ಬಡ ರೋಗಿಗಳಿಗೆ ಉಚಿತ ಚಿಕಿತ್ಸೆ ನೀಡುವುದು ಮಾನವೀಯ ಸೇವೆ: ಶೇಷರಾವ್ ಮಾನೆ

ವಿಜಯಪುರ, ಮಾ.23-ನಗರದ ಖ್ಯಾತ ಮಳಗಿ ಆಸ್ಪತ್ರೆಯಿಂದ ಚಿಕ್ಕ ಮಕ್ಕಳ ಹಾಗೂ ಸ್ತ್ರೀ ರೋಗ ತಜ್ಞರಿಂದ ಉಚಿತ ತಪಾಸಣಾ ಶಿಬಿರ ಮತ್ತು ಉಚಿತ ಔಷಧಿ ವಿತರಣಾ ಕಾರ್ಯಕ್ರಮ ವಾರ್ಡ ನಂ. 16 ಕಾಯಕ ನಗರ ಕನ್ನಡ ಗಂಡು ಮಕ್ಕಳ ನಂ. 27 ರ ಶಾಲಾ ಆವರಣದಲ್ಲಿ ಜರುಗಿತು.
ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾಧ್ಯಕ್ಷ ಶೇಷರಾವ್ ಮಾನೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ಇಂದಿನ ದಿನಮಾನದಲ್ಲಿ ಹೈಟೆಕ್ ಖಾಸಗಿ ಆಸ್ಪತ್ರೆಗಳು ಹಣ ದೋಚಲು ನಿಂತಿವೆ. ಇಂತಹ ಸಂದರ್ಭದಲ್ಲಿ ಕಡು ಬಡವರು ಚಿಕಿತ್ಸೆಯಿಂದ ವಂಚಿತರಾಗಿ ಬೆಲೆ ತೆತ್ತಲಾಗದೆ ದೂರ ಉಳಿದಿರುವುದು ದುರ್ದೈವ ಎನ್ನಲಾಗದು. ಪ್ರಜೆಗಳನ್ನು ಸಮನಾಗಿ ಕಾಣದ ಸರಕಾರದ ತಾರತಮ್ಯವೇ ಇದಕ್ಕೆ ಕಾರಣವಾಗಿದೆ.
ಆದರ್ಶ ಜೀವಿ ಡಾ. ಮಳಗಿ ದಂಪತಿಗಳು ಉಚಿತ ತಪಾಸಣಾ ಶಿಬಿರಗಳನ್ನು ಹಮ್ಮಿಕೊಂಡು ಕಡುಬಡ ರೋಗಿಗಳನ್ನು ಉಚಿತ ಚಿಕಿತ್ಸೆ ನೀಡಿ ಮಾನವೀಯತೆ ಮೆರೆದಿದ್ದು ಶ್ಲಾಘನೀಯವಾಗಿದೆ. ಎಲ್ಲ ವೈದ್ಯರು 3-4 ಶಿಬಿರಗಳನ್ನು ನಡೆಸುವದರಿಂದ ಇಂದಿನ ಸಮಾಜದಲ್ಲಿ ವೈದ್ಯರು ಎರಡನೆಯ ದೇವರು ಎಂಬ ಗಾದೆ ಮಾತಿಗೆ ನಿಜವಾದ ಅರ್ಥ ಕಲ್ಪಿಸಿಕೊಟ್ಟಂತಾಗುತ್ತದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಡಾ. ಮಳಗಿ ಮಾತನಾಡಿ ಬಡವರಿಗೆ ಅನುಕೂಲವಾಗಲು ನಮ್ಮ ಆಸ್ಪತ್ರೆಯಿಂದ ಏಪ್ರೀಲ ಮೊದಲ ವಾರದಿಂದ ಕಡು ಬಡವರು ವಾಸಿಸುವ ಪ್ರದೇಶಗಳಾದ ಗಾಂಧಿ ನಗರ, ಬಸವನಗರ, ಯೋಗಾಪುರ ಸ್ಪಿನ್ನಿಂಗ ಮಿಲ್ ತಾಂಡಾ ಮುಂತಾದ ಪ್ರದೇಶಗಳಲ್ಲಿ ನಮ್ಮ ಉಚಿತ ಚಿಕಿತ್ಸೆಯನ್ನು ನೀಡಿ ಬಡ ರೋಗಿಗಳ ಅನುಕೂಲಕ್ಕಾಗಿ ಉಚಿತ ಶಿಬಿರಗಳನ್ನು ಹಮ್ಮಿಕೊಳ್ಳಲಾಗುವುದು ಎಂದರು.
ಮುಖ್ಯ ಅತಿಥಿಯಾಗಿ ಆನಂದ ಜಂಬಗಿ ಮಾತನಾಡಿ ಡಾ. ಮಳಗಿ ಆಸ್ಪತ್ರೆಯ ಉಚಿತ ಶಿಬಿರದಿಂದ ಕಾಯಕ ನಗರದ ನೂರಾರು ಬಡ ರೋಗಿಗಳ ಹಾಗೂ ಹೆಣ್ಣುಮಕ್ಕಳ ಪ್ರಸೂತಿ ಚಿಕಿತ್ಸೆಯಿಂದ ಅನುಕೂಲವಾಗಿದೆ ಅವರಿಗೆ ನಮ್ಮ ಕಾಯಕ ನಗರ ಬಡಾವಣೆಯಿಂದ ಧನ್ಯವಾದಗಳನ್ನು ಅರ್ಪಿಸುತ್ತೇವೆ ಎಂದರು.
ಅತಿಥಿಗಳಾದ ಶರತ ರಜಪೂತ, ಉದ್ಯಮಿ ಸಲೀಮ ಸಾಂಗ್ಲಿಕರ ಮಾತನಾಡಿ ಇಂತಹ ಶಿಬಿರಗಳನ್ನು ನಡೆಸುವುದಾದರೆ ಯುವಕ ಮಿತ್ರರು ಸಂಪೂರ್ಣ ಬೆಂಬಲ ನೀಡುವುದಾಗಿ ಹೇಳಿದರು.
ವೇದಿಕೆ ಮೇಲೆ ನಬಿರಸೂಲ ಚೌಧರಿ, ರಾಜು ರಜಪೂತ, ಶಫೀಕ ಮನಗೂಳಿ, ಮಂಜು ಕಡಪಟ್ಟಿ, ಸೋಹೆಲ್ ಕೋತವಾಲ್, ಗೀತಾ ಬೀಳಗಿ, ಸರೋಜನಿ ಆಹೇರಿ, ಅಸ್ಲಮ ಸಾಂಗ್ಲಿಕರ ಉಪಸ್ಥಿತರಿದ್ದರು.
ಪ್ರೇವi ಮೇತ್ರಿ ನಿರುಪಿಸಿದರು. ವಸಂತರಾವ ಕುಲಕರ್ಣಿ ಸ್ವಾಗತಿಸಿದರು. ಕೆ.ಕೆ. ಬನ್ನಟ್ಟಿ ವಂದಿಸಿದರು.