ಬಡ ಮುನ್ನಾಬಾಯ್ ಆಯ್ಕೆ ಮಾಡಿದುಡ್ಡಿದ್ದವರಿಗೆ ಪಾಠ ಕಲಿಸಿ: ಕುಮಾರಸ್ವಾಮಿ


(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಏ.11: ಈ ಕ್ಷೇತ್ರದಲ್ಲಿ ಜೆಡಿಎಸ್ ನಿಂದ ಸ್ಪರ್ಧಿಸಲಿರುವ ಮುನ್ನಾಬಾಯ್ ಬಡ ಅಭ್ಯರ್ಥಿಯಾಗಿದ್ದು. ಇವರ ವಿರುದ್ದ ಸ್ಪರ್ಧಿಸುವ ಇತರ ಪಕ್ಷಗಳ ಕೋಟ್ಯಾಧೀಶರಿಗೆ ಪಾಠಕಲಿಸಿ ಎಂದು ಜೆಡಿಎಸ್ ವರಿಷ್ಡ,ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಮತದಾರರಿಗೆ ಮನವಿ ಮಾಡಿದರು.
ಅವರು ನಿನ್ನೆ ನಗರ ವಿಧಾನ ಸಭಾ ಕ್ಷೇತ್ರದ ಹೊನ್ನಳ್ಳಿ ರಸ್ತೆಯ ಗುಗ್ಗರಹಟ್ಟಿಯ ಕೃಷ್ಷ ಕಾಲೋನಿಯಲ್ಲಿ ಹಮ್ಮಿಕೊಂಡಿದ್ದ  ಪಕ್ಷದ ಚುನಾವಣಾ ಸಮಾವೇಶವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.
ಇಲ್ಲಿ ಹಣ ಇದ್ದವರು ಕುಕ್ಕರ್, ಸೀರೆ, ಮತ್ತೇನೋ ಕೊಡುತ್ತಾರೆಂದು ನಿಮ್ಮ ಮತ ಮಾರಿಕೊಳ್ಳಬೇಡಿ ಉತ್ತಮ ವ್ಯಕ್ತಿ ಮುನ್ನಾಬಾಯ್ ಅವರನ್ನು ಆಯ್ಕೆ ಮಾಡಿ ಎಂದರು.
ಪಂಚರತ್ನ ಯೋಜನೆಗಳ‌ ಬಗ್ಗೆ ವಿವರಿಸುತ್ತ. ಪ್ರಸಕ್ತ ಚುನಾವಣೆಯಲ್ಲಿ ನಮ್ಮ ಜೆಡಿಎಸ್ ಪಕ್ಷವನ್ನು ಅಧಿಕಾರಕ್ಕೆ ತಂದಲ್ಲಿ ರಾಜ್ಯದ 6006 ಗ್ರಾಮ ಪಂಚಾಯ್ತಿ ಮತ್ತು ನಗರ ಪ್ರದೇಶದ ಪ್ರತಿ ವಾರ್ಡಿನಲ್ಲಿ ಒಂದು ಕನ್ನಡ ಮತ್ತು ಆಂಗ್ಲ ಮಾಧ್ಯಮದ ಉನ್ನತ ದರ್ಜೆಯ ಶಾಲೆಯನ್ನು ಆರಂಭಿಸಿ ಉತ್ತಮ ಶಿಕ್ಷಣ ನೀಡಲಿದೆಂದರು.
ಅದೇರೀತಿ, ಅಸರೋಗ್ಯ, ಸೂರು, ರೈತ ಪರವಾದ ಯೋಜನೆ, ಯುವಕರಿಗೆ ಉದ್ಯೋಗದ ಬಗ್ಗೆ ಭರವಶೆ ನೀಡಿದರು.
ಬಳ್ಳಾರಿ ಕಲ್ಯಾಣ ಕರ್ನಾಟಕಕ್ಕೆ ಸೇರಿದೆ. ಆದರೆ ಇನ್ನೂ ಇದು ಅಭಿವೃದ್ಧಿ ದೃಷ್ಟಿಯಲ್ಲಿ ಕಲ್ಯಾಣ ಕಂಡಿಲ್ಲ. ಇನ್ನೂ ಅನೇಕರು ಸೂರಿಲ್ಲದೆ ಬದುಕುತ್ತಿದ್ದಾರೆ ಅಂತಹವರಿಗೆ ಸೂರು ಕಲ್ಪಿಸುವಿದೇ ನಮ್ಮ ಗುರಿ ಎಂದರು.
ಆಟೋ ನಗರದ ನಿವಾಸಿಗಳು ಪಟ್ಟಾ ಕೊಡುವ ಭರವಶೆ ನೀಡಿದರು.
ನಿಯೋಜಿತ ಅಭ್ಯರ್ಥಿ ಮುನ್ನಾಬಾಯ್ ಮಾತನಾಡಿ, ಈ ಹಿಂದೆ ಚುನಾವಣೆಯಲ್ಲಿ ಸ್ಪರ್ಧೆ ಮಾಡಿ ಬಹಳಷ್ಟು ಕಳೆದುಕೊಂಡಿದ್ದೆ. ಈಗ ಕುಮಾರಣ್ಣ ಮತ್ತೆ ಸ್ಪರ್ಧೆ ಮಾಡಲು ಟಿಕೆಟ್ ನೀಡಿದ್ದಾರೆ.  ನಾನು ಬಡವ,ಸದಾ ನಿಮ್ಮ ಸೇವೆಗೆ ಲಭ್ಯವಾಗುವ ವ್ಯಕ್ತಿ ನನಗೆ ಮತ ನೀಡಿ ಗೆಲ್ಲಿಸಿ ಎಂದು ಮತದಾರರಿಗೆ ಮನವಿ ಮಾಡಿದರು.
ಸಮಾವೇಶದಲ್ಲಿ ಪಕ್ಷದ  ರಾಜ್ಯ ಅಲ್ಪ ಸಂಖ್ಯಾತ ಘಟಕದ ಅಧ್ಯಕ್ಷ ಶಂಶುಲ್ಲಾಖಾನ್ ಎಸ್ಟಿ ಘಟಕದ ಅಧ್ಯಕ್ಷ ಶಾಸಕ ರಾಜ ವೆಂಕಟಪ್ಪ ನಾಯಕ ದೊರೆ, ಮಾಜಿ ಸಚಿವ ಎನ್ ಎಂ ನಬಿ. ಜಿಲ್ಲಾ ಅಧ್ಯಕ್ಷ ಸೋಮಲಿಂಗನಗೌಡ, ರಾಜ್ಯ ಪ್ರಧಾನ ಕಾರ್ಯದರ್ಶಿ ಮೀನಳ್ಳಿ ತಾಯಣ್ಣ ಮೊದಲಾದವರು ಇದ್ದರು.
ದುರುಗಪ್ಪ ತಳಾವರ ಸ್ಬಾಗತಿಸಿ ಪ್ರಸ್ತಾವಿಕವಾಗಿ ಮಾತನಾಡಿದರೆ. ಡಿ.ವಿನೋದ್ ಕಾರ್ಯಕ್ರಮ ನಿರೂಪಿಸಿದರು.
ಇದಕ್ಕೂ ಮುನ್ನ ಗುಗ್ಗರಹಟ್ಟಿ ಮೇನ್ ರೋಡಿನಲ್ಲಿ ತೆರದ ವಾಹನದಲ್ಲಿ ಬಂದ ಅವರನ್ನು ಬೃಹತ್ ಹೂ ಮಾಲೆ, ಹಣ್ಣಿಮಾಲೆ ಹಾಕಿ ಹೂ ಮಳೆ ಸುರಿಸುತ್ತ, ಸಾಂಸ್ಕ್ರತಿಕ ಕಲಾ ತಂಡಗಳು, ಕುಂಬ ಕಳಸಗಳ ಮೂಲಕ  ಸ್ವಾಗತಿಸಿ ಮೆರವಣಿಗೆ ನಡೆಯಿತು.