ಬಡ ವಿದ್ಯಾರ್ಥಿಗಳ ಪಾಲಿನ ಆಪತ್ಬಾಂಧವರಾಗಿದ್ದರು ರೇಷ್ಮಿ: ಡಾ. ಸಂಗಣ್ಣ

ಅಫಜಲಪುರ:ನ.2: ಉನ್ನತ ಶಿಕ್ಷಣ ಎನ್ನುವುದು ಬಡ ವಿದ್ಯಾರ್ಥಿಗಳಿಗೆ ಗಗನ ಕುಸುಮವಾಗಿದ್ದ ಕಾಲದಲ್ಲಿ ರೇಷ್ಮಿ ಶಿಕ್ಷಣ ಸಂಸ್ಥೆ ಕಟ್ಟಿ ಬಡ ವಿದ್ಯಾರ್ಥಿಗಳ ಪಾಲಿಗೆ ದಿ. ನಾಗೇಂದ್ರ ರೇಷ್ಮಿ ಅವರು ಆಪತ್ಬಾಂಧವರಾಗಿದ್ದರು ಎಂದು ಸಂಸ್ಥೆಯ ಹಳೆಯ ವಿದ್ಯಾರ್ಥಿ, ಕರ್ನಾಟಕ ಜಾನಪದ ಪರಿಷತ್ ತಾಲೂಕು ಅಧ್ಯಕ್ಷ ಡಾ. ಸಂಗಣ್ಣ ಎಂ. ಸಿಂಗೆ ಹೇಳಿದರು.

ಅಫಜಲಪುರ ಪಟ್ಟಣದ ಸಾಂಚಿ ಪದವಿ ಕಾಲೇಜಿನ ಕಚೇರಿಯಲ್ಲಿ ದಿ. ನಾಗೇಂದ್ರ ರೇಷ್ಮಿ ಅವರ 2ನೇ ಪುಣ್ಯಸ್ಮರಣೆ ಪ್ರಯುಕ್ತ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡಿದ ಅವರು ರೇಷ್ಮಿ ಸಂಸ್ಥೆಯನ್ನು ವಿಶ್ವವಿದ್ಯಾಲಯ ಮಟ್ಟಕ್ಕೆ ಬೆಳೆಸಬೇಕೆನ್ನುವ ಅವರ ಕನಸು ಹೊತ್ತಿದ್ದರು. ಅವರ ಅಗಲಿಕೆಯ ನಂತರ ಸಂಸ್ಥೆಯ ಚುಕ್ಕಾಣಿ ಹಿಡಿದಿರುವ ಅವರ ಮಗ ಕೂಡ ಬಡ ವಿದ್ಯಾರ್ಥಿಗಳಿಗೆ ಆಸರೆಯಾಗಿ, ಗುಣಮಟ್ಟದ ಶಿಕ್ಷಣ ನೀಡುತ್ತಾ ರಾಜ್ಯದಲ್ಲಿ ಪ್ರತಿಷ್ಠಿತ ಸಂಸ್ಥೆ ನಿರ್ಮಾಣವಾಗುವಲ್ಲಿ ಶ್ರಮ ವಹಿಸಲಿ ಎಂದರು.

ದಿ. ನಾಗೇಂದ್ರ ರೇಷ್ಮಿ ಅವರ ಅಭಿಮಾನಿಗಳಾದ ಪೀರಸಾಬ್ ಕಲಾಲ್, ಸುರೇಶ ರಾಠೋಡ, ಚಂದ್ರಕಾಂತ ಸಿಂಗೆ ಮಾತನಾಡಿ ಸಣ್ಣ ಸಂಸ್ಥೆಯನ್ನು ವಿಶಾಲ ಸಂಸ್ಥೆಯಾಗಿ ಕಟ್ಟಿದ ಕೀರ್ತಿ ನಾಗೇಂದ್ರ ರೇಷ್ಮಿ ಅವರಿಗೆ ಸಲ್ಲುತ್ತದೆ. ಅವರಿಂದ ನಾವು ಪ್ರಭಾವಿತರಾಗಿ ಸಾಕಷ್ಟು ಕಲಿತಿದ್ದೇವೆ. ಚಿಕ್ಕವರು, ದೊಡ್ಡವರೆಂಬ ಭೇದವಿಲ್ಲದೆ ಎಲ್ಲರನ್ನೂ ಸಮಾನವಾಗಿ ಕಾಣುತ್ತಿದ್ದರು, ಸದಾ ಬಡ ವಿದ್ಯಾರ್ಥಿಗಳ ಕಣ್ಣಿರೊರೆಸುವ ಕೆಲಸ ಮಾಡುತ್ತಿದ್ದರು. ಅಂತಹ ಸಹೃದಯಿಗಳು ಬಹಳ ಬೇಗ ಅಗಲಿದ್ದು ನೋವಿನ ಸಂಗತಿಯಾಗಿದೆ ಎಂದರು.

ಈ ಸಂದರ್ಭದಲ್ಲಿ ರವಿಕಿರಣ ಬೆಟ್ಟಜೇವರ್ಗಿ, ಗೌತಮ ಸಕ್ಕರಗಿ, ಯಲ್ಲಾಲಿಂಗ ಪೂಜಾರಿ, ಸದ್ದಾಮಹುಸೆನ್ ನಾಕೇದಾರ, ಲಕ್ಷ್ಮಣ ಆನೂರ, ರಾಜಕುಮಾರ ಬಳೂರ್ಗಿ, ಪ್ರಕಾಶ ಬಸ್ಸಿನಕರ, ಮಹಾಂತೇಶ ವಠಾರ ಸೇರಿದಂತೆ ಅನೇಕರು ಇದ್ದರು.