ಬಡ ಮಹಿಳೆಯರಿಗೆ ಸೀರೆ ವಿತರಣೆ

ಬೆಂಗಳೂರು:ಜ.೧೫- ಕಾಂಗ್ರೆಸ್ ನಾಯಕಿ ಎಚ್.ಕುಸುಮ ಟೀಂ, ಜಯಕರ್ನಾಟಕ ರಾಜೀವ್‌ಗಾಂಧಿ ನಗರ ಶಾಖೆ ವತಿಯಿಂದ ಭೈರವೇಶ್ವರ ನಗರ, ಸುಂಕದಕಟ್ಟೆ, ರಾಜೀವ್‌ಗಾಂಧಿನಗರ, ಕೆಬ್ಬೆಹಳ್ಳದಲ್ಲಿ ನೂರಾರು ಬಡಕುಟುಂಬಗಳಿಗೆ ಸೀರೆ,ಬೆಡ್‌ಶೀಟ್,ಬೀದಿ ಬದಿಯ ವ್ಯಾಪಾರಿಗಳಿಗೆ ಕೊಡೆವಿತರಣೆ, ಆರೋಗ್ಯ ಕಿಟ್‌ಗಳನ್ನು ವಿತರಿಸಲಾಯಿತು.
ಎಚ್.ಕುಸುi ಮಾತನಾಡಿ ಮಹಾಮಾರಿ ಕೊರೊನಾದಿಂದ ಜನಸಾಮಾನ್ಯರು, ಬಡವರು, ಮಧ್ಯಮವರ್ಗ, ಕೂಲಿಕಾರ್ಮಿಕರು, ಗಾರ್ಮೆಂಟ್ಸ್ ಕಾರ್ಮಿಕರು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದು, ಸರ್ಕಾರ ಅವರ ನೆರವಿಗೆ ದಾವಿಸಬೇಕಾಗಿದೆ. ಲಕ್ಷಾಂತರ ಜನರು ಉದ್ಯೋಗ ಕಳೆದುಕೊಂಡಿದ್ದಾರೆ. ಪದವಿ ಪಡೆದ ಯುವಜನಾಂಗಕ್ಕೆ ಉದ್ಯೋಗ ಸಿಗುತ್ತಿಲ್ಲ.ಪ್ರತಿವರ್ಷ ಮೂರುಕೋಟಿ ಉದ್ಯೋಗ ಕೊಡುತ್ತೀವಿ ಎಂದು ಅಧಿಕಾರಕ್ಕೆ ಬಂದ ಬಿಜೆಪಿಗರು ಉದ್ಯೋಗ ಕಸಿದುಕೊಂಡಿರುವುದೇ ದೊಡ್ಡಸಾಧನೆ ಎಂದರು.
ನೂರುದಿನದಲ್ಲಿ ಪ್ರತಿಯೊಬ್ಬ ಭಾರತೀಯರು ಆರ್ಥಿಕವಗಿ ಸಬಲರಾಗಲಿದ್ದಾರೆ. ವಿದೇಶದಿಂದ ಕಪ್ಪುಹಣ ತಂದು ಪ್ರತಿಯೊಬ್ಬರ ಖಾತೆಗೆ ೧೫ಲಕ್ಷ ಜಮೆಮಾಡುತ್ತೇವೆ. ಪೆಟ್ರೊಲ್, ಡಿಸೆಲ್, ಅಡುಗೆ ಅನಿಲ, ದಿನ ನಿತ್ಯ ಬಳಕೆಯ ಆಹಾರ ಪದಾರ್ಥಗಳ ಬೆಲೆ ಏರಿಕೆಯನ್ನು ಇಳಿಸುತ್ತೇವೆ ಎಂದು ಸುಳ್ಳು ಹೇಳಿ ಕೇಂದ್ರ, ರಾಜ್ಯದಲ್ಲಿ ಅಧಿಕಾರಕ್ಕೆ ಬಂದ ಬಿಜೆಪಿ ಎಲ್ಲವನ್ನು ಮರೆಮಾಚಿ ಮೂರುಪಟ್ಟು ಬೆಲೆ ಏರಿಕೆ ಮಾಡಿರುವುದೇ ದೊಡ್ಡ ಸಾಧನೆ ಎಂದು ರಾಜರಾಜೇಶ್ವರಿನಗರ ನಗರಸಭೆ ಮಾಜಿ ಅಧ್ಯಕ್ಷ ಹನುಮಂತರಾಯಪ್ಪ ಅವರು ಬೀದಿಬದಿಯ ವ್ಯಾಪಾರಿಗಳಿಗೆ ಕೊಡೆವಿತರಣೆ, ಆರೋಗ್ಯ ಕಿಟ್‌ಗಳನ್ನು ವಿತರಣೆ ಮಾಡಿ ಕಿಡಿಕಾರಿದರು.
ಜಯಕರ್ನಾಟಕ ಸಂಘಟನೆಯ ಅಧ್ಯಕ್ಷ ಮದು.ಕೆ.ವಿ, ಕಾರ್ಯಾಧ್ಯಕ್ಷ ರಮೇಶ್.ಬಿ.ಎನ್, ಗೌರವಾಧ್ಯಕ್ಷ ರಾಮಕೃಷ್ಣ, ಶ್ರೀನಿವಾಸ್, ಎಂ.ಸಿ.ರಮೇಶ್, ಮಹದೇವ್, ಮೋಹನ್‌ಕುಮಾರ್ ಮಾತನಾಡಿದರು.
ಚಿತ್ರ:ಕಾಂಗ್ರೆಸ್ ನಾಯಕಿ ಎಚ್.ಕುಸುಮ ಬಡವರಿಗೆ ಸೀರೆ ವಿತರಿಸಿದರು. ಜಯಕರ್ನಾಟಕ ಸಂಘಟನೆ ಮಧು.ಕೆ.ವಿ, ರಮೇಶ್.ಬಿ.ಎನ್, ನಗರಸಭೆ ಮಾಜಿ ಅಧ್ಯಕ್ಷ ಹನುಮಂತರಾಯಪ್ಪ ಇದ್ದಾರೆ.