ಬಡ ಮಾರೆಪ್ಪನಗೆ ಸೂರು ಕಲ್ಪಿಸಿದ ಬಳ್ಳಾರಿ ಮುತ್ತುರಾಜ್ ಗೆಳೆಯರ ಬಳಗ

ಎನ್.ವೀರಭದ್ರಗೌಡ
ಬಳ್ಳಾರಿ,ಮಾ.30- ಸಿನಿಮಾ ನಟರ ಅಭಿಮಾನಿಗಳು. ನಟರ ಚಿತ್ರ ಬಿಡುಗಡೆ, ಬರ್ತಡೆ ಮೊದಲಾದ ಸಂದರ್ಭದಲ್ಲಿ ಸಾವಿರಾರು ರೂಗಳನ್ನು ವೆಚ್ಚ ಮಾಡುತ್ತಾರೆ.
ಆದರೆ ಗಣಿ ನಾಡು ಬಳ್ಳಾರಿಯಯ ನಟ ಪುನೀತ್ ಅಭಿಮಾನಿಗಳಿಂದ ಕೂಡಿರುವ ಮುತ್ತುರಾಜ್ ಅಭಿಮಾನಿಗಳ ಬಳಗ ಬಡ ಕುಟುಂಬವೊಂದಕ್ಕೆ ಮನೆ ಕಟ್ಟಿಕೊಟ್ಟು ಮಾನವೀಯತೆ ಮೆರೆದಿದ್ದಾರೆ.
ಇಲ್ಲಿನ ತಿಲಕ್ ನಗರ ಮತ್ತು ಸುತ್ತಮುತ್ತಲ ಗ್ರಾಮಗಳಾದ ಸೋಮಸಮುದ್ರ, ಬೆಳಗಲ್ ಕ್ರಾಸ್, ಹಲಕುಂದಿ, ಹೊನ್ನಳ್ಳಿ, ಕಕ್ಕಬೇವಿನಹಳ್ಳಿ ಮೊದಲಾದ ಗ್ರಾಮಗಳ ಯುವಕರು ಸೇರಿ ಕಟ್ಟಿಕೊಂಡಿರುವ ಮುತ್ತುರಾಜ್ ಗೆಳೆಯರ ಬಳಗದಲ್ಲಿ 24 ಜನ‌ ಸದಸ್ಯರಿದ್ದಾರೆ. ಅವರೆಲ್ಲಾ ಶ್ರೀಮಂತರೇನಲ್ಲ. ಎಲ್ಲರೂ‌ ದಿನ ನಿತ್ಯ ಒಂದಿಲ್ಲೊಂದು ಕೆಲಸ ಮಾಡಿ ಜೀವನ ನಡೆಸುತ್ತಿರುವವರು.
ಮೈನ್ಸ್ ಲಾರಿ ಚಾಲಕ ಗೋಪಾಲ್ ಈ ಸಂಘದ ಮುಖಂಡ. ಮೆಹಬೂಬ್ ಬಾಷ ಇನ್ನುಳಿದವರು ಗೋಡೆ ಕಟ್ಟುವ, ತರಕಾರಿ‌ ಮಾರುವ, ಆಟೋ ಓಡಿಸುವ, ವಿಮಾ ಕಂಪನಿಯಲ್ಲಿ ಏಜೆಂಟ್ ಹೀಗೆ ವಿವಿಧ ಕೆಲಸ ಮಾಡುತ್ತಾರೆ.
ಇವರೆಲ್ಲ ರಾಜ್ ಕುಟುಂಬದ ಅಭಿಮಾನಿಗಳು, ಪುನಿತ್ ಅಭಿನಯದ ಚಿತ್ರ ಬಿಡುಗಡೆಯಾದರೆ. ಚಿತ್ರ ಪ್ರದರ್ಶನದ ಥೇಟರ್ ಮುಂದೆ ವಿದ್ಯುತ್ ದೀಪದ ಅಲಂಕಾರ, ಬ್ಯಾನರ್, ಹೂವಿನ ಹಾರಕ್ಕಾಗಿ ಪ್ರತಿಭಾರಿ ಒಂದು ಲಕ್ಷ ರೂ ಗೂ ಹೆಚ್ಚು ಖರ್ಚು ಮಾಡುತ್ತಿದ್ದರು.
ಚಿತ್ರ ಪ್ರದರ್ಶನದ ನಂತರ ಬ್ಯಾನರ್ ನ್ನು ತಮ್ಮ‌ಮನೆ ಬಳಿ ತೆಗೆದುಕೊಂಡು ಒಂದೆಡೆ ಹಾಕುತ್ತಿದ್ದರು. ಇದನ್ನು ಕಂಡ ಬಡ ಕುಂಟುಂಬದ, ಖಾಸಗಿಯಾಗಿ ಗಾರ್ಡ್ ಕೆಲಸ ಮಾಡುವ ಮಾರೆಪ್ಪ. ಬ್ಯಾನರ್ ಕೊಡಿ ನಮ್ಮ ಗುಡಿಸಲು ಸೋರುತ್ತಿದೆ ಎಂದು ಕೇಳಿದ್ದರು.
ಆಗ ಗೋಪಾಲ್ ಅವರು ಮಾರೆಪ್ಪನ‌ ಮನೆ ಬಳಿ ತೆರಳಿ ಅವರ ಸಂಕಷ್ಟ ಕಂಡು. ಆತನ‌ ಕುಟುಂಬಕ್ಕೆ ಶಾಶ್ವತ ಸೂರು ಕಲ್ಪಿಸಲು ತಮ್ಮ ಸ್ನೇಹಿತರ ಬಳಿ ಚರ್ಚಿಸಿದರು.
ನಟಸಾರ್ವಭೌಮ ಚಿತ್ರ ಬಿಡುಗಡೆ ಸಂದರ್ಭದಲ್ಲಿ ವೆಚ್ಚ ಮಾಡಲು ಕೂಡಿಟ್ಟಿದಗದ ಹಣ ಮತ್ತು ಕೆಲ ದಾನಿಗಳಿಂದ ಒಂದಿಷ್ಟು ಹಣ ಸಂಗ್ರಹಿಸಿ ತಮ್ಮ‌ಬಳಗದಿಂದಲೇ ಶ್ರಮದಾನ‌ಮಾಡಿ ಮನೆ ಕಟ್ಟಿ ಮಾರೆಪ್ಪನ‌ ಕುಟುಂಬಕ್ಕೆ ನೀಡಿದ್ದಾರೆ.
ಮನೆ ಉದ್ಘಾಟನೆ ಗೆ ಸಮಾಜ ಕಲ್ಯಾಣ ಸಚಿವ ಶ್ರೀರಾಮುಲು ಆಗಮಿಸಿದ್ದರು. ಇವರ ಕಾರ್ಯ ನೋಡಿ ಶ್ಲಾಘಿಸಿದರು.
ಈ ಸಂದರ್ಭದಲ್ಲಿ ಮಾಜಿ ಶಾಸಕ ಸುರೇಶ್ ಬಾಬು, ಇಲ್ಲಿನ ನಟರಾಜ ಥಿಯೇಟರ್ ಮಾಲೀಕ ಲಕ್ಷ್ಮಿಕಾಂತ ರೆಡ್ಡಿ ಮೊದಲಾದವರು ಭಾಗವಹಿಸಿದ್ದರು.
ಗೋಪಾಲ್ ಮತ್ತವರ ಗೆಳೆಯರ ಬಳಗದ ಕಾರ್ಯವನ್ನು ಶ್ಲಾಘಿಸಿದ್ದಾರೆ
ಎ.1 ರಂದು‌ಬಿಡುಗಡೆಯಾಗುವ ಯುವರತ್ನ ಚಿತ್ರದ ಪ್ರಚಾರಕ್ಕೆ ಬಂದಿದ್ದ ಪುನಿತ್ ರಾಜ್ ಕುಮಾರ್ ಗೆ ಈ ವಿಷಯ ತಿಳಿಸಲು ಆಗಲಿಲ್ಲ ಎನ್ನುತ್ತಿದೆ ಇತರ ಬಳಗ.
ಇವರ ಕಾರ್ಯವನ್ನು ಪುನೀತ್ ಸಹ ಬಂದು ನೋಡಿ ಬೇರೊಂದು ಊರಿನ ಅಭಿಮಾನಿಗಳ ಬಳಗಕ್ಕೆ ಇದರ ಬಗ್ಗೆ ತಿಳಿಸಬೇಕಿದೆ.


ಮಾರೆಪ್ಪ ಕಾಂಪೌಂಡ್ ಒಂದಕ್ಕೆ ಬೊಂಬು ಕಟ್ಟಿ ಗುಡಿಸಲಿನಂತೆ ಮಾಡಿಕೊಂಡು ಕಳೆದ 20 ವರ್ಷಗಳಿಂದ ವಾಸವಾಗಿದ್ದರು. ಅವರು ಬಿಸಲು ಮಳೆ ಗಾಳಿಗೆ ಮೈಯೊಡ್ಡಿ ಬದುಕುವುದನ್ನು ಕಂಡ. ಮನೆ ಕಟ್ಟಲು ಮುಂದಾದೆವು. ಸಿನಿಮಾ ಬಿಡುಗಡೆಯ ದಿನ‌ಮಾಡುವ ವೆಚ್ಚ ಮತ್ತು ಶ್ರಮದಾನದಿಂದ ಇದು ಸಾಧ್ಯವಾಯಿತು.
ಗೋಪಾಲ್. ಮತ್ತುರಾಜ್ ಅಭಿಮಾನಿಗಳ ಬಳಗ ಬಳ್ಳಾರಿ.