
ಔರಾದ :ಸೆ.2: ತಾಲೂಕಿನ ಬಡ ವಿದ್ಯಾರ್ಥಿನಿಯರ ಉಜ್ವಲ ಭವಿಷ್ಯಕ್ಕಾಗಿ 5 ನೇ ತರಗತಿಯ ವಿದ್ಯಾರ್ಥಿಗಳಿಗಾಗಿ ಆದಿತ್ಯ ಕೋಚಿಂಗ್ ಕ್ಲಾಸೆಸ್ ವತಿಯಿಂದ ನವೋದಯ ಪರೀಕ್ಷಾ ಪೂರ್ವ ತರಬೇತಿ ನಡೆಸಲಾಗುತ್ತಿದೆ.
ತಾಲೂಕಿನ ಒಟ್ಟು 10 ಜನ ಬಡ ವಿದ್ಯಾರ್ಥಿನಿಯರಿಗೆ ಉಚಿತ ವಸತಿ ಸಹಿತ ತರಬೇತಿ ನೀಡಲಾಗುತ್ತದೆ. ಪ್ರತಿಭಾವಂತ ಅನುಭವಿ ಶಿಕ್ಷಕರಿಂದ ಭೋಧನೆ ಮತ್ತು ಮಕ್ಕಳ ವೈಯಕ್ತಿಕ ಕಾಳಜಿ ವಹಿಸಲಾಗುವುದು ಎಂದು ಟ್ರಷ್ಟ ಅಧ್ಯಕ್ಷ ಶರಣಬಸಪ್ಪಾ ಕಾರಮುಂಗೆ ತಿಳಿಸಿದ್ದಾರೆ.
5 ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿನಿಯರು 2023 – 24 ನೇ ಸಾಲಿನ ನವೋದಯ ಪರೀಕ್ಷೆಗೆ ಅರ್ಜಿ ಸಲ್ಲಿಸಿದವರಿಗೆ ಮಾತ್ರ ಅವಕಾಶ ನೀಡಲಾಗುವುದು. ತಾಲ್ಲೂಕಿನ ಬಡ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಗುಣಮಟ್ಟ ಹೆಚ್ಚಿಸಲು ಹಾಗೂ ಬಡ ವಿದ್ಯಾರ್ಥಿಗಳ ಉತ್ತಮ ಭವಿಷ್ಯ ರೂಪಿಸಿಕೊಳ್ಳುವ ನಿಟ್ಟಿನಲ್ಲಿ ಉಚಿತ ತರಬೇತಿ ನೀಡಲಾಗುತ್ತಿದೆ.
ಆಸಕ್ತರು ಫೆÇೀಷಕರ ಜೊತೆಯಲ್ಲಿ ದಾಖಲೆಗಳೊಂದಿಗೆ ಕೋಚಿಂಗ್ ಕ್ಲಾಸಸ್ ಭೇಟಿ ನೀಡಬೇಕು ಮೊದಲು ಬಂದವರಿಗೆ ಆದ್ಯತೆ ನೀಡಲಾಗುವುದು ಎಂದು ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ದೂ. 7760094900 ಚನ್ನಬಸವ ಮೊಕ್ತೆದಾರ. ಹಾಗೂ ದೂ. 9449577031 ಸಂಪರ್ಕಿಸಬಹುದು ಎಂದು ತಿಳಿಸಿದ್ದಾರೆ.