗಿ, ಮಹಾದೇವ ಕಟ್ಟಿಮನಿ, ಚೇತನ ಅಲಗೂರ, ವಿಜಯಕುಮಾರ ಡೊಳ್ಳಿನ, ಗಾಂಧಿ ಮ್ಯಾಕೇರಿ, ಜಟ್ಟೆಪ್ಪ ದೊಡಮನಿ, ಜಟ್ಟೆಪ್ಪ ಹಲಸಂಗಿ, ಶಿವಶರಣ ಖೇಡಗಿ ಮತ್ತಿತರಿದ್ದರು.